ETV Bharat / bharat

ಕೋವಿಡ್‌ ತಡೆಯಲು ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡಿ; ಲಸಿಕೆ ಕೊನೆಯ ಅಸ್ತ್ರವಾಗಲಿ: ಡಾ.ಅಜಯ್‌ ಗಂಭೀರ್‌ - ಲಸಿಕೆ ಕೊನೆಯ ಅಸ್ತ್ರವಾಗಬೇಕು ಎಂದ ಡಾ.ಅಜಯ್‌ ಗಂಭೀರ್‌

ಪರಿಸ್ಥಿತಿ ಹೆಚ್ಚಿನ ನಿಯಂತ್ರಣದಲ್ಲಿರುವಾಗ ಲಸಿಕೆಗಳು ಸಾಂಕ್ರಾಮಿಕ ರೋಗಕ್ಕೆ ಆದ್ಯತೆಯ ಪರಿಹಾರವಾಗಿರಬಾರದು ಎನ್ನುತ್ತಾರೆ ದೆಹಲಿ ವೈದ್ಯಕೀಯ ಸಂಘದ ಕಾರ್ಯದರ್ಶಿ ಮತ್ತು 'ವ್ಯಾಕ್ಸಿನ್ ಇಂಡಿಯಾ' ಅಧ್ಯಕ್ಷ ಡಾ.ಅಜಯ್ ಗಂಭೀರ್.

Experts caution against 'overuse' of vaccine
ಕೋವಿಡ್‌ ತಡೆಯಲು ಪ್ರೋಟೋಕಾಲ್‌ಗೆ ಮೊದಲ ಆದ್ಯತೆ ನೀಡಿ; ಲಸಿಕೆ ಕೊನೆಯ ಅಸ್ತ್ರವಾಗಬೇಕು - ಡಾ.ಅಜಯ್‌ ಗಂಭೀರ್‌
author img

By

Published : Dec 28, 2021, 1:21 PM IST

ನವದೆಹಲಿ: ದೇಶದಲ್ಲಿ ಕೋವಿಡ್‌ ಹಾಗೂ ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ವೈರಸ್‌ನಿಂದ ರಕ್ಷಣೆ ಪಡೆಯಲು ಲಸಿಕೆಗಳನ್ನು ಅವಲಂಬಿಸುವ ಬದಲು ಜನರು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಇರುವ ಮಾರ್ಗಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ತಜ್ಞರು ಹೇಳುತ್ತಿದ್ದಾರೆ.

ಈಟಿವಿ ಭಾರತ್‌ ಜೊತೆ ಮಾತನಾಡಿದ ದೆಹಲಿ ವೈದ್ಯಕೀಯ ಸಂಘದ ಕಾರ್ಯದರ್ಶಿ ಮತ್ತು 'ವ್ಯಾಕ್ಸಿನ್ ಇಂಡಿಯಾ' ಅಧ್ಯಕ್ಷ ಡಾ. ಅಜಯ್ ಗಂಭೀರ್, 'ಲಸಿಕೆ ಪಡೆಯುವ ಬದಲು ಕೋವಿಡ್‌ ಪ್ರೋಟೋಕಾಲ್ ಅನುಸರಿಸುವುದು ಆದ್ಯತೆಯಾಗಿರಬೇಕು' ಎಂದರು.

2022ರ ಜನವರಿಯಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರು, 60 ವರ್ಷಕ್ಕಿಂತ ಮೇಲ್ಪಟ್ಟ ಬಹು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಭಾರತ ಮುನ್ನೆಚ್ಚರಿಕೆಯ ಮೂರನೇ ಡೋಸ್ ನೀಡಲು ಮುಂದಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡಾ ಕೇಂದ್ರ ಸರ್ಕಾರದಿಂದ ಬೂಸ್ಟರ್ ಡೋಸ್ ಅನ್ನು ಒತ್ತಾಯಿಸಿದ್ದರು. ಈಗ ಪ್ರಧಾನಿ ಘೋಷಿಸಿದ ನಂತರ ಹೆಚ್ಚುವರಿ ಲಸಿಕೆಗೆ ಅವಕಾಶ ನೀಡಲಾಗುತ್ತಿದೆ. ಆದರೆ ಈ ಲಸಿಕೆಗಳು ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು ಎಂದು ಡಾ.ಗಂಭೀರ್‌ ತಿಳಿಸಿದ್ದಾರೆ.

ವಿಶೇಷವಾಗಿ, ಪರಿಸ್ಥಿತಿ ಹೆಚ್ಚಿನ ನಿಯಂತ್ರಣದಲ್ಲಿರುವಾಗ ಲಸಿಕೆಗಳು ಸಾಂಕ್ರಾಮಿಕ ರೋಗಕ್ಕೆ ಆದ್ಯತೆಯ ಪರಿಹಾರವಾಗಿರಬಾರದು. ಪ್ರತಿದಿನ ಹೊಸ ವಿಷಯಗಳು ಹಾಗೂ ವಾದಗಳು ಮುಂದೆ ಬರುತ್ತಿವೆ. ಕೋವಿಡ್ -19 ಸೋಂಕನ್ನು ತಪ್ಪಿಸಲು ಕೊರೊನಾ ಮುನ್ನೆಚ್ಚರಿಕಾ ಕ್ರಮಗಳು ಮೊದಲ ಆದ್ಯತೆಯಾಗಿರಬೇಕು. ಲಸಿಕೆಗಳು ಕೊನೆಯ ಅಸ್ತ್ರವಾಗಿರಲಿ. ವ್ಯಾಕ್ಸಿನೇಷನ್ ನಂತರ ರೋಗಗಳು ಮರುಕಳಿಸುವುದಿಲ್ಲ ಎಂಬುದು ಸ್ಥಾಪಿತ ಸತ್ಯವಾದರೂ, ಕೊರೊನಾವೈರಸ್ ಮತ್ತು ಒಮಿಕ್ರಾನ್‌ ಎರಡೂ ಇದಕ್ಕೆ ಹೊರತಾಗಿವೆ ಎಂದು ಅವರು ಹೇಳುತ್ತಾರೆ.

ಲಸಿಕೆಯ ಅತಿಯಾದ ಬಳಕೆಯು, ವೈರಸ್ ತನ್ನ ಸ್ವರೂಪವನ್ನು ಬದಲಾಯಿಸುವ ಪ್ರವೃತ್ತಿಯನ್ನು ಹೊಂದಿರುವ ಕಾರಣ ದೀರ್ಘ ಸಾಂಕ್ರಾಮಿಕ ಅವಧಿಗೆ ಕಾರಣವಾಗುತ್ತದೆ. ಲಸಿಕೆಯಿಂದ ಯಾವುದೇ ಅಪಾಯವನ್ನು ಗ್ರಹಿಸಿದ ತಕ್ಷಣ, ಅದು ಹೊಸ ರೂಪಾಂತರವಾಗಿ ವಿಕಸನಗೊಳ್ಳುತ್ತದೆ. ಈ ವಿಕಸನವು ನಿರಂತರ ಪ್ರಕ್ರಿಯೆ. ಯಾವುದೇ ಲಸಿಕೆ ಇದಕ್ಕೆ ಪೂರ್ಣವಿರಾಮ ಹಾಕಲು ಸಾಧ್ಯವಿಲ್ಲ. ಲಸಿಕೆಯಲ್ಲಿ ಮತ್ತೆ ಮತ್ತೆ ಬದಲಾವಣೆಗಳನ್ನು ಮಾಡಬೇಕಾಗಿದೆ. ನೀವು ಹೆಚ್ಚು ಬಾರಿ ಬದಲಾವಣೆಗಳನ್ನು ಮಾಡಿದರೆ ಹೆಚ್ಚಾಗಿ ವೈರಸ್ ತನ್ನ ರೂಪವನ್ನು ಬದಲಾಯಿಸುತ್ತದೆ ಎಂದು ಅವರು ವಿಶ್ಲೇಷಿಸಿದರು.

ಇದನ್ನೂ ಓದಿ: ಕೋವಿಡ್‌ ಲಸಿಕೆ ಕೊವೊವಾಕ್ಸ್, ಕಾರ್ಬೋವ್ಯಾಕ್ಸ್, ಮೊಲ್ನುಪಿರವಿರ್‌ ಮಾತ್ರೆ ತುರ್ತು ಬಳಕೆಗೆ ಅನುಮತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.