ಮಂಡಿ / ಗೋಹರ್: ಹಿಮಾಚಲಪ್ರದೇಶದಲ್ಲಿ ನಡೆದ ಮೊದಲ ಹಂತದ ಪಂಚಾಯತ್ ರಾಜ್ ಚುನಾವಣೆಯಲ್ಲಿ ದಂಪತಿ ಜಯಭೇರಿ ಭಾರಿಸಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಹಿಮಾಚಲ ಪ್ರದೇಶದ ಜಿಲ್ಲಾ ಮಂಡಿಯ ಗೋಹರ್ ಬ್ಲಾಕ್ನ ಶಾಲಾ ಪಂಚಾಯಿತಿಯಲ್ಲಿ ಪತಿ - ಪತ್ನಿ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. ಮೀನಾಕ್ಷಿ ಎಂಬುವವರು ಅಧ್ಯಕ್ಷರಾಗಿದ್ದರೆ, ಅವರ ಪತಿ ರಾಜ್ ಕುಮಾರ್ ಠಾಕೂರ್ ಉಪ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ.
ಓದಿ: ಹರಿಯಾಣ ಕಿಸಾನ್ ಒಕ್ಕೂಟದ ಅಧ್ಯಕ್ಷನ ಅಮಾನತು: ನಾಳಿನ ಸಭೆಯಿಂದಲೂ ಕಿಕ್ಔಟ್
ಚುನಾವಣೆಗೆ ಪತ್ನಿಯನ್ನು ನಿಲ್ಲಿಸಿದ್ದ ಪತಿ:
ರಾಜ್ಕುಮಾರ್ ಠಾಕೂರ್ ಅವರು ಈ ಹಿಂದೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಈ ವೇಳೆ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಈ ಬಾರಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಮೀಸಲಾಗಿರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದರು. ಇದೀಗ ಅವರು ಗೆಲುವು ಪಡೆದಿದ್ದಾರೆ.
ಅದರಂತೆ ರಾಜ್ ಕುಮಾರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿ ವಿಜಯ ಸಾಧಿಸಿದ್ದು, ದಂಪತಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.