ETV Bharat / bharat

ಗಡಿ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್​ ಹೊಡೆದುರುಳಿಸಿದ ಮಹಿಳಾ ಯೋಧರು!

ಗಡಿ ಭದ್ರತಾ ಪಡೆ ಯೋಧರು ಪಾಕಿಸ್ತಾನದ ಗಡಿ ಬಳಿ ಪಾಕಿಸ್ತಾನದ ಕಡೆಯಿಂದ ಡ್ರೋನ್ ಬರುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾಪಡೆ ಆ ಕಡೆಯಿಂದ ಬರುತ್ತಿದ್ದ ಡ್ರೋನ್​ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂಬಂಧ ಬಿಎಸ್‌ಎಫ್‌ ಶೋಧ ಕಾರ್ಯಾಚರಣೆ ಆರಂಭಿಸಿದೆ.

Pakistani drone shot down by BSF in Firozpur sector of Punjab
ಗಡಿ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್​ ಹೊಡೆದುರುಳಿಸಿದ ಮಹಿಳಾ ಯೋಧರು!
author img

By

Published : Dec 22, 2022, 9:47 AM IST

ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಅಮೃತಸರ ಜಿಲ್ಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಬುಧವಾರ ಬೆಳಗ್ಗೆ ಡ್ರೋನ್​ ಗಡಿ ಪ್ರವೇಶಿಸಿತ್ತು.

ಗಡಿ ಭದ್ರತಾ ಪಡೆಯ ಯೋಧರು ಪಾಕಿಸ್ತಾನದ ಗಡಿ ಬಳಿ ಪಾಕಿಸ್ತಾನದ ಕಡೆಯಿಂದ ಡ್ರೋನ್ ಬರುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾಪಡೆ ಆ ಕಡೆಯಿಂದ ಬರುತ್ತಿದ್ದ ಡ್ರೋನ್​ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂಬಂಧ ಬಿಎಸ್‌ಎಫ್‌ ಶೋಧ ಕಾರ್ಯಾಚರಣೆ ಆರಂಭಿಸಿದೆ.

ಅಧಿಕಾರಿಗಳು ಹೇಳಿದ್ದೇನು?: ಕಳೆದ ತಿಂಗಳು ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಗಡಿ ಪ್ರವೇಶಿಸಿದ ಡ್ರೋನ್ ಅನ್ನು ಬಿಎಸ್‌ಎಫ್​ನ ಎಲ್ಲ ಮಹಿಳಾ ಸ್ಕ್ವಾಡ್ ಹೊಡೆ ದುರುಳಿಸಿತ್ತು. ಅಮೃತಸರ ನಗರದ ಉತ್ತರಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಚಹರ್‌ಪುರ್ ಗ್ರಾಮದ ಬಳಿ ಡ್ರೋನ್ ಭಾರತದ ಭೂಪ್ರದೇಶವನ್ನು ಪ್ರವೇಶಿಸುತ್ತಿರುವುದನ್ನು ಬಿಎಸ್‌ಎಫ್ ಸಿಬ್ಬಂದಿ ರಾತ್ರಿಯ ಸಮಯದಲ್ಲಿ ಗುರುತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

73ನೇ ಬೆಟಾಲಿಯನ್‌ನ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಡ್ರೋನ್​ ಮೇಲೆ 25 ಗುಂಡುಗಳನ್ನು ಹಾರಿಸಿ ರಾತ್ರಿ 11.55 ಕ್ಕೆ ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಇದನ್ನು ಓದಿ: ಪೊಲೀಸರು ಬೆನ್ನಟ್ಟಿದ್ದಾರೆ ಎಂದು ಭಾವಿಸಿ ನದಿಗೆ ಹಾರಿದ ಸ್ಮಗ್ಲರ್ಸ್​.. ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.