ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಾದ್ಯಂತ ಗಣಪತಿ ನಿಮಜ್ಜನದ ವೇಳೆ ನಡೆದ ದುರ್ಘಟನೆಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 14 ಜನರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
ಮಹೇಂದ್ರಗಢ ಎಂಬಲ್ಲಿ ಇಂದು ಗಣೇಶ ಮೂರ್ತಿ ನಿಮಜ್ಜನ ಮಾಡಲು 20- 22 ಮಂದಿ ನದಿಗೆ ಇಳಿದಿದ್ದಾರೆ. ಅಧಿಕ ಭಾರದಿಂದ ದೋಣಿ ಮುಳುಗಿದ್ದು, ಅದರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. 14 ಮಂದಿ ನೀರುಪಾಲು ಆಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಇನ್ನೊಂದೆಡೆ ವಿನಾಯಕನಿಗೆ ಆರತಿ ಬೆಳಗುವ ವೇಳೆ ಮರವೊಂದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟರೆ, ಸಿಮೆಂಟ್ನಿಂದ ಗಣಪ ಮೇಲೆ ಬಿದ್ದು ಮತ್ತೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ನಿಮಜ್ಜನದ ಮೆರವಣಿಗೆ ನಡೆಸುತ್ತಿದ್ದಾಗ ಮೂರ್ತಿಗೆ ವಿದ್ಯುತ್ ಸ್ಪರ್ಶವಾಗಿ ಬಳಿಯಿದ್ದ 11 ಮಂದಿ ಗಾಯಗೊಂಡ ಘಟನೆಯೂ ನಡೆದಿದೆ.
ಇದಲ್ಲದೇ, ಹರಿಯಾಣ ಎಂಬಲ್ಲಿ ವಿನಾಯಕ ಮೂರ್ತಿ ವಿಸರ್ಜನೆಯ ವೇಳೆ ನಾಲ್ವರು ಬಾಲಕರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಉತ್ತರ ಪ್ರದೇಶದ ಉನ್ನಾವೋದಲ್ಲಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರೆ, ಒಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾರೆ.
10 ದಿನಗಳ ಗಣೇಶ ಚತುರ್ಥಿ ಹಬ್ಬ ಶುಕ್ರವಾರ ಮುಕ್ತಾಯವಾಯಿತು. ಕಳೆದ ವರ್ಷ ಕೊರೊನಾ ಕಾರಣದಿಂದ ಕಳೆಗುಂದಿದ್ದ ಚತುರ್ಥಿ, ಈ ಬಾರಿ ಯಾವುದೇ ನಿರ್ಬಂಧವಿಲ್ಲದ ಕಾರಣ ದೇಶಾದ್ಯಂತ ಅದ್ಧೂರಿಯಾಗಿ ನಡೆಸಲಾಗುತ್ತಿದೆ.
ಓದಿ: ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿ ಪರೀಕ್ಷೆ ಬರೆಯಲು ಬಂದ ಯುವತಿ.. ವಿಡಿಯೋ