ETV Bharat / bharat

ಧೈರ್ಯ ಇದ್ರೆ ಹೈದರಾಬಾದ್​ಗೆ ಬಂದು ಮೋದಿ ಸಭೆ ನಡೆಸಲಿ: ಓವೈಸಿ ಸವಾಲು

author img

By

Published : Nov 26, 2020, 4:32 PM IST

ಕೇಂದ್ರ ಸಚಿವರನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸುವ ಪ್ರಧಾನಿ ಮೋದಿ, ಧೈರ್ಯವಿದ್ದರೆ ತಾವೇ ಖುದ್ದಾಗಿ ಹೈದರಾಬಾದ್​ಗೆ ಬಂದು ಒಂದು ಸಭೆ ನಡೆಸಿ ನೋಡಲಿ. ಈ ಮೂಲಕ ತಮ್ಮ ಶಕ್ತಿ-ಸಾಮರ್ಥ್ಯ ಸಾಬೀತು ಪಡಿಸಲಿ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

Asaduddin owaisi
ಪಿಎಂ ಮೋದಿಗೆ ಒವೈಸಿ ಸವಾಲು

ಹೈದರಾಬಾದ್: ಇಲ್ಲಿಗೆ ಬಂದು ಒಂದೇ ಒಂದು ಸಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲಿ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸವಾಲೆಸಿದ್ದಾರೆ.

ಪಿಎಂ ಮೋದಿಗೆ ಓವೈಸಿ ಸವಾಲು

ತೆಲಂಗಾಣದ ಹೈದರಾಬಾದ್​ನ ಅಕ್ಬರ್​ಬಾದ್​ ಪ್ರದೇಶದಲ್ಲಿ ಸಂಸದ ಓವೈಸಿ ಸ್ಥಳೀಯ ಚುನಾವಣೆಗೆ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸಚಿವರನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸುವ ಪ್ರಧಾನಿ ಮೋದಿ, ಧೈರ್ಯವಿದ್ದರೆ ತಾವೇ ಖುದ್ದಾಗಿ ಹೈದರಾಬಾದ್​ಗೆ ಬಂದು ಒಂದು ಸಭೆ ನಡೆಸಿ ನೋಡಲಿ. ಈ ಮೂಲಕ ತಮ್ಮ ಶಕ್ತಿ-ಸಾಮರ್ಥ್ಯ ಸಾಬೀತು ಪಡಿಸಲಿ ಎಂದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 74 ಸ್ಥಾನಗಳನ್ನ ಗೆದ್ದಿದೆ. ಬಿಜೆಪಿಯ ಸ್ಥಾನ ಕುಗ್ಗುತ್ತಿದ್ದು ಈಗಲಾದರೂ ಪಕ್ಷ ತನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಓವೈಸಿ ವ್ಯಂಗ್ಯವಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.