ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಇಂದಿನಿಂದ ಆರಂಭಗೊಂಡಿದೆ. ದಿನದ ಮೊದಲಾರ್ಧದಲ್ಲಿ ರಾಜ್ಯಸಭೆಯನ್ನು ಪುನಃ ರಚಿಸುವುದರೊಂದಿಗೆ ಸಂಸತ್ತು ಪ್ರಾರಂಭಗೊಂಡಿದೆ.
ಇಡೀ ಸದನದ ಪರವಾಗಿ ಮತ್ತು ನನ್ನ ಪರವಾಗಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಭಿನಂದಿಸುತ್ತೇನೆ. ಅವರು ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿರುವ ದೇಶದ ದೀರ್ಘಕಾಲದ ನಾಯಕರಲ್ಲಿ ಒಬ್ಬರು ಎಂದು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ತಿಳಿಸಿದರು.
ಸದನದಲ್ಲಿ ಹಾಜರಾಗಲು, ಚರ್ಚೆಗಳನ್ನು ಗಮನಿಸಿ ನಿಮ್ಮ ಜ್ಞಾನವನ್ನು ಶ್ರೀಮಂತಗೊಳಿಸಲು ನಾನು ಎಲ್ಲ ಸದಸ್ಯರಿಗೆ ಮನವಿ ಮಾಡುತ್ತೇನೆ. ಇಂದು ಅಂತಾರಾಷ್ಟ್ರೀಯ ಮಹಿಳೆಯರ ದಿನ. ಪ್ರಪಂಚದಾದ್ಯಂತ ಇರುವ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕೊಡುಗೆಗಳು ಮತ್ತು ಸಾಧನೆಗಳನ್ನು ಆಚರಿಸಲು ಮತ್ತು ಅವರ ಅದಮ್ಯ ಮನೋಭಾವ, ದೃಢ ನಿಶ್ಚಯ, ಅವರ ಸಾಧನೆಗಳನ್ನು ಒತ್ತಿಹೇಳುವ ಪ್ರಯತ್ನಗಳನ್ನು ಗೌರವಿಸುವ ದಿನವಾಗಿ ಎಂದು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಶ್ಲಾಘಿಸಿದರು.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ನಿಕಾಬ್, ಬುರ್ಖಾ ನಿಷೇಧಿಸುವ ಪ್ರಸ್ತಾವನೆಗೆ ಈ ದೇಶದ ಜನರ ಸಮ್ಮತಿ
ರಾಜ್ಯಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಸೋನಾಲ್ ಮಾನ್ಸಿಂಗ್, ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯನ್ನೂ ಆಚರಿಸಬೇಕೆಂದು ಒತ್ತಾಯಿಸಿದ್ದಾರೆ.
ಮಹಿಳೆಯರ ನಾಯಕತ್ವ ಹೆಚ್ಚಳಕ್ಕೆ ಮೀಸಲಾತಿ: ದೇಶದಲ್ಲಿ ಶೇ 6 ಕ್ಕಿಂತ ಹೆಚ್ಚು ಮಹಿಳೆಯರಿಗೆ ನಾಯಕತ್ವದ ಪಾತ್ರಗಳನ್ನು ನೀಡಿಲ್ಲ ಎಂಬುದನ್ನು ವರದಿಗಳು ತೋರಿಸಿವೆ. ನಾವು ಅದರ ಬಗ್ಗೆ ಯೋಚಿಸಬೇಕು. ಮಹಿಳೆಯರಿಗೆ ನಾಯಕತ್ವದಲ್ಲೂ ಮೀಸಲಾತಿ ಕಲ್ಪಿಸುವ ಮೂಲಕ ಇದನ್ನು ಹೆಚ್ಚಿಸಬಹುದು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶೇ 33ರಷ್ಟು ಮಹಿಳೆಯರ ಮೀಸಲಾತಿ ಕುರಿತು ಶಾಸನವನ್ನು ತರುವ ಮೂಲಕ ನಾವು ಪ್ರಾರಂಭಿಸಬಹುದು ಎಂದು ಎನ್‌ಸಿಪಿ ಸಂಸದೆ ಡಾ.ಫೌಜಿಯಾ ಖಾನ್ ಅಭಿಪ್ರಾಯಪಟ್ಟಿದ್ದಾರೆ.
![Parliament commences with reconvening of Rajya Sabha in the first half of the day](https://etvbharatimages.akamaized.net/etvbharat/prod-images/10915132_fauzia.jpg)
24 ವರ್ಷಗಳ ಹಿಂದೆ ನಾವು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ಪ್ರಸ್ತಾಪಿಸಿದ್ದೇವೆ. ಇಂದು, 24 ವರ್ಷಗಳ ನಂತರ, ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಶೇ 50 ಏರಿಸಬೇಕು ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
![Parliament commences with reconvening of Rajya Sabha in the first half of the day](https://etvbharatimages.akamaized.net/etvbharat/prod-images/10915132_priyankal.jpg)
ಬಜೆಟ್ ಅಧಿವೇಶನದ ಮೊದಲ ಭಾಗವು ಜ.29 ರಂದು ಸಂಸತ್ತಿನ ಎರಡು ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣದೊಂದಿಗೆ ಆರಂಭಗೊಂಡಿತು. ಆದರೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಭಟನಾ ನಿರತ ರೈತರ ಬೇಡಿಕೆಗೆ ಬೆಂಬಲಿಸಿದ ಕಾಂಗ್ರೆಸ್ ಹಾಗೂ 20 ಕ್ಕೂ ಹೆಚ್ಚು ವಿರೋಧ ಪಕ್ಷಗಳು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ್ದವು.
ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ 100 ರೂ. ಮತ್ತು ಲೀಟರ್‌ಗೆ 80 ರೂ. ಏರಿಕೆಯಾಗಿದೆ. ಎಲ್‌ಪಿಜಿ ಬೆಲೆಯೂ ಏರಿಕೆಯಾಗಿದೆ. ಅಬಕಾರಿ ಸುಂಕ / ಸೆಸ್ ಹಾಕುವ ಮೂಲಕ 21 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ. ಇದರಿಂದ ರೈತರು ಸೇರಿದಂತೆ ಇಡೀ ದೇಶವು ಬಳಲುತ್ತಿದೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರಸ್ತಾಪಿಸಿದರು.
ನಂತರ ಈ ಬಗ್ಗೆ ಸದನದಲ್ಲಿ ಚರ್ಚಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಆದರೆ ಇದಕ್ಕೆ ರಾಜ್ಯಸಭೆ ಅಧ್ಯಕ್ಷರು ಸಮ್ಮತಿ ನೀಡದ ಕಾರಣ, ಪ್ರಧಾನಿ ಮೋದಿ ವಿರುದ್ಧ ವಿಪಕ್ಷ ಸದಸ್ಯರು ಘೋಷಣೆ ಕೂಗಿದರು. ‘ಪ್ರಧಾನಿ ಮೋದಿ ಹೋಷ್ ಮೇ ಆವೋ’ ಎಂದು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಮೊದಲ ದಿನ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ನೀವೆಲ್ಲರೂ ಮೊದಲು ಹೋಷ್ಗೆ ಬನ್ನಿ. ಇದು ಕಲಾಪದ ಮೊದಲ ದಿನ. ಸಮಯ ವ್ಯರ್ಥ ಮಾಡದೇ ಚರ್ಚೆ ಮಾಡೋಣ. ಎಲ್ಲರೂ ಶಾಂತರಾಗಿ ಎಂದು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಹೇಳಿದರು. ಆದರೆ ಇದಕ್ಕೆ ಬಗ್ಗದ ಕಾಂಗ್ರೆಸ್ ಸದಸ್ಯರು ಇಂಧನ ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿ ಘೋಷಣೆ ಕೂಗುವುದನ್ನು ಮುಂದುವರೆಸಿದರು. ಬಳಿಕ ರಾಜ್ಯಸಭೆಯನ್ನು ಬೆಳಗ್ಗೆ 11 ಗಂಟೆಯ ವರೆಗೆ ಸಭಾಧ್ಯಕ್ಷರು ಮುಂದೂಡಿದರು.