ETV Bharat / bharat

ಕೋವಿನ್​ ಪೋರ್ಟ್​ನಲ್ಲಿ ಲಸಿಕೆಗಾಗಿ 1 ಗಂಟೆಯೊಳಗೆ ನೋಂದಣಿ ಆದವರೆಷ್ಟು ಗೊತ್ತೇ? - ಕೋವಿನ್ ಅಪ್ಲಿಕೇಷನ್

ಕೋವಿನ್ ಪೋರ್ಟಲ್‌ನಲ್ಲಿ ನೋಂದಣೆ ವೇಳೆ ಅನೇಕ ಬಳಕೆದಾರರು ತೊಂದರೆ ಅನುಭವಿಸಿದರು. ಬಹುತೇಕರು ಒನ್‌-ಟೈಮ್ ಪಾಸ್‌ವರ್ಡ್ (ಒಟಿಪಿ) ವಿಳಂಬ ಮತ್ತು ಸರ್ವರ್ ಕ್ರ್ಯಾಶ್​ಗೆ ಬೇಸತ್ತು ದೂರಿದ್ದಾರೆ. ಆದರೆ, ಆರೋಗಾ ಸೇತು ಆ್ಯಪ್‌ನ ಟ್ವಿಟರ್ ಹ್ಯಾಂಡಲ್ ಮೂಲಕ ಸರ್ಕಾರ ಮೊದಲ ಗಂಟೆಯಲ್ಲಿ 35 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

vaccination
vaccination
author img

By

Published : Apr 28, 2021, 10:40 PM IST

ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​-19 ಲಸಿಕೆ ನೋಂದಣಿ ಬುಧವಾರ ಸಂಜೆ 4:00 ಗಂಟೆಗೆ ಪ್ರಾರಂಭವಾಯಿತು. ಶುರುವಾದ ಒಂದು ಗಂಟೆಯೊಳಗೆ 35 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.

ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ವೇಳೆ ಅನೇಕ ಬಳಕೆದಾರರು ತೊಂದರೆ ಅನುಭವಿಸಿದರು. ಬಹುತೇಕರು ಒನ್‌-ಟೈಮ್ ಪಾಸ್‌ವರ್ಡ್ (ಒಟಿಪಿ) ವಿಳಂಬ ಮತ್ತು ಸರ್ವರ್ ಕ್ರ್ಯಾಶ್​ಗೆ ಬೇಸತ್ತು ದೂರಿದ್ದಾರೆ. ಆದರೆ, ಆರೋಗ್ಯ ಸೇತು ಆ್ಯಪ್‌ನ ಟ್ವಿಟರ್ ಹ್ಯಾಂಡಲ್ ಮೂಲಕ ಸರ್ಕಾರ ಮೊದಲ ಗಂಟೆಯಲ್ಲಿ 35 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

  • More than 35 lakhs people registered in the first hour after launch of 18 plus registration on https://t.co/S3pUooMbXX. Appointments for 18-44 will be available when State Govts and Private Vaccination Centers schedule sessions.

    — Aarogya Setu (@SetuAarogya) April 28, 2021 " class="align-text-top noRightClick twitterSection" data=" ">

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್.ಎಸ್.ಶರ್ಮಾ ಅವರು ಈ ವ್ಯವಸ್ಥೆ ಸಿದ್ಧವಾಗಿದೆ. ಹೆಚ್ಚಿನ ಸಂಖ್ಯೆಯ ನೋಂದಣಿಗೆ ಸಜ್ಜಾಗಿದೆ. ನೋಂದಣಿ ಪ್ಲಾಟ್​ಫಾರ್ಮ್​ನಲ್ಲಿ ನಾವು ದಿನದಲ್ಲಿ ಸುಮಾರು 5 ಮಿಲಿಯನ್ ಜನರ ಪರೀಕ್ಷಾ ನೋಂದಣಿ ಹೊಂದಿದ್ದೇವೆ. ನೋಂದಣಿಗಳು ತೆರೆದ ನಂತರ ಈ ಸಂಖ್ಯೆ ದ್ವಿಗುಣವಾಗಬಹುದು. ನಾವು ಅದಕ್ಕೆ ಸಿದ್ಧರಿದ್ದೇವೆ ಎಂದರು.

45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೋಂದಾಯಿಸಿದರೂ ಜನರು ಏಕೆ ನೇಮಕಾತಿ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಶರ್ಮಾ ಅವರು, ಸ್ಲಾಟ್‌ಗಳ ಲಭ್ಯತೆಯು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗಿದೆ. ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ವ್ಯಾಕ್ಸಿನೇಷನ್ ಕೇಂದ್ರಗಳು ಮತ್ತು ಲಸಿಕೆ ಬೆಲೆಗಳ ವಿವರಗಳೊಂದಿಗೆ ಬೋರ್ಡ್​ ಮುಂದೆ ಬಂದಾಗ ಮಾತ್ರ ಬಳಕೆದಾರರು ಆರ್ಡರ್​ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.