ಕರೀಂನಗರ (ತೆಲಂಗಾಣ): ಕಳೆದ ವರ್ಷ ಕೊರೊನಾ ಆರಂಭದಿಂದಲೂ ಒಂದಲ್ಲೊಂದು ರೀತಿಯಲ್ಲಿ ಬಡವರು, ನಿರ್ಗತಿಕರು, ವಲಸಿಗರಿಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಅವರನ್ನು ಜನರು ದೇವರಂತೆ ನೋಡುತ್ತಿದ್ದಾರೆ. ವಿವಿಧ ರೀತಿಯಲ್ಲಿ ಅಭಿಮಾನಿಗಳು ರಿಯಲ್ ಹೀರೋ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಟನ್ ಅಂಗಡಿಗೆ ಸೋನು ಸೂದ್ ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ಫುಡ್ ಫ್ರಂ ಸೂದ್ ಹೆಸರಿನಲ್ಲಿ ನಿತ್ಯ 5 ಸಾವಿರ ಜನರಿಗೆ ಹೊಟ್ಟೆ ತುಂಬಿಸುತ್ತಿರುವ ಸೋನು ಟ್ರಸ್ಟ್
ತೆಲಂಗಾಣದ ಕರೀಂನಗರದಲ್ಲಿ ಕನ್ನಯ್ಯ ಎಂಬ ವ್ಯಕ್ತಿ ತನ್ನ ಮಟನ್ ಶಾಪ್ಗೆ ಸೋನು ಸೂದ್ ಇಟ್ಟು ಕೆಜಿಗೆ 700 ರೂ. ಕುರಿ ಮಾಂಸವನ್ನು 600 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಉಳಿದ ನೂರು ರೂಪಾಯಿಯಲ್ಲಿ 50 ರೂ. ಗ್ರಾಹಕರ ಉಳಿತಾಯವಾಗುತ್ತಿದ್ದು, 50 ರೂಪಾಯಿಯನ್ನು ಸೋನು ಸೂದ್ ಟ್ರಸ್ಟ್ಗೆ ನೀಡುವುದಾಗಿ ಈತ ತಿಳಿಸಿದ್ದಾನೆ.
-
I am a vegetarian..
— sonu sood (@SonuSood) May 30, 2021 " class="align-text-top noRightClick twitterSection" data="
N mutton shop on my name?🙈
Can I help him open something vegetarian 😄 https://t.co/jYO40xAgRd
">I am a vegetarian..
— sonu sood (@SonuSood) May 30, 2021
N mutton shop on my name?🙈
Can I help him open something vegetarian 😄 https://t.co/jYO40xAgRdI am a vegetarian..
— sonu sood (@SonuSood) May 30, 2021
N mutton shop on my name?🙈
Can I help him open something vegetarian 😄 https://t.co/jYO40xAgRd
ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸೋನು, "ನಾನೊಬ್ಬ ಸಸ್ಯಾಹಾರಿ. ನನ್ನ ಹೆಸರಲ್ಲೇ ಮಟನ್ ಅಂಗಡಿಯೇ? ನಾನು ಈತನಿಗೆ ಸಸ್ಯಾಹಾರಿ ಸಂಬಂಧ ಅಂಗಡಿ ತೆರೆಯಲು ಸಹಾಯ ಮಾಡಲೇ" ಎಂದು ಕೇಳಿದ್ದಾರೆ.
ಇದನ್ನೂ ಓದಿ: 'ನನಗೆ ಅಪ್ಪ - ಅಮ್ಮ ಇಲ್ಲ, ಈಗ ನನ್ನ ಕುಟುಂಬ ದೊಡ್ಡದಾಗಿದೆ'... ಕಣ್ಣೀರು ಸುರಿಸಿದ ಸೋನ್ ಸೂದ್- ವಿಡಿಯೋ
ಈ ಹಿಂದೆ ಪೇಟಾ ಸಂಸ್ಥೆ (PETA -ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್)ಯು 2020ರ 'ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರೆಟಿ'ಯಾಗಿ ಸೋನು ಸೂದ್ರನ್ನು ಆಯ್ಕೆ ಮಾಡಿತ್ತು.