ನವದೆಹಲಿ: ಕೋವಿಡ್ ಸೋಂಕು ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗಿದೆ. ದೆಹಲಿ ನಗರಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತರ್ತು ಆಮ್ಲಜನಕದ ಅವಶ್ಯತೆಯಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಆಮ್ಲಜನಕದ ಕೊರತೆಯ ಬಗ್ಗೆ ಹಲವು ಆಸ್ಪತ್ರೆಗಳಿಂದ ಕರೆಗಳು ಬರುತ್ತಿವೆ. ಕೆಲವರಿಗೆ ತುರ್ತಾಗಿ ಆಮ್ಲಜನಕ ಬೇಕಾಗಿದೆ ಎಂದು ದೆಹಲಿಯ ಕೋವಿಡ್ ನಿರ್ವಹಣಾ ನೋಡಲ್ ಸಚಿವರು ಕೂಡ ಆಗಿರುವ ಸಿಸೋಡಿಯಾ ತಿಳಿಸಿದ್ದಾರೆ.
"ದೆಹಲಿಯ ಅನೇಕ ಆಸ್ಪತ್ರೆಗಳಲ್ಲಿ ಮುಂದಿನ 8-12 ಗಂಟೆಗಳವರೆಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕ ಲಭ್ಯವಿದೆ. ನಮಗೆ ಆಮ್ಲಜನಕ ಪೂರೈಕೆ ಕೋಟಾವನ್ನು ಹೆಚ್ಚಿಸಲು ನಾವು ಒಂದು ವಾರದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ನಾಳೆ ಬೆಳಗ್ಗೆ ವೇಳೆಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಆಸ್ಪತ್ರೆಗಳಿಗೆ ತಲುಪದಿದ್ದರೆ ಪರಿಸ್ಥಿತಿ ಹದೆಗೆಡಲಿದೆ" ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಕೆಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ಹಂಚಿಕೊಂಡಿರುವ ಡಿಸಿಎಂ, ಅಲ್ಲಿ ಆಮ್ಲಜನಕ ಲಭ್ಯವಿರುವ ಅವಧಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
-
दिल्ली में अधिकतर अस्पतालों में केवल अगले 8 से 12 घंटे के लिए ही ऑक्सिजन उपलब्ध है.
— Manish Sisodia (@msisodia) April 20, 2021 " class="align-text-top noRightClick twitterSection" data="
हम एक हफ़्ते से दिल्ली को ऑक्सिजन सप्लाई कोटा बढ़ाने की माँग कर रहे हैं जोकि केंद्र सरकार को करना है . अगर कल सुबह तक पर्याप्त मात्रा में अस्पतालों में ऑक्सिजन नहीं पहुँची तो हाहाकार मच जाएगा. pic.twitter.com/omO7RCTaCj
">दिल्ली में अधिकतर अस्पतालों में केवल अगले 8 से 12 घंटे के लिए ही ऑक्सिजन उपलब्ध है.
— Manish Sisodia (@msisodia) April 20, 2021
हम एक हफ़्ते से दिल्ली को ऑक्सिजन सप्लाई कोटा बढ़ाने की माँग कर रहे हैं जोकि केंद्र सरकार को करना है . अगर कल सुबह तक पर्याप्त मात्रा में अस्पतालों में ऑक्सिजन नहीं पहुँची तो हाहाकार मच जाएगा. pic.twitter.com/omO7RCTaCjदिल्ली में अधिकतर अस्पतालों में केवल अगले 8 से 12 घंटे के लिए ही ऑक्सिजन उपलब्ध है.
— Manish Sisodia (@msisodia) April 20, 2021
हम एक हफ़्ते से दिल्ली को ऑक्सिजन सप्लाई कोटा बढ़ाने की माँग कर रहे हैं जोकि केंद्र सरकार को करना है . अगर कल सुबह तक पर्याप्त मात्रा में अस्पतालों में ऑक्सिजन नहीं पहुँची तो हाहाकार मच जाएगा. pic.twitter.com/omO7RCTaCj
ಇದನ್ನೂ ಓದಿ: ರೆಮ್‌ಡೆಸಿವಿರ್ ಮೇಲಿನ ಆಮದು ಸುಂಕ ತೆರವುಗೊಳಿಸಿದ ಕೇಂದ್ರ ಸರ್ಕಾರ
ನಾವು (ದೆಹಲಿ ಸರ್ಕಾರ) ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಸೋಮವಾರ 241 ಮೆಟ್ರಿಕ್ ಟನ್ ಮತ್ತು ಮಂಗಳವಾರ (3 ಗಂಟೆಯವರೆಗೆ) 355.33 ಮೆಟ್ರಿಕ್ ಟನ್ ಆಮ್ಲಜನಕವನ್ನು ಐದು ಉತ್ಪಾದಕರಿಂದ ಪೂರೈಸಿದ್ದೇವೆ. ಮಂಗಳವಾರ 3 ಗಂಟೆಯವರೆಗೆ ದೆಹಲಿ ನಗರದ ಎಲ್ಲಾ ಆಸ್ಪತ್ರೆಗಳಲ್ಲಿರುವುದು ಸೇರಿ ಒಟ್ಟು 508 ಮೆಟ್ರಿಕ್ ಟನ್ ಆಮ್ಲಜನಕ ಲಭ್ಯವಿತ್ತು ಎಂದು ಸಿಎಂ ಕಚೇರಿ ಮಂಗಳವಾರ ರಾತ್ರಿ ಮಾಹಿತಿ ನೀಡಿದೆ.
-
Acute shortage of oxygen at GTB Hospital. Oxygen may not last beyond 4 hrs. More than 500 corona patients on oxygen. Pl help@PiyushGoyal
— Satyendar Jain (@SatyendarJain) April 20, 2021 " class="align-text-top noRightClick twitterSection" data="
to restore oxygen supply to avert major crisis. pic.twitter.com/QNMSoWgNTA
">Acute shortage of oxygen at GTB Hospital. Oxygen may not last beyond 4 hrs. More than 500 corona patients on oxygen. Pl help@PiyushGoyal
— Satyendar Jain (@SatyendarJain) April 20, 2021
to restore oxygen supply to avert major crisis. pic.twitter.com/QNMSoWgNTAAcute shortage of oxygen at GTB Hospital. Oxygen may not last beyond 4 hrs. More than 500 corona patients on oxygen. Pl help@PiyushGoyal
— Satyendar Jain (@SatyendarJain) April 20, 2021
to restore oxygen supply to avert major crisis. pic.twitter.com/QNMSoWgNTA
ಈ ನಡುವೆ, ಆಮ್ಲಜನಕ ಕೊರತೆ ನೀಗಿಸುವಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಕೇಂದ್ರ ಸಚಿವ ಪಿಯೂಷ್ ಗೋಯಲ್ಗೆ ಮನವಿ ಮಾಡಿದ್ದರು. ಸಚಿವರ ಮನವಿ ಫಲ ಕಂಡಿದ್ದು, ಸರ್ಕಾರ ದೆಹಲಿಯ ಜಿಟಿಬಿ ಆಸ್ಪತ್ರೆಗೆ ಆಮ್ಲಜನಕದ ಟ್ಯಾಂಕರ್ ಕಳುಹಿಸಿಕೊಟ್ಟಿದೆ.