ETV Bharat / bharat

ಪಟಿಯಾಲಾ ಹಿಂಸಾಚಾರ: ಮಾಸ್ಟರ್​ಮೈಂಡ್​ ಬರ್ಜಿಂದರ್ ಸಿಂಗ್ ಪರ್ವಾನಾ ಬಂಧನ

author img

By

Published : May 1, 2022, 2:40 PM IST

ಪಟಿಯಾಲಾದ ಕಾಳಿ ಮಾತಾ ದೇವಸ್ಥಾನದ ಹೊರಗೆ ಎರಡು ಗುಂಪುಗಳ ನಡುವಿನ ಘರ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Patiala clashes: Key conspirator Barjinder Singh Parwana arrested
ಪಟಿಯಾಲಾ ಹಿಂಸಾಚಾರ: ಮಾಸ್ಟರ್​ಮೈಂಡ್​ ಬರ್ಜಿಂದರ್ ಸಿಂಗ್ ಪರ್ವಾನಾ ಬಂಧನ

ಮೊಹಾಲಿ(ಪಂಜಾಬ್): ಪಟಿಯಾಲಾ ಘರ್ಷಣೆಯ ಪ್ರಮುಖ ಸಂಚುಕೋರ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಮೊಹಾಲಿಯಲ್ಲಿ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಮೊಹಾಲಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 7.20ಕ್ಕೆ ವಿಸ್ತಾರಾ ವಿಮಾನದ ಮೂಲಕ ಆರೋಪಿಯನ್ನು ಮುಂಬೈಗೆ ಕರೆತರಲಾಗಿದೆ. ಇನ್‌ಸ್ಪೆಕ್ಟರ್ ಶಮೀಂದರ್ ಸಿಂಗ್ ನೇತೃತ್ವದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ತಂಡ ಮೊಹಾಲಿ ವಿಮಾನ ನಿಲ್ದಾಣದಲ್ಲಿ ಬರ್ಜಿಂದರ್ ಸಿಂಗ್ ಪರ್ವಾನಾ ಬಂಧಿಸಿದೆ.

ಶುಕ್ರವಾರ ಪಟಿಯಾಲಾದ ಕಾಳಿ ಮಾತಾ ದೇವಸ್ಥಾನದ ಹೊರಗೆ ಎರಡು ಗುಂಪುಗಳು ಘರ್ಷಣೆ ನಡೆಸಿ, ಪಟಿಯಾಲಾದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಗಿತ್ತು. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಎಫ್‌ಐಆರ್‌ಗಳನ್ನು ಪೊಲೀಸರು ಶನಿವಾರ ದಾಖಲಿಸಿದ್ದಾರೆ.

ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಹರೀಶ್ ಸಿಂಗ್ಲಾ, ಕುಲದೀಪ್ ಸಿಂಗ್ ದಂತಾಲ್ ಮತ್ತು ದಲ್ಜಿತ್ ಸಿಂಗ್ ಎಂಬುವವರು ಬಂಧಿತರಾಗಿದ್ದು, ಅವರ ಜೊತೆಗೆ ಬರ್ಜಿಂದರ್ ಸಿಂಗ್ ಪರ್ವಾನಾ ಕೂಡಾ ಸೇರ್ಪಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಆರೋಪಿಗಳನ್ನು ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಿತೆಗೆ ಅಗ್ನಿಸ್ಪರ್ಶದ ವೇಳೆ ಸೀಮೆಎಣ್ಣೆ ಕ್ಯಾನ್‌ಗೆ ಹಾರಿದ ಕಿಡಿ; 11 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.