ETV Bharat / bharat

ಈ ಅಹಂಕಾರಿ ರಾಜನಿಗೆ ಜನತೆ ಉತ್ತರ ಕೊಡುತ್ತಾರೆ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

ಪ್ರಧಾನಿ ಮೋದಿ ತನ್ನ ಅಧಿಕಾರದ ಹಿಂದೆ ಅಡಗಿಕೊಂಡಿದ್ದಾರೆ. ಅವರು ಅಹಂಕಾರಿಯಾಗಿದ್ದು, ಈ ಅಹಂಕಾರಿ ರಾಜನಿಗೆ ಜನತೆ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತೀಕ್ಷ್ಣವಾದ ದಾಳಿ ನಡೆಸಿದ್ದಾರೆ.

our-family-nurtured-democracy-of-this-country-with-their-blood-priyanka-gandhi-lashes-out-at-bjp
ಈ ಅಹಂಕಾರಿ ರಾಜನಿಗೆ ಜನತೆ ಉತ್ತರ ಕೊಡುತ್ತಾರೆ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
author img

By

Published : Mar 26, 2023, 6:07 PM IST

ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಾ ಪ್ರಹಾರ ಮಾಡಿದ್ದಾರೆ. ನಮ್ಮನ್ನು ಹೆದರಿಸುವ ಮತ್ತು ಅವಮಾನಿಸುವ ಮೂಲಕ ಅವರು (ಬಿಜೆಪಿಯವರು) ನಮ್ಮ ಧ್ವನಿ ಅಡಗಿಸಲು ಭಾವಿಸುತ್ತಾರೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವ ಕ್ರಮವನ್ನು ಖಂಡಿಸಿ ದೆಹಲಿಯ ರಾಜ್​ಘಾಟ್​ನಲ್ಲಿ ಕಾಂಗ್ರೆಸ್​ ವತಿಯಿಂದ ಸಂಕಲ್ಪ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಗಾಂಧಿ, ನಮ್ಮನ್ನು ಹೆದರಿಸುವ ಮತ್ತು ಅವಮಾನಿಸುವ ಮೂಲಕ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಇಲ್ಲಿ ಕೇಳಿ, ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಾರ್ವಜನಿಕರ ಕಷ್ಟಪಟ್ಟು ದುಡಿದ ಹಣವನ್ನು ಲೂಟಿ ಮಾಡಿ ಕೆಲವೇ ಜನರಿಗೆ ಸೇರದಂತೆ ನಾವು ನೋಡಿಕೊಳ್ಳುತ್ತೇನೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.

  • इस देश के लोकतंत्र को मेरे परिवार के खून ने सींचा है।

    जो सोचते हैं कि हमें अपमानित कर, एजेंसियों से छापे मरवाकर हमें डरा देंगे, वो गलत सोचते हैं।

    हम डरने वाले नहीं हैं।

    : 'संकल्प सत्याग्रह' में @priyankagandhi जी pic.twitter.com/hci3LXwIjS

    — Congress (@INCIndia) March 26, 2023 " class="align-text-top noRightClick twitterSection" data=" ">

ನಮ್ಮಲ್ಲಿ ದ್ವೇಷದ ಸಿದ್ಧಾಂತವಿಲ್ಲ- ಪ್ರಿಯಾಂಕಾ ಗಾಂಧಿ: ಈ ದೇಶದ ಪ್ರಜಾಪ್ರಭುತ್ವವನ್ನು ತಮ್ಮ ರಕ್ತದಿಂದ ಪೋಷಿಸಿದವರು ನಮ್ಮ ಕುಟುಂಬದವರು. ನನ್ನ ಸಹೋದರ (ರಾಹುಲ್​ ಗಾಂಧಿ) ಪ್ರಧಾನಿ ಮೋದಿಯವರ ಬಳಿಗೆ ಹೋಗಿ ಅವರನ್ನು ಸಂಸತ್ತಿನಲ್ಲಿ ಅಪ್ಪಿಕೊಂಡರು. ನಿಮ್ಮ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದರು. ನಾವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರಬಹುದು. ಆದರೆ, ನಮ್ಮಲ್ಲಿ ದ್ವೇಷದ ಸಿದ್ಧಾಂತವಿಲ್ಲ ಎಂದು ಹೇಳಿದರು.

ನೀವು (ಬಿಜೆಪಿಯವರು) 'ಪರಿವಾರವಾದ' ಬಗ್ಗೆ ಮಾತನಾಡುತ್ತೀರಿ, ಭಗವಾನ್ ರಾಮ ಯಾರು ಎಂದು ನಾನು ಕೇಳಲು ಬಯಸುತ್ತೇನೆ. ರಾಮನನ್ನು ವನವಾಸಕ್ಕೆ ಕಳುಹಿಸಲಾಯಿತು. ತನ್ನ ಕುಟುಂಬ, ಈ ಭೂಮಿಗಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ರಾಮ 'ಪರಿವಾರವಾದಿ' ಆಗಿದ್ದಾರೋ ಅಥವಾ ಪಾಂಡವರು ತಮ್ಮ ಕುಟುಂಬದ ಸಂಸ್ಕೃತಿಗಾಗಿ ಹೋರಾಡಿದ ಕಾರಣಕ್ಕಾಗಿ 'ಪರಿವಾರವಾದಿ' ಆಗಿದ್ದರೋ?, ನಮ್ಮ ಕುಟುಂಬದ ಸದಸ್ಯರು ದೇಶದ ಜನರಿಗಾಗಿ ಹೋರಾಡಿದ ಕಾರಣಕ್ಕಾಗಿ ನಾವು ನಾಚಿಕೆಪಡಬೇಕೇ ಎಂದು ಪ್ರಿಯಾಂಕಾ ಪ್ರಶ್ನಿಸಿದರು.

  • संसद में मेरे शहीद पिता का अपमान किया। शहीद के बेटे को 'मीर जाफर' कहा गया।

    BJP के CM कहते हैं कि इनके पिता कौन हैं? PM भरी संसद में 'नेहरू सरनेम' पर सवाल उठाते हैं?

    आप पर तो कोई केस नहीं होता, आपकी सदस्यता रद्द नहीं होती।

    : 'संकल्प सत्याग्रह' में @priyankagandhi जी pic.twitter.com/XIlYgukyxP

ಅವರು (ಬಿಜೆಪಿಯವರು) ನನ್ನ ಕುಟುಂಬವನ್ನು ಸಾಕಷ್ಟು ಬಾರಿ ಅವಮಾನಿಸಿದ್ದಾರೆ. ನನ್ನ ಸಹೋದರ ಮತ್ತು ತಾಯಿ ಬಗ್ಗೆ ಅವಮಾನ ಮಾಡಲಾಯಿತು. ಆದರೆ, ನಾವು ಮೌನವಾಗಿದ್ದೇವೆ. ಒಬ್ಬ ಮಂತ್ರಿ ರಾಹುಲ್​ ಅವರಿಗೆ ತಂದೆ ಯಾರು ಗೊತ್ತಿಲ್ಲ ಎಂದು ಹೇಳುತ್ತಾರೆ. ಒಬ್ಬ ಸಿಎಂ ನನ್ನ ತಾಯಿ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಸಂಸತ್ತಿನಲ್ಲಿ ಪರಿವಾರವು ನೆಹರೂ ಉಪನಾಮ ಯಾಕೆ ಬಳಸಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಅವರ ಯಾರ ವಿರುದ್ಧವೂ ಯಾವುದೇ ಕ್ರಮ ಜರುಗಿಸಲ್ಲ ಯಾಕೆ?, ನಿಮ್ಮನ್ನು ಯಾಕೆ ಅನರ್ಹತೆ ಮಾಡಲ್ಲ. ಜೈಲಿಗೆ ಕಳುಹಿಸಲ್ಲ. ಚುನಾವಣೆಯಿಂದ ಸ್ಪರ್ಧಿಸದಂತೆ ತಡೆಯಲ್ಲ ಎಂದು ವಾಗ್ದಾಳಿ ಮಾಡಿದರು.

ಹುತಾತ್ಮನ ಮಗನಿಗೆ ಅವಮಾನ- ಪ್ರಿಯಾಂಕಾ: ನನ್ನ ತಂದೆಯ ಮೃತದೇಹವು ಈ ತ್ರಿವರ್ಣ ಧ್ವಜದ ಅಡಿಯಲ್ಲಿತ್ತು. ನೀವು ಸಂಸತ್ತಿನಲ್ಲಿ ಆ ಹುತಾತ್ಮನನ್ನು ಅವಮಾನಿಸುತ್ತೀರಿ, ನೀವು ಹುತಾತ್ಮನ ಮಗನನ್ನು, ದೇಶದ್ರೋಹಿ, ಮೀರ್ ಜಾಫರ್ ಎಂದು ಕರೆಯುತ್ತೀರಿ, ನೀವು ನೆಹರು ಕುಟುಂಬದತ್ತ ಬೆರಳು ತೋರಿಸುತ್ತೀರಿ, ನೀವು ಕಾಶ್ಮೀರಿ ಸಂಪ್ರದಾಯವನ್ನು ಅವಮಾನಿಸುತ್ತೀರಿ ಎಂದು ತೀಕ್ಷ್ಣವಾದ ದಾಳಿ ನಡೆಸಿದರು.

ಒಬ್ಬ ವ್ಯಕ್ತಿಯನ್ನು ಉಳಿಸಲು ಯಾಕೆ ಪ್ರಯತ್ನ ಮಾಡುತ್ತೀರಿ. ಅದಾನಿ ಯಾರು?. ಆ ಹೆಸರು ಕೇಳಿ ತಕ್ಷಣ ಯಾಕೆ ಭಯ ಪಡುತ್ತೀರಿ?. ನನ್ನ ಮೇಲೂ ಕೇಸ್​ ಹಾಕಿ. ನನ್ನನ್ನು ಜೈಲಿಗೆ ತೆಗೆದುಕೊಂಡು ಹೋಗಿ. ಸತ್ಯವೆಂದರೆ ಪ್ರಧಾನಿ ಹೇಡಿ ಇದ್ದಾರೆ. ತನ್ನ ಅಧಿಕಾರದ ಹಿಂದೆ ಅಡಗಿಕೊಂಡಿದ್ದಾರೆ. ಅವರು ಅಹಂಕಾರಿ ಇದ್ದಾರೆ. ಈ ದೇಶದ ತುಂಬಾ ಹಳೆಯ ಪರಂಪರೆಯಾಗಿದ್ದು, ಹಿಂದೂ ಧರ್ಮದ ಪರಂಪರೆ ಇದೆ. ಅದು ಏನೆಂದರೆ, ಈ ಅಹಂಕಾರಿ ರಾಜನಿಗೆ ಜನತೆ ಉತ್ತರ ಕೊಡುತ್ತಾರೆ ಎಂದೂ ಪ್ರಿಯಾಂಕಾ ಹೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.