ETV Bharat / bharat

ಕಾಂಗ್ರೆಸ್​​ನಲ್ಲಿ 'ಪ್ರಜಾಪ್ರಭುತ್ವ' ಉಳಿದಿಲ್ಲ: ಕೇರಳ 'ಕೈ' ನಾಯಕ ಪಿಸಿ ಚಾಕೊ ರಾಜೀನಾಮೆ!

ಕಾಂಗ್ರೆಸ್​​ ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಿರಿಯ ಮುಖಂಡ ಪಿಸಿ ಚಾಕೋ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನೆ ಮಾಡಿದ್ದಾರೆ.

PC Chako
PC Chako
author img

By

Published : Mar 10, 2021, 2:57 PM IST

Updated : Mar 10, 2021, 3:36 PM IST

ನವದೆಹಲಿ: ಕೇರಳ ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್​​ನ ಹಿರಿಯ ಮುಖಂಡ ಪಿಸಿ ಚಾಕೊ ಪಕ್ಷಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಕಾಂಗ್ರೆಸ್​ನಲ್ಲಿ​ ಯಾವುದೇ ರೀತಿಯ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಚಾಕೊ ಮಾತು

ಮುಂದಿನ ತಿಂಗಳು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಬೆನ್ನಲ್ಲೇ ಚಾಕೊ ತೆಗೆದುಕೊಂಡಿರುವ ನಿರ್ಧಾರ ಕೈ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಜತೆಗೆ ಸ್ವತಃ ಪಕ್ಷದ ಮೇಲೆ ಅವರು ಗಂಭೀರ ಆರೋಪ ಮಾಡಿರುವುದು ಬರುವ ಚುನಾವಣೆಯಲ್ಲಿ ಕಪ್ಪು ಚುಕ್ಕೆಯಾಗಲಿದೆ.

ಕೇರಳ ಕಾಂಗ್ರೆಸ್​ ಸ್ಥಿತಿ ಗಂಭೀರವಾಗಿದ್ದು, ಅಲ್ಲಿ ಪ್ರಜಾಪ್ರಭುತ್ವದ ಬದಲಿಗೆ ಗುಂಪುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹೈಕಮಾಂಡ್​ಗೆ ನಾನು ಮಾಹಿತಿ ನೀಡಿದ್ರೂ, ಪ್ರಯೋಜನವಾಗಿಲ್ಲ. ಹೈಕಮಾಂಡ್​ ಕೂಡ ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

  • I'd been deliberating upon this decision for past many days. I come from Kerala where there's no Congress party as such. There are 2 parties - Congress (I) & Congress (A). It's coordination committee of 2 parties functioning as KPCC: PC Chacko announces resignation from Congress pic.twitter.com/Yuo0aRnraf

    — ANI (@ANI) March 10, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಮನೆಗೆ ಕರೆದೊಯ್ಯುವಂತೆ ಗಂಡನ ಮನೆ ಎದುರು ಧರಣಿ ಕುಳಿತ ಮಹಿಳೆ

74 ವರ್ಷದ ಚಾಕೊ, ಕೇರಳ ಕಾಂಗ್ರೆಸ್​ನ ಪ್ರಮುಖ ನಾಯಕರಾಗಿದ್ದು, ಈ ಹಿಂದೆ ಕೇರಳದ ತ್ರಿಶೂರ್​​ದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಜತೆಗೆ ಕಾಂಗ್ರೆಸ್​ ವಕ್ತಾರರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಏಪ್ರಿಲ್​ 6ರಂದು ನಡೆಯಲಿರುವ ಚುನಾವಣೆಗೋಸ್ಕರ ಕಾಂಗ್ರೆಸ್​ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದು, ಈ ವೇಳೆ ಸ್ಥಳೀಯ ಮುಖಂಡರನ್ನ ಕಡೆಗಣನೆ ಮಾಡುತ್ತಿದೆ ಎಂದು ಚಾಕೊ ತಿಳಿಸಿದ್ದು, ಕೇರಳದಲ್ಲಿ ಕಾಂಗ್ರೆಸ್​​ಮೆನ್​ ಆಗಿರುವುದು ತುಂಬಾ ಕಠಿಣ ಎಂದಿದ್ದಾರೆ.

Last Updated : Mar 10, 2021, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.