ETV Bharat / bharat

ಸಂಕಷ್ಟದಲ್ಲಿ ಜನ, ಟೈಮ್‌ಲೈನ್‌ಗೆ ಒಪ್ಪಿಕೊಳ್ಳದ ಸರ್ಕಾರ: ರಾಹುಲ್ ಗಾಂಧಿ ಕಿಡಿ - rahul gandhi tweet

ಸರ್ಕಾರ ಲಸಿಕೆಗಳ ಬಗ್ಗೆ ಯಾವುದೇ ಟೈಮ್‌ಲೈನ್‌ಗೆ ಒಪ್ಪಿಕೊಂಡಿಲ್ಲ ಎಂದು ಸರ್ಕಾರವನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Rahul
Rahul
author img

By

Published : Jul 24, 2021, 11:21 PM IST

ನವದೆಹಲಿ: ಕೇಂದ್ರ ಸರ್ಕಾರ ಲಸಿಕೆಗಳ ಬಗ್ಗೆ ಯಾವುದೇ ಟೈಮ್‌ಲೈನ್‌ಗೆ ಒಪ್ಪಿಕೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸರ್ಕಾರವನ್ನು ಖಂಡಿಸಿದ್ದಾರೆ. ಲಸಿಕೆಗಳು ಎಲ್ಲಿವೆ ಎಂದು ತಿಳಿಯಲು ತಾನು ಪ್ರಯತ್ನಿಸುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

"#WhereAreVaccines" ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ. "ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪೂರ್ಣಗೊಳಿಸಲು ನಿಗದಿತ ಗಡುವು ಇಲ್ಲ" ಎಂಬ ವರದಿಯನ್ನು ಕೂಡಾ ಅವರು ಉಲ್ಲೇಖಿಸಿದ್ದಾರೆ.

ಸಾಂಕ್ರಾಮಿಕ ರೋಗದ ಕ್ರಿಯಾತ್ಮಕ ಮತ್ತು ವಿಕಾಸದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಪೂರ್ಣಗೊಳ್ಳಲು ಈಗ ಯಾವುದೇ ನಿಗದಿತ ಸಮಯವನ್ನು ಸೂಚಿಸಲಾಗುವುದಿಲ್ಲ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದ ಒಂದು ದಿನದ ನಂತರ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ.

18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಫಲಾನುಭವಿಗಳಿಗೆ ಡಿಸೆಂಬರ್ ವೇಳೆಗೆ ವ್ಯಾಕ್ಸಿನ್ ನೀಡುವುದಾಗಿ ನಿರೀಕ್ಷಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.