ಸಹರಾನ್ಪುರ (ಉತ್ತರ ಪ್ರದೇಶ): ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದದ ಕಾವು ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಹೈಕೋರ್ಟ್ ತೀರ್ಪು ಬರುವವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ.
-
#WATCH Muslim sisters-daughters understand our clear intentions. We made them free of Tripple Talaak; gave protection. When BJP received support from Muslim women, these vote-'thekedaar' got restless that their daughter is saying 'Modi-Modi'... They're tricking Muslim sisters: PM pic.twitter.com/uUytLvockp
— ANI UP/Uttarakhand (@ANINewsUP) February 10, 2022 " class="align-text-top noRightClick twitterSection" data="
">#WATCH Muslim sisters-daughters understand our clear intentions. We made them free of Tripple Talaak; gave protection. When BJP received support from Muslim women, these vote-'thekedaar' got restless that their daughter is saying 'Modi-Modi'... They're tricking Muslim sisters: PM pic.twitter.com/uUytLvockp
— ANI UP/Uttarakhand (@ANINewsUP) February 10, 2022#WATCH Muslim sisters-daughters understand our clear intentions. We made them free of Tripple Talaak; gave protection. When BJP received support from Muslim women, these vote-'thekedaar' got restless that their daughter is saying 'Modi-Modi'... They're tricking Muslim sisters: PM pic.twitter.com/uUytLvockp
— ANI UP/Uttarakhand (@ANINewsUP) February 10, 2022
ಯುಪಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಸರ್ಕಾರ 'ಹರ್ ಮಜ್ಲೂಮ್', ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಮುಸ್ಲಿಂ ಸಹೋದರಿಯರ ಬದುಕನ್ನು ಮತ್ತಷ್ಟು ಹಿಂದಕ್ಕೆ ತಳ್ಳುವ ಕೆಲಸ ನಡೆಯುತ್ತಿದೆ. ಇಂತಹ ಘಟನೆಗಳು ಮುಸ್ಲಿಂ ಹೆಣ್ಣು ಮಕ್ಕಳ ಜೀವನ ಯಾವಾಗಲೂ ಹಿಂದೆಯೇ ಇರುವಂತೆ ಮಾಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಜಾಬ್ ಧರಿಸಿ ಫುಟ್ಬಾಲ್ ಆಡಿದ ವಿದ್ಯಾರ್ಥಿನಿಯರು... ಟೀಕಾಕಾರರಿಗೆ ತಕ್ಕ ಉತ್ತರ!
ಮುಸ್ಲಿಂ ಸಹೋದರಿಯರು, ಮುಸ್ಲಿಂ ಹೆಣ್ಣುಮಕ್ಕಳು ನಮ್ಮ ಸರ್ಕಾರದ ಸ್ಪಷ್ಟ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವು ಅವರನ್ನು ತ್ರಿವಳಿ ತಲಾಕ್‌ನಿಂದ ಮುಕ್ತಗೊಳಿಸಿ ರಕ್ಷಣೆ ನೀಡಿದ್ದೇವೆ. 'ತೀನ್ ತಲಾಖ್' ನಿಷೇಧ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಮುಸ್ಲಿಂ ಮಹಿಳೆಯರು ಬೆಂಬಲಿಸಿದಾಗ ಓಟು ಕಲೆ ಹಾಕುವ ಈ 'ತೇಕೇದಾರ'ರರಿಗೆ ತಮ್ಮ ಮಕ್ಕಳು ಮೋದಿ, ಮೋದಿ ಎಂದು ಹೇಳುವುದನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವರು ಮುಸ್ಲಿಂ ಸಹೋದರಿಯರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.