ETV Bharat / bharat

ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ: ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

Christmas celebration across the country: ಯೇಸುಕ್ರಿಸ್ತನ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಕ್ರಿಶ್ಚಿಯನ್ ಸಮುದಾಯದವರು ಕ್ರಿಸ್‌ಮಸ್ ಹಬ್ಬ ಮಧ್ಯರಾತ್ರಿಯಿಂದಲೇ ಸಂಭ್ರಮದಿಂದ ಆಚರಿಸಿದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಕ್ರಿಸ್‌ಮಸ್​ ಹಬ್ಬಕ್ಕೆ ಶುಭಾಶಯ ಕೋರಿದರು.

Christmas
ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ: ಮಧ್ಯರಾತ್ರಿಯಿಂದಲೇ ಸಂಭ್ರಮದ ಕ್ರಿಸ್‌ಮಸ್ ಆಚರಣೆ
author img

By ETV Bharat Karnataka Team

Published : Dec 25, 2023, 9:26 AM IST

Updated : Dec 25, 2023, 9:39 AM IST

ನವದೆಹಲಿ: ಯೇಸುಕ್ರಿಸ್ತನ ಜನ್ಮದಿನದ ನಿಮಿತ್ತ ದೇಶಾದ್ಯಂತ ಕ್ರಿಶ್ಚಿಯನ್ ಸಮುದಾಯದವರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿವಿಧ ಚರ್ಚ್​ಗಳಲ್ಲಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ವಿವಿಧ ರಾಜ್ಯಗಳಲ್ಲಿ ಮಧ್ಯರಾತ್ರಿಯಿಂದಲೇ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಚರ್ಚ್‌ಗಳಿಗೆ ವಿಶೇಷ ವಿದ್ಯುತ್​ ದೀಪಾಲಂಕಾರ ಮಾಡಲಾಯಿತು. ಇನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಕ್ರಿಸ್‌ಮಸ್​ ಹಬ್ಬಕ್ಕೆ ಶುಭಾಶಯ ಕೋರಿದರು.

ಕ್ರಿಸ್​ಮಸ್​ ಸಂದರ್ಭದಲ್ಲಿ ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್‌ನಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆದವು.

  • #WATCH | Odisha: "Merry Christmas to all of you. It is a wonderful feeling that everyone is celebrating Christmas...," says Sulochana Das, Mayor, Bhubaneswar Municipal Corporation pic.twitter.com/WICHsNkZ6m

    — ANI (@ANI) December 25, 2023 " class="align-text-top noRightClick twitterSection" data=" ">

ಯೇಸುಕ್ರಿಸ್ತನ ಜನ್ಮದಿನದ ನೆನಪಿಗಾಗಿ ಕ್ರಿಸ್ಮಸ್ ಆಚರಿಸಲಾಗುತ್ತದೆ. ಕರೋಲ್ ಹಾಡುಗಾರಿಕೆ, ಬೆರಗುಗೊಳಿಸುವ ಕ್ರಿಸ್​ಮಸ್​ ದೀಪಗಳು ಮತ್ತು ಅಲಂಕರಿಸಿದ ಕ್ರಿಸ್​ಮಸ್ ಟ್ರೀ ಹಬ್ಬದ ಮೆರಗು ಹೆಚ್ಚಿಸಿದವು.

ಪ್ಯಾರಿಸ್​​​ ಪ್ರೀಸ್ಟ್ ವಾಲ್ಟರ್ ಡಿ ಸಾ ಸಂದೇಶ: ಪಶ್ಚಿಮ ಬಂಗಾಳದ ಸಿಲಿಗುರಿಯ ಅವರ್ ಲೇಡಿ ಕ್ವೀನ್ ಚರ್ಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಇತರ ಧರ್ಮಗಳ ಜನರು ಕೂಡ ಕ್ರಿಸ್​ಮಸ್ ಆಚರಿಸಿದರು. ಮಧ್ಯರಾತ್ರಿ ನಾವು ಕ್ರಿಸ್‌ಮಸ್ ಆಚರಿಸಿದ್ದೇವೆ ಮತ್ತು ಇತರ ಧರ್ಮದವರೂ ಸೇರಿದಂತೆ ಉತ್ತಮ ಸಂಖ್ಯೆಯ ಜನರು ಅಲ್ಲಿದ್ದರು. ಅವರೆಲ್ಲರೂ ನಮ್ಮ ಕ್ರಿಸ್‌ಮಸ್ ಆಚರಣೆಯಲ್ಲಿ ಸಂತೋಷದಿಂದ ಪಾಲ್ಗೊಂಡರು. ನನ್ನ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ'' ಎಂದು ಪಣಜಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ವಾಲ್ಟರ್ ಡಿ ಸಾ ತಿಳಿಸಿದರು.

ಚನ್ನೈನ ಸಾಂಥೋಮ್ ಕ್ಯಾಥೆಡ್ರಲ್ ಬೆಸಿಲಿಕಾ ಚರ್ಚ್‌ನಲ್ಲಿಯೂ ಪ್ರಾರ್ಥನೆಗಳು ನಡೆದವು. "ಕ್ರಿಸ್‌ಮಸ್ ಎಂದರೆ ಮಾನವೀಯತೆಗಾಗಿ ಜಗತ್ತಿಗೆ ಬಂದಿರುವ ದೇವರ ಸಂತೋಷ, ಶಾಂತಿ ಮತ್ತು ಪ್ರೀತಿ. ದೇವರು ಎಲ್ಲ ಮನುಷ್ಯರಿಗೆ ಒಳಿತನ್ನು ಬಯಸಲು ಬರುತ್ತಾನೆ. ಮಾನವರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ದೇವರು ಪ್ರತಿಯೊಬ್ಬರ ಬಳಿಗೆ ಬರುತ್ತಾರೆ. ನಿಮ್ಮೆಲ್ಲರಿಗೂ ಕ್ರಿಸ್‌ಮಸ್ ಮತ್ತು ಸಮೃದ್ಧ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ" ಎಂದು ಮದ್ರಾಸ್‌ನ ಆರ್ಚ್‌ಬಿಷಪ್ ಮತ್ತು ಚನ್ನೈನ ಸ್ಯಾಂಥೋಮ್ ಕ್ಯಾಥೆಡ್ರಲ್ ಬೆಸಿಲಿಕಾ ಚರ್ಚ್‌ನ ಆರ್ಚ್‌ಬಿಷಪ್ ಜಾರ್ಜ್ ಆಂಟೋನಿಸಾಮಿ ಹೇಳಿದ್ದಾರೆ.

ಪಟಾಕಿ ಸಿಡಿಸಿ ಸಂಭ್ರಮಿಸಿದ ಜನರು: ಕ್ರಿಸ್‌ಮಸ್ ಸಂದರ್ಭದಲ್ಲಿ ಮಧ್ಯಪ್ರದೇಶದ ಛತ್ತರ್‌ಪುರದ ಚರ್ಚ್‌ನಲ್ಲಿ ನಡೆದ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆ ನಂತರ ಜನರು ಪಟಾಕಿ ಸಿಡಿಸಿದರು. ಒಡಿಶಾದ ಭುವನೇಶ್ವರದಲ್ಲಿರುವ ಸೇಂಟ್ ವಿನ್ಸೆಂಟ್ ಪ್ರೊ-ಕ್ಯಾಥೆಡ್ರಲ್‌ನಲ್ಲಿ ಮಧ್ಯರಾತ್ರಿಯ ಸಾಮೂಹಿಕ ಪ್ರಾರ್ಥನೆಗಳನ್ನು ನರೆವೇರಿಸಲಾಯಿತು. ಆರ್ಚ್‌ಬಿಷಪ್ ಜಾನ್ ಬರ್ವಾ ಯೇಸುವಿನ ಜೀವನದ ಸಂದೇಶವನ್ನು ಸಾರಿದರು.

ವಿಶ್ವಾದ್ಯಂತ ಹಬ್ಬದ ಸಂಭ್ರಮದಲ್ಲಿ ಮುಳುಗಿದ ಕೋಟ್ಯಂತರ ಜನ: ಗುಜರಾತ್‌ನ ವಡೋದರಾದ ಸೆಂಟಿನರಿ ಮೆಥೋಡಿಸ್ಟ್ ಚರ್ಚ್‌ನಲ್ಲಿ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಅರುಣಾಚಲ ಪ್ರದೇಶದ ನಹರ್ಲಗುನ್‌ನಲ್ಲಿರುವ ಚರ್ಚ್‌ನಲ್ಲಿ ಜನರು ಕಿಸ್​ಮಸ್​ ಆಚರಣೆಯಲ್ಲಿ ಭಾಗವಹಿಸಿದರು. ಪ್ರವಾಸಿಗರ ನೆಚ್ಚಿನ ತಾಣವಾದ ಶಿಮ್ಲಾವನ್ನು ಕ್ರಿಸ್​ಮಸ್​ ಹಬ್ಬಕ್ಕಾಗಿ ಅಲಂಕರಿಸಲಾಗಿದೆ. ಚರ್ಚ್‌ನ ಫಾದರ್​ ಆರೋಗ್ಯದ ಹಿನ್ನೆಲೆಯಲ್ಲಿ ಮಧ್ಯರಾತ್ರಿಯ ಪ್ರಾರ್ಥನೆಯನ್ನು ರದ್ದುಗೊಳಿಸಿದ್ದರಿಂದ ನಗರದ ಕೆಲವು ಜನರು ಸ್ವಲ್ಪ ನಿರಾಶೆಗೊಂಡರು. ಕ್ರಿಸ್‌ಮಸ್ ಎಂಬುದು ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ವಾರ್ಷಿಕ ಹಬ್ಬವಾಗಿದೆ. ಇದನ್ನು ವಿಶ್ವಾದ್ಯಂತ ಕೋಟ್ಯಂತರ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಆಚರಿಸುತ್ತಾರೆ.

  • Wishing everyone a Merry Christmas! May this festive season bring joy, peace and prosperity to all. Let’s celebrate the spirit of harmony and compassion that Christmas symbolizes, and work towards a world where everyone is happy and healthy. We also recall the noble teachings of…

    — Narendra Modi (@narendramodi) December 25, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಇಂದು ಉತ್ತಮ ಆಡಳಿತ ದಿನ... ಏನು ಈ ದಿನದ ಮಹತ್ವ..?

ಕ್ರಿಸ್​ಮಸ್​ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಶುಭಾಶಯಗಳನ್ನು ಕೋರಿದರು.

‘‘ಎಲ್ಲರಿಗೂ ಮೆರ್ರಿ ಕ್ರಿಸ್ಮಸ್ ಶುಭಾಶಯಗಳು!. ಈ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕ್ರಿಸ್‌ಮಸ್ ಸಂಕೇತಿಸುವ ಸೌಹಾರ್ದತೆ ಮತ್ತು ಸಹಾನುಭೂತಿಯ ಚೈತನ್ಯವನ್ನು ಪಡೆದುಕೊಳ್ಳೋಣ ಎಂದು ಅವರು ಟ್ವೀಟ್​ ಮಾಡಿದ್ದಾರೆ.

Last Updated : Dec 25, 2023, 9:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.