ಪಂಜಾಬ್ : ಸಮಾಜ ವಿರೋಧಿ ಶಕ್ತಿಗಳು ಮತ್ತು ದೇಶ ವಿರೋಧಿಗಳ ತಂತ್ರಗಳನ್ನು ವಿಫಲಗೊಳಿಸುವ ಸಲುವಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜವಾನರು ಮತ್ತು ಪಂಜಾಬ್ ಪೊಲೀಸರು ಗಡಿ ಗ್ರಾಮಗಳಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಮಾರಣಾಂತಿಕ ಡ್ರಗ್ಸ್ ಮತ್ತು ಇತರ ಶಸ್ತ್ರಾಸ್ತ್ರಗಳ ಸರಬರಾಜು ಮಾಡುವ ಮೂಲಕ ದೇಶದ ಯುವಕರ ಜೀವನ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನವೊಂದನ್ನು ಇದೀಗ ಪೊಲೀಸರು ಮತ್ತು ಬಿಎಸ್‌ಎಫ್ ಜಂಟಿಯಾಗಿ ವಿಫಲಗೊಳಿಸಿದ್ದು, ಚೀನಾದಲ್ಲಿ ತಯಾರಾದ ಪಾಕಿಸ್ತಾನದ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ಪಂಜಾಬ್ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ತರ್ನ್ ತರನ್ ಜಿಲ್ಲೆಯ ಹೊಲವೊಂದರಲ್ಲಿ ಚೀನಾದಲ್ಲಿ ತಯಾರಿಸಿದ ಪಾಕಿಸ್ತಾನಿ ಡ್ರೋನ್ ಅನ್ನು ವಶಪಡಿಸಿಕೊಂಡಿದೆ. ಮಾರಿ ಕಾಂಬೋಕೆ ಗ್ರಾಮದ ಬಳಿಯ ರೈತ ಬಿಯಾಂತ್ ಸಿಂಗ್ ಅವರ ಹೊಲದಿಂದ ಡಿಜಿ ಮ್ಯಾಟ್ರಿಕ್ಸ್ ಡ್ರೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ಗುಪ್ತ ಮಾಹಿತಿ ಆಧರಿಸಿ ಜಂಟಿ ಕಾರ್ಯಾಚರಣೆ : ಬಿಎಸ್‌ಎಫ್ 103 ಬೆಟಾಲಿಯನ್ ಮತ್ತು ಪೊಲೀಸ್ ಠಾಣೆಯ ಮುಖ್ಯಸ್ಥ ಖಲ್ರಾ ಬಲ್ವಿಂದರ್ ಸಿಂಗ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಖಲ್ರಾ ಗಡಿಯ ಸಮೀಪವಿರುವ ಗಡಿ ಪ್ರದೇಶದ ಬಿಒಪಿ ಚೌಕಿ ಧರಂ ಸಿಂಗ್ ಬಳಿ ಅನುಮಾನಾಸ್ಪದ ಡ್ರೋನ್ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದರು. ಶೋಧ ಕಾರ್ಯಾಚರಣೆ ವೇಳೆ ಮಡಿ ಕಾಂಬೋಕೆ ನಿವಾಸಿ ದರ್ಶನ್ ಸಿಂಗ್ ಅವರ ಪುತ್ರ ಬಿಯಾಂತ್ ಸಿಂಗ್ ಅವರ ಹೊಲದಲ್ಲಿ ಚೀನಾ ನಿರ್ಮಿತ ಡ್ರೋನ್ನಿಂದ ಡಿಜಿ ಮ್ಯಾಟ್ರಿಕ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮತ್ತು ಬಿಎಸ್‌ಎಫ್‌ನಿಂದ ಹೆಚ್ಚಿನ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ : ಶಿವಮೊಗ್ಗ : ಸಮಾಜಘಾತುಕರ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಯಿಂದ ಡ್ರೋನ್ ಪ್ರಯೋಗ
ಡಿಜಿ ಮ್ಯಾಟ್ರಿಕ್ಸ್ ಡ್ರೋನ್ ವಶಕ್ಕೆ: ಈ ಕುರಿತು ಮಾಹಿತಿ ನೀಡಿದ ಡಿಎಸ್‌ಪಿ ಪ್ರೀತೀಂದರ್ ಸಿಂಗ್, ರಹಸ್ಯ ಮಾಹಿತಿಯ ಆಧಾರದ ಮೇಲೆ ಗಡಿ ಗ್ರಾಮವಾದ ಮಡಿ ಕಾಂಬೋಕೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಬಿಯಾಂತ್ ಸಿಂಗ್ ಎಂಬುವ ಹೊಲದಲ್ಲಿ ಸಂಜೆ ವೇಳೆಗೆ ಚೀನಾದ ಡಿಜಿ ಮ್ಯಾಟ್ರಿಕ್ಸ್ ಡ್ರೋನ್ ವಶಪಡಿಸಿಕೊಳ್ಳಲಾಯಿತು. ಈ ಬಗ್ಗೆ ಪೊಲೀಸರು ಖಲ್ರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಡ್ರೋನ್ ಮೂಲಕ ಸಾಗಿಸುತ್ತಿದ್ದ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹಾಗೆಯೇ, ಆರೋಪಿಗಳನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದರು.