ರಾಂಚಿ: ಬೆಂಗಳೂರಿನಿಂದ ರಾಂಚಿಗೆ ಬರುತ್ತಿದ್ದ ಏರ್ ಏಷ್ಯಾ ವಿಮಾನ ಮತ್ತು ದೆಹಲಿಯಿಂದ ರಾಂಚಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ದಿಢೀರ್ ಮಾರ್ಗ ಬದಲಿಸಿ ಕೋಲ್ಕತ್ತಾದಲ್ಲಿ ಇಳಿಸಲಾಯಿತು. ಇದರಿಂದ ರೊಚ್ಚಿಗೆದ್ದ ಬೆಂಗಳೂರು ಮತ್ತು ದೆಹಲಿಗೆ ತೆರಳುವ ಪ್ರಯಾಣಿಕರು ರಾಜಧಾನಿ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಗಲಾಟೆ ಆರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ರಾಂಚಿಯಿಂದ ಬೆಂಗಳೂರಿಗೆ ರಾತ್ರಿ 7:55 ಕ್ಕೆ ಹೊರಡುವ ಏರ್ ಏಷ್ಯಾ ವಿಮಾನವು ಬೆಳಗ್ಗೆ 7.30 ಕ್ಕೆ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣವನ್ನು ತಲುಪುತ್ತದೆ. ನಂತರ ರಾಂಚಿ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ಕಾದು ಮತ್ತೆ ಬೆಂಗಳೂರಿಗೆ ಹೊರಡುತ್ತದೆ. ಆದರೆ ಸೋಮವಾರ ಬೆಳಗ್ಗೆ 7.30 ಕ್ಕೆ ರಾಂಚಿಯಲ್ಲಿ ಏರ್ ಏಷ್ಯಾದ ವಿಮಾನ ಇಳಿಯಲಿಲ್ಲ. ಅದೇ ಸಮಯದಲ್ಲಿ, ರಾಂಚಿಯಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನವನ್ನು ಸಹ ಹವಾಮಾನ ವೈಪರೀತ್ಯದ ಕಾರಣ ಮುಂಜಾನೆ ಕೋಲ್ಕತ್ತಾಗೆ ತಿರುಗಿಸಲಾಯಿತು.
ಮಂಜು ಕವಿದಿದ್ದರಿಂದ ರಾಂಚಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಗೋಚರತೆ ತುಂಬಾ ಕಡಿಮೆ ಇತ್ತು. ಒಟ್ಟಾರೆ ಹವಾಮಾನ ವೈಪರೀತ್ಯದಿಂದಾಗಿ ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ವಿಮಾನ ಮತ್ತು ಇಂಡಿಗೋ ವಿಮಾನವನ್ನು ಕೋಲ್ಕತ್ತಾಗೆ ತಿರುಗಿಸಲಾಗಿದೆ. ಇದರಿಂದಾಗಿ ರಾಂಚಿಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ತಮಗೆ ಬೆಂಗಳೂರಿಗೆ ಹೋಗಲು ಸಾಧ್ಯವಾಗಲಾರದು ಎಂದು ಭಾವಿಸಿ ವಿಮಾನ ನಿಲ್ದಾಣದಲ್ಲಿ ಗಲಾಟೆ ಆರಂಭಿಸಿದ್ದಾರೆ. ಆದರೆ, ಹವಾಮಾನ ಸರಿಯಾದ ಕೂಡಲೇ ಏರ್ ಏಷ್ಯಾ ಮತ್ತು ಇಂಡಿಗೋ ವಿಮಾನಗಳನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಕರೆಸಲಾಯಿತು. ಎರಡೂ ವಿಮಾನಗಳು ಸುಮಾರು ಎರಡು ಗಂಟೆ ತಡವಾಗಿ ಬೆಂಗಳೂರು ಮತ್ತು ದೆಹಲಿಗೆ ಹೊರಟವು.
ಇದನ್ನೂ ಓದಿ: ವಿಮಾನದಲ್ಲಿ ನಾಯಿಮರಿ ಪ್ರಯಾಣಕ್ಕೆ ಅವಕಾಶ ನೀಡದ ಪೈಲಟ್: ಪ್ರವಾಸವನ್ನೇ ರದ್ದು ಮಾಡಿದ ಕುಟುಂಬ