ಪಾಟ್ನಾ (ಬಿಹಾರ): ಉತ್ತರ ಭಾರತದಲ್ಲಿ ವಿವಾಹಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಮದುವೆಯ ಸಂಭ್ರಮಕ್ಕೆ ಮತ್ತಷ್ಟು ರಾಯಲ್ ಲುಕ್ ನೀಡುವ ಉದ್ದೇಶದಿಂದ ವೆಡ್ಡಿಂಗ್ ವಿಂಟೇಜ್ ಕಾರನ್ನು ಬಳಸುವುದು ಇದೀಗ ಚಾಲ್ತಿಗೆ ಬಂದಿದೆ.
ವಿಂಟೇಜ್ ಕಾರುಗಳು ವಿಶೇಷವಾಗಿ ವಿವಾಹದ ಸಂದರ್ಭಗಳಲ್ಲಿ ಐಷಾರಾಮಿ ಸೊಬಗನ್ನು ನೀಡುತ್ತವೆ. ಹೀಗಾಗಿ ಜನ ಇದನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.
ಈ ಬಗ್ಗೆ ರಾಯಲ್ ರೈಡ್ಸ್ ಸದಸ್ಯ ಕರುಣೇಶ್ ಕುಮಾರ್ ಮಾತನಾಡಿದ್ದು, 1963 ರ ಮರ್ಸಿಡಿಸ್-ಬೆನ್ಜ್ ಕಾರ್ಗೆ ದಿನಕ್ಕೆ 45 ಸಾವಿರ ರೂ.ಗೆ ಬಾಡಿಗೆ ಇದೆ. ವಿಂಟೇಜ್ ಕಾರನ್ನು ಹಿಮಾಚಲ ಪ್ರದೇಶದ ನೂರ್‌ಪುರದಿಂದ ತರಲಾಗಿದೆ. ಇದೀಗ ಪಾಟ್ನಾದ ಜನರಿಗೆ ಮಾತ್ರ ಈ ಕಾರು ಲಭ್ಯವಿದ್ದು, 35 ಸಾವಿರದಿಂದ 45 ಸಾವಿರದವರೆಗೆ ಬಾಡಿಗೆ ಇದೆ. ಈ ಕಾರುಗಳು ಮದುವೆಮನೆಗೆ ರಾಜಮನೆತನದ ಸೊಬಗನ್ನು ನೀಡುವುದರಿಂದ ಜನ ಇವುಗಳನ್ನೇ ತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಓದಿ: ಪೊಲೀಸ್ ಭದ್ರತೆಯಲ್ಲಿ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಬಂದ ದಲಿತ ವರ!