ಹೈದರಾಬಾದ್: ದುಂಡಿಗಲ್‌ನಲ್ಲಿರುವ ಭಾರತೀಯ ವಾಯುಪಡೆಯ ಅಕಾಡೆಮಿಯಲ್ಲಿ ತರಬೇತಿ ಮುಗಿಸಿರುವ ವಾಯುಪಡೆಯ ಯೋಧರ ತೇರ್ಗಡೆ ಜಂಟಿ ಪಥಸಂಚಲನ ನಡೆಯಿತು. ಹಿರಿಯ ಸೇನಾಧಿಕಾರಿಗಳು, ತರಬೇತಿ ಪಡೆದ ಸಿಬ್ಬಂದಿಯ ಕುಟುಂಬಸ್ಥರು ಭಾಗವಹಿಸಿದ್ದರು.
ಇದೇ ವೇಳೆ ವಾಯುಸೇನೆಯ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ ನೋಡುಗರ ಕಣ್ಮನ ಸಳೆಯಿತು. ಸಾರಂಗ್ ಹೆಲಿಕಾಪ್ಟರ್‌ಗಳು ಬಾನಂಗಳದಲ್ಲಿ ಬಿಡಿಸಿದ ಚಿತ್ತಾರ ನೆರದಿದ್ದವರನ್ನು ಆಕರ್ಷಿಸಿತು.
ಈ ಹಿಂದೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್‌ನಲ್ಲಿ ಪೊಲೀಸ್ ಡಾಗ್ ಸ್ಕ್ವಾಡ್ ಪಾಸಿಂಗ್ ಔಟ್ ಪರೇಡ್ ಆಯೋಜಿಸಲಾಗಿತ್ತು. ಇದರಲ್ಲಿ 50 ಪೊಲೀಸ್ ಶ್ವಾನಗಳು (ತಜ್ಞರ ಮೇಲ್ವಿಚಾರಣೆಯಲ್ಲಿ ವಿಶೇಷ ತರಬೇತಿ ಪಡೆದವರು) ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಲ್ಯಾಬ್ರಡಾರ್ಸ್, ಜರ್ಮನ್ ಶೆಫರ್ಡ್ಸ್, ಬೆಲ್ಜಿಯಂ ಮಾಲಿನೋಯಿಸ್, ಕಾಕರ್ ಸ್ಪೇನಿಯಲ್ಸ್ ಮತ್ತು ಗೋಲ್ಡನ್ ರಿಟ್ರೈವರ್ ನಾಯಿಗಳಿಗೆ ತೆಲಂಗಾಣ ಮತ್ತು ಬಿಹಾರದ ತರಬೇತುದಾರರು ಎಂಟು ತಿಂಗಳ ಕಾಲ ತರಬೇತಿ ನೀಡಿದರು. ಅನುಮಾನಾಸ್ಪದ ವಸ್ತುಗಳು ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಶ್ವಾನಗಳಿಗೆ ತರಬೇತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.