ETV Bharat / bharat

ಚಿರತೆ ದಾಳಿ, ಇಬ್ಬರು ವೃದ್ಧರಿಗೆ ಗಾಯ: ಅರಣ್ಯಾಧಿಕಾರಿಗಳಿಂದ ಯಶಸ್ವಿ ಕಾರ್ಯಾಚರಣೆ - ಸೆರೆಹಿಡಿದ ಅರಣ್ಯ ಸಿಬ್ಬಂದಿ

ರಾಜಸ್ಥಾನದ ಕೋಟಾ ಮಹಾವೀರ ನಗರ ವ್ಯಾಪ್ತಿಯಲ್ಲಿ ಚಿರತೆಯೂ ಇಬ್ಬರು ವೃದ್ಧರ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಶನಿವಾರ ಸಂಜೆ ಜರುಗಿದೆ. ಸಮೀಪದ ಲಾಡ್‌ಪುರ ವ್ಯಾಪ್ತಿಯ ಅರಣ್ಯ ವಿಭಾಗದ ಚಿರತೆ ಸರೆ ಹಿಡಿಯಲು ಯಶಸ್ವಿ ಕಾರ್ಯಾಚರಣೆ ನಡೆಸಿದರು.

Leopard attack when crowd in Kota, RajasthanEtv Bharat
ಚಿರತೆ ದಾಳಿ ,ರಾಜಸ್ಥಾನದ ಕೋಟಾದಲ್ಲಿ ಸೇರಿದ ಜನಸ್ತೋಮ
author img

By

Published : Nov 5, 2022, 5:24 PM IST

ಕೋಟಾ: ರಾಜಸ್ಥಾನದ ಕೋಟಾ ಮಹಾವೀರ ನಗರ ವ್ಯಾಪ್ತಿಯಲ್ಲಿ ಚಿರತೆಯೂ ಇಬ್ಬರು ವೃದ್ಧರ ಮೇಲೆ ದಾಳಿ ಮಾಡಿ ನಂತರ ಇನ್ನೊಂದು ಮನೆಗೆ ಹೋಗಿದ್ದ ಚಿರತೆ ಅಲ್ಲಿನ ವಸತಿ ಗೃಹದಲ್ಲಿ ಸಿಲುಕಿಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.

ಚಿರತೆ ದಾಳಿಗೆ ಮಹಾವೀರ ನಗರದ ನಿವಾಸಿಗಳಾದ ಹರಿಶಂಕರ ಮೀನಾ(63), ರಾಮ್ ವಿಲಾಸ್ ಮೀನಾ ಅವರು ತೀವ್ರ ಗಾಯಗೊಂಡವರು. ಗಾಯಾಳುಗಳನ್ನು ಚಿಕಿತ್ಸೆಗೆ ಸಮೀಪದ ವೈದ್ಯಕೀಯ ಕಾಲೇಜಿನ ಹೊಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿದ ಚಿರತೆ ಮತ್ತೆ ಹಲವಾರು ಮನೆಗಳಿಗೆ ನುಗ್ಗಿದೆ. ಬಳಿಕ ಚಿರತೆಯೂ ಒಂದು ವಸತಿ ಗೃಹದಲ್ಲಿ ಬಂಧನಕ್ಕೊಳಗಾಗಿದೆ. ಆ ವೇಳೆ, ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ವನ್ಯಜೀವಿ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಲಾಡ್‌ಪುರ ವ್ಯಾಪ್ತಿಯ ಅರಣ್ಯ ವಿಭಾಗದ ರೇಂಜರ್‌ ಕುಂದನ್‌ ಸಿಂಗ್‌, ಫಾರೆಸ್ಟರ್‌ ಧರ್ಮೇಂದ್ರ ಚೌಧರಿ ಮತ್ತು ಹರೇಂದ್ರ ಸಿಂಗ್‌ ಅವರ ನೇತೃತ್ವದಲ್ಲಿ ಅಭೇದ ಜೈವಿಕ ಉದ್ಯಾನದ ತಂಡ ಆಗಮಿಸಿ, ಚಿರತೆ ಸೆರೆ ಹಿಡಿಯಿತು. ಬಳಿಕ ಅರಣ್ಯಕ್ಕೆ ಬಿಡಲಾಯಿತು. ಚಿರತ ಕಾರ್ಯಾಚರಣೆ ವೇಳೆ ಅಪಾರ ಜನರು ಸೇರಿದ್ದು, ಅರಣ್ಯ ಅಧಿಕಾರಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ:ದಯನೀಯ ಸ್ಥಿತಿಯಲ್ಲಿ ತಾಯಿ... ಅಣ್ಣ ಬರ್ತಾನೆಂದು ಸುಳ್ಳು ಹೇಳಿ ರೈಲು ಹತ್ತಿಸಿ ಕಳಿಸಿದ ಹೃದಯಹೀನ ಮಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.