ETV Bharat / bharat

ವರದಕ್ಷಿಣಿ ಸಾಲದಿದ್ದಕ್ಕೆ, ಹೆಣ್ಣು ಮಗು ಆಗಿದ್ದಕ್ಕೆ ಗಂಡನ ಪಾದ ನೆಕ್ಕಿಸಿದ ಅತ್ತೆ: ದೂರು ದಾಖಲು - ಮಹಿಳೆಯೊಬ್ಬರು ತನ್ನ ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ

ಯುಪಿಯ ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ತನ್ನ ಗಂಡನ ಪಾದಗಳನ್ನು ನೆಕ್ಕುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮಹಿಳೆಯೊಬ್ಬರು ತನ್ನ ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ

author img

By

Published : Jul 28, 2022, 9:30 PM IST

ಪಾಣಿಪತ್ (ಹರಿಯಾಣ) : ಮಹಿಳೆಯೊಬ್ಬರು ತನ್ನ ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷೆಯ ರೂಪದಲ್ಲಿ ಗಂಡನ ಪಾದಗಳನ್ನು ನೆಕ್ಕಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪಾಣಿಪತ್ ನಿವಾಸಿಯಾಗಿರುವ ಸಂತ್ರಸ್ತೆ ಗಂಭೀರ ಆರೋಪ ಮಾಡಿ ತನ್ನ ಅತ್ತೆಯ ವಿರುದ್ಧ ಚಾಂದಿನಿ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2017 ರ ಡಿಸೆಂಬರ್ 7 ರಂದು ಯುಪಿಯ ಗಾಜಿಯಾಬಾದ್ ನಿವಾಸಿ ದಿವ್ಯಾಂಶ್ ಅವರನ್ನು ಮಹಿಳೆ ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ಅವರ ತಂದೆ ಸುಮಾರು ಐವತ್ತು ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರಂತೆ. ಆದರೂ ಮಹಿಳೆಯ ಅತ್ತೆಗೆ ಸಮಾಧಾನ ಇಲ್ಲದೇ ಇನ್ನೂ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರಂತೆ.

ಮದುವೆಯಾದ 20 ದಿನಗಳ ನಂತರ ಅತ್ತೆ ಮತ್ತು ಅವರ ಪತಿ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಲು ಮುಂದಾಗಿದ್ದರಂತೆ. ಇದಾದ ನಂತರ ಹೆಣ್ಣು ಮಗು ಹುಟ್ಟಿದ ಕೂಡಲೇ ತನ್ನ ಅತ್ತೆ ಆಸ್ಪತ್ರೆಯಲ್ಲಿಯೇ ತನ್ನನ್ನು ನಿಂದಿಸಲು ಆರಂಭಿಸಿದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಶಿಕ್ಷೆಯಾಗಿ ಗಂಡನ ಪಾದಗಳನ್ನು ನೆಕ್ಕುವಂತೆ ಮಾಡಿದ್ದರು ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ 15 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಕೊಡಿಸಲು ನಿನ್ನ ತಂದೆಗೆ ಹೇಳು, ಇಲ್ಲದಿದ್ದರೆ ಪತಿಯೊಂದಿಗೆ ಇರಲು ಬಿಡುವುದಿಲ್ಲ ಎಂದು ಕಿರುಕುಳ ನೀಡುತ್ತಿದ್ದರಂತೆ.

ಸಂತ್ರಸ್ತೆ ಪ್ರಸ್ತುತ ಪಾಣಿಪತ್‌ನ ಚಾಂದಿನಿ ಬಾಗ್ ಪೊಲೀಸ್ ಠಾಣೆಯಲ್ಲಿ ಪತಿ ದಿವ್ಯಾಂಶ್ ಗುಪ್ತಾ, ಮಾವ ನಾಗಿನ್ ಗುಪ್ತಾ, ಅತ್ತೆ ಪ್ರಮೀಳಾ ಮತ್ತು ನಾದಿನಿ ನೂಪುರ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ತಕ್ಷಣ, ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಾಯ್ದೆ 323, 354A, 406,506,498A ಮತ್ತು 34 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಲೆ ಪ್ರವೇಶಿಸುತ್ತಿದ್ದಂತೆ ಮೈ ಮೇಲೆ ದೆವ್ವ ಹಿಡಿದಂತಾಡುವ ಸ್ಟೂಡೆಂಟ್ಸ್​.. ಬಾಲಕಿಯರ ವರ್ತನೆಗೆ ಬೆಚ್ಚಿಬಿದ್ದ ಶಿಕ್ಷಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.