ಕ್ಯಾಲಿಕಟ್:ಚಿತ್ರಕಲೆಗೆ ಯಾವುದೇ ಜಾತಿ ಧರ್ಮವಿಲ್ಲ ಎನ್ನುವುದನ್ನು ಕೇರಳದ ಕ್ಯಾಲಿಕಟ್ನ ಮುಸ್ಲಿಂ ಮಹಿಳೆ 43 ವರ್ಷದ ಸನಮ್ ಫಿರೋಜ್ ಸಾಬೀತು ಪಡಿಸಿದ್ದಾರೆ. ಮುಸ್ಲಿಂ ಧರ್ಮದ ಹಿನ್ನೆಲೆ ಇದ್ದರೂ ಎಲ್ಲ ಅಡೆತಡೆಗಳನ್ನು ಮೀರಿ ತನ್ನ ಚಿತ್ರಕಲೆಯಲ್ಲಿ ಹಿಂದೂ ದೇವರಾದ ಶ್ರೀಕೃಷ್ಣ ಮತ್ತು ಗಣೇಶ ವಿವಿಧ ಪ್ರಕಾರದ ಪೇಂಟಿಂಗ್ಗಳನ್ನು ಬಿಡಿಸಿ ದೇಶಾದ್ಯಂತ ಮನೆಮಾತಾಗಿದ್ದಾರೆ. ಹಿಂದೂ ಧರ್ಮದ ಶ್ರೀಕೃಷ್ಣ ಮತ್ತು ಗಣೇಶ ವಿವಿಧ ಆಕಾರದ ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಂ MuralIndia.inದಲ್ಲಿ ಪರಿಚಯಿಸಿದ್ದು, ಆ ಪೇಂಟಿಂಗ್‌ಗಳು ಈಗ ಜಗತ್ತಿನಾದ್ಯಂತ ಹೆಚ್ಚು ಖ್ಯಾತಿ ಪಡೆಯುತ್ತಿವೆ.
ಸನಮ್ ತನ್ನ ಆಲೋಚನೆಗಳಿಗೆ ವಿನ್ಯಾಸ ನೀಡಿ, ತನ್ನ ಸೃಜನಶೀಲ ಪೆಂಟಿಂಗ್ ಆನಂದಿಸುತ್ತಾರೆ. ಬಾಲ್ಯದಿಂದಲೂ ಚಿತ್ರ ಬಿಡಿಸುತ್ತಿದ್ದ ಸನಮ್ ಮದುವೆಯ ನಂತರವೂ ಆ ಕಾಯಕವನ್ನು ಮುಂದುವರಿಸಿಕೊಂಡ ಬಂದಿದ್ದಾರೆ. ಸನಮ್ ಬಿಡಿಸುವ ಚಿತ್ರಕಲೆ ಸಂಪ್ರದಾಯವು ಆಕೆಯ ಪೋಷಕ ಶಬೀರ್ ಜಾನ್, ಜುಹ್ರಾ ಅವರಿಂದ ಆನುವಂಶಿಕವಾಗಿ ಬಂದ ಕಲೆಯಾಗಿದೆ. ಆದರೂ ಮೂರು ವರ್ಷಗಳ ಕಾಲ ಖ್ಯಾತ ವರ್ಣಚಿತ್ರಕಾರ ಸತೀಶ್ ತಾಯತ್ ಅವರಿಂದಲೂ ಮ್ಯೂರಲ್ ಪೇಂಟಿಂಗ್ ಕಲಿತರು.
ಗೃಹಿಣಿಯಿಂದ ವರ್ಣಚಿತ್ರಕಾರ ಕಲಾವಿದನ ಹಾದಿಯಲ್ಲಿ ಸಾಗಿದ ಸನಮ್, ತನ್ನ ಆಲೋಚನೆಗಳು ಮತ್ತು ವಿನ್ಯಾಸಗಳನ್ನು ಚಿತ್ರಿಸಲು ವಿಭಿನ್ನ ಮಾಧ್ಯಮಗಳನ್ನು ಬಳಸಿಕೊಂಡಿದ್ದಾರೆ. ಸಾಂಪ್ರದಾಯಿಕ ಚೌಕಟ್ಟುಗಳನ್ನು ಬಳಸುವುದರ ಹೊರತಾಗಿ ಬಿದಿರಿನ ಕಾಂಡಗಳು ಮತ್ತು ಮಣ್ಣಿನ ಮಡಕೆಗಳಲ್ಲಿ ಚಿತ್ರಗಳನ್ನು ಚಿತ್ರಿಸಿರುವುದುಂಟು. ಅವರು ಸೀರೆ, ಚೂಡಿದಾರ್‌ಗಳು, ಶರ್ಟ್‌ಗಳು, ಧೋತಿಗಳು ಇತ್ಯಾದಿಗಳಲ್ಲಿ ವಿವಿಧ ರೀತಿಯ ಚಿತ್ರಗಳನ್ನು ಸಹ ಬಿಡಿಸಿದ್ದಾರೆ
ಹಿಂದೂ ದೇವರ ಗಣೇಶನೊಂದಿಗೆ ಚಿತ್ರ ಬರೆಯಲೂ ಪ್ರಾರಂಭಿಸಿದ ನಾನು, ನಂತರ ಕೃಷ್ಣನ ಚಿತ್ರ ತೆಗೆಯಲು ಶುರುಮಾಡಿದೆ. ಶ್ರೀಕೃಷ್ಣನನ್ನು ಚಿತ್ರಿಸುವುದು ವಿಭಿನ್ನ ಅನುಭವ, ನಾನು ಅದನ್ನು ತುಂಬಾ ಆನಂದಿಸುತ್ತೇನೆ, ನಾನು ಕೃಷ್ಣನ ವಿವಿಧ ರೂಪಗಳನ್ನು ಚಿತ್ರಿಸಿದ್ದೇನೆ. ಅದು ನನಗೆ ಚಿತ್ರಕಲೆಯಲ್ಲಿ ದೊಡ್ಡ ಶಕ್ತಿ ನೀಡಿತು ಎನ್ನುತ್ತಾರೆ ಸನಮ್.
ಗುರುವಾಯೂರ್ ದೇವಸ್ಥಾನಕ್ಕೆ ಕೃಷ್ಣ ವರ್ಣಚಿತ್ರ ಬಿಡಿಸಲು ಅವುಕಾಶ ಸಿಕ್ಕಿದ್ದು ದೊಡ್ಡ ಭಾಗ್ಯ ಎಂದು ಸನಮ್ ಪರಿಗಣಿಸಿದ್ದಾರೆ. ತನ್ನ ಪ್ರತಿ ಪೇಂಟಿಂಗ್ದಲ್ಲಿ ತಮ್ಮ ಸೃಜನಶೀಲ ಪ್ರತಿಭೆ ಅನಾವರಣಕ್ಕೆ ಪ್ರಯತ್ನಿಸುತ್ತಾರೆ. ಶ್ರೀಕೃಷ್ಣನ ಬಾಲ್ಯದಿಂದ ಗೀತೋಪದೇಶದ ವರೆಗಿನ ಜೀವನದ ಆಧಾರಿತ ಶ್ರೀಕೃಷ್ಣನ ಅವತಾರ ಸರಣಿ ಚಿತ್ರಗಳನ್ನು ಚಿತ್ರಿಸಲೂ ಅವರು ಯೋಜಿಸುತ್ತಿದ್ದಾರೆ.
ಎಲ್ಲೆಡೆ ಸನಮ್ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ: ಸನಮ್ ಅವರು ತಾನು ಬರೆದ ಪೇಂಟಿಂಗ್ಗಳನ್ನು ತನ್ನ Instagram muralindia.inದಲ್ಲಿ ಪರಿಚಯಿಸಿ, ಗೃಹಧಾರಿತ ಉದ್ಯಮವಾಗಿ ಮಾಡಿಕೊಂಡಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಚಿತ್ರ ಕಲಾವಿದೆ ಎಂದು ಗುರುತಿನ ಚಿತ್ರ ಪಡೆದಿದ್ದು, ಭಾರತದಾದ್ಯಂತ ವಿವಿಧ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಎಲ್ಲೆಡೆ ಸನಮ್ ಬಿಡಿಸಿದ ಪೇಂಟಿಂಗ್‌ಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತಿವೆ. ಹೆಚ್ಚಿನ ಬೆಲೆಗೆ ಚಿತ್ರಪ್ರಿಯರು ಪೇಂಟಿಂಗ್ ಖರೀದಿಸಲು ಸಾಧ್ಯವಿಲ್ಲ ಎಂದು ಅರಿತು ಸನಮ್ ಒಂದು ಹೆಜ್ಜೆ ಮುಂದೆ ಹೋಗಿ ಸಣ್ಣ ಮೇಲ್ಮೈ ಇರುವ ವಸ್ತುಗಳಲ್ಲಿ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಈಗ ಕೀ ಚೈನ್‌ಗಳು ಮತ್ತು ಲಾಕೆಟ್‌ಗಳಲ್ಲಿ ಪೇಂಟಿಂಗ್ ಮಾಡಲು ನಿಶ್ಚಯಿಸಿದ್ದಾರೆ.
ಮಹಿಳೆಯರಿಗೆ ಮ್ಯೂರಲ್ ಪೇಂಟಿಂಗ್ ತರಗತಿ ಸಹ ಆಯೋಜಿಸುತ್ತಾರೆ. ಮಹಿಳೆಯರಿಗೆ ಆರು ತಿಂಗಳ ಕೋರ್ಸ್ ಲಭ್ಯವಿದೆ. ತ್ವರಿತವಾಗಿ ಕಲಿಯಲು ಬಯಸುವವರಿಗೆ ಅವಳು ಎರಡು ವಾರಗಳ ಕೋರ್ಸ್ ಅನ್ನು ಸಹ ಶುರು ಮಾಡಿದ್ದಾರೆ. ಅತಿಥಿ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿರುವ ಮಗಳು ಸಾನುಫರ್ ಖಾನ್ ಸಹ ತಾಯಿಯ ಹಾದಿಯಲ್ಲಿ ಸಾಗಿದ್ದಾರೆ. ಮಗಳು ಸಹ ಬಿಡುವಿನ ವೇಳೆಯಲ್ಲಿ ಮ್ಯೂರಲ್ ಪೇಂಟಿಂಗ್‌ನಲ್ಲಿ ತೊಡಗುತ್ತಾಳೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಮಗ ಫರ್ದೀನ್ ಖಾನ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪತಿ ಫಿರೋಜ್ ಖಾನ್ ಸದಾ ಸನಮ್ ಜೊತೆಗಿರುತ್ತಾರೆ.
ಇದನ್ನೂಓದಿ:ಮಹಿಳಾ ದಿನದ ವಿಶೇಷ: ಈ ದೇಗುಲಗಳು ಮಹಿಳೆಯರಿಗೆ ಮೀಸಲು, ಪುರುಷರಿಗಿಲ್ಲ ಪ್ರವೇಶ