ETV Bharat / bharat

ಭಾರತದ ಕ್ಷಿಪಣಿ ತನ್ನ ಭೂ ಪ್ರದೇಶದೊಳಗೆ ಬಿದ್ದಿದೆ: ಪಾಕ್ ಆರೋಪ - ಪಾಕಿಸ್ತಾನಿ ಸಶಸ್ತ್ರ ಪಡೆಗಳ ಆರೋಪ

ಹರಿಯಾಣದಿಂದ ಹಾರಿಸಿದೆ ಎನ್ನಲಾದ ಕ್ಷಿಪಣಿಯೊಂದು ಪಾಕಿಸ್ತಾನ ಭೂಪ್ರದೇಶದೊಳಗೆ ಬಿದ್ದಿದೆ ಎಂದು ಪಾಕ್​ ಸಶಸ್ತ್ರಪಡೆಗಳು ಗಂಭೀರ ಆರೋಪ ಮಾಡಿವೆ.

Pakistan claims Indian projectile fell in Pakistani territory
ಭಾರತದ ಕ್ಷಿಪಣಿ ಪಾಕ್ ಭೂಪ್ರದೇಶದೊಳಗೆ ಬಿದ್ದಿದೆ: ಪಾಕ್ ಆರೋಪ
author img

By

Published : Mar 11, 2022, 8:57 AM IST

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದ ಕ್ಷಿಪಣಿಯೊಂದು ಪಾಕಿಸ್ತಾನಕ್ಕೆ ಸೇರಿದ ಪ್ರದೇಶವೊಂದರಲ್ಲಿ ಬಿದ್ದಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳು ಹೇಳಿಕೊಂಡಿವೆ. ಹರಿಯಾಣ ರಾಜ್ಯದ ಸಿರ್ಸಾ ನಗರಕ್ಕೆ ಸಮೀಪವಿರುವ ಪ್ರದೇಶದಿಂದ ಉಡಾಯಿಸಲಾದ ಕ್ಷಿಪಣಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ನಗರದ ಬಳಿ ಬಿದ್ದಿದೆ ಎನ್ನಲಾಗಿದೆ.

ಗುರವಾರ ಸಂಜೆ 6:43ಕ್ಕೆ ಪಾಕಿಸ್ತಾನದ ವಾಯುಪಡೆಯು ತನ್ನ ಭೂಪ್ರದೇಶದೊಳಗೆ ಬಿದ್ದಿದ್ದ ಕ್ಷಿಪಣಿಯೊಂದನ್ನು ಗುರುತಿಸಿದೆ. ಈ ಕ್ಷಿಪಣಿ ಇದ್ದಕ್ಕಿದ್ದಂತೆ ಪಾಕಿಸ್ತಾನದ ಪ್ರದೇಶದ ಕಡೆಗೆ ವೇಗವಾಗಿ ನುಗ್ಗಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳ ವಕ್ತಾರರನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕ್ಷಿಪಣಿಯಿಂದಾಗಿ ಸ್ವಲ್ಪ ಮಟ್ಟದ ಹಾನಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ಪಾಕಿಸ್ತಾನ ಮಿಲಿಟರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಕುರಿತು ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ದೆಹಲಿಗೆ ತಲುಪಿತು ಉಕ್ರೇನ್​ನಿಂದ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ.. ಮತ್ತೆರಡು ವಿಮಾನಗಳ ಆಗಮನದ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.