ನವದೆಹಲಿ: ವಿನೋದ, ಸಂತೋಷದ ಅರ್ಥಗಳೇ ಈಗಿನ ಜಾಯಮಾನದಲ್ಲಿ ಹೊಸ ಅರ್ಥ ಪಡೆದುಕೊಳ್ಳುತ್ತಿವೆ. ಆಂಗ್ಲಭಾಷೆಯಲ್ಲಿ 'ಫನ್' ಅನ್ನೋ ಪದ ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆಯಾದರೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಅರ್ಥ ವ್ಯತ್ಯಾಸ ಸ್ವಲ್ಪ ಮಟ್ಟಿಗೆಯಾದರೂ ಗೋಚರಿಸದಿರದು.
ಈ ಆನ್ಲೈನ್ ಯುಗದಲ್ಲಿ ಫನ್ನ ಅರ್ಥ ಕೂಡಾ ಸಂಪೂರ್ಣವಾಗಿ ಬದಲಾಗಿದೆ. ನೀವೇನಾದ್ರೂ ಆನ್ಲೈನ್ನಲ್ಲಿ ಫನ್ ಅನ್ನೋದರ ಅರ್ಥವನ್ನು ಹುಡುಕೋದಕ್ಕೆ ಹೋದ್ರೆ ಖಂಡಿತಾ ಅದು ಬೇರೆ ಲೋಕಕ್ಕೆ ಕೊಂಡೊಯ್ಯುತ್ತದೆ.
ಇನ್ಸ್ಟಾಗ್ರಾಂನಲ್ಲಿ ಆನ್ಲೈನ್ ಫನ್, ಪೇಯ್ಡ್ ಫನ್, ಆನ್ಲೈನ್ ಸರ್ವೀಸ್, ಪೇಟಿಯಂ ಫನ್, ಕಾಲ್ ಗರ್ಲ್ ಎಂಬುದರ ಬಗ್ಗೆ ಹುಡುಕಾಡಿದರೆ ಆಧುನಿಕ ಯುಗದಲ್ಲಿ ಫನ್ ಎಂದರೇನು? ಎಂಬುದರ ಬಗ್ಗೆ ನಿಮಗೆ ಗೊತ್ತಾಗುತ್ತದೆ.
ಕೇಂದ್ರ ಸರ್ಕಾರ ಈಗಾಗಲೇ ಅಶ್ಲೀಲ ವೆಬ್ಸೈಟ್ಗಳನ್ನ ಬ್ಯಾನ್ ಮಾಡಿದ್ದು, ಅವುಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆದರೆ ಫೇಸ್‌ಬುಕ್, ವಾಟ್ಸಪ್, ಟ್ವಿಟರ್ ಮತ್ತು ಇತರ ಸೋಷಿಯಲ್ ಮೀಡಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್ಲೈನ್ ಫನ್ ಹೆಸರಿನಲ್ಲಿ ಮತ್ತೆ ಅಶ್ಲೀಲತೆ ವಕ್ಕರಿಸುತ್ತಿದೆ.
ಏನಿದು ಆನ್ಲೈನ್ ಫನ್..?
ಈ ಮೇಲೆ ಹೇಳಿದ ಕೀ ವರ್ಡ್ಗಳಲ್ಲಿ, ಈ ಮೇಲ್ಕಂಡ ಸೋಷಿಯಲ್ ಮೀಡಿಯಾಗಳಲ್ಲಿ ನೀವೇನಾದರೂ ಸರ್ಚ್ ಮಾಡಿದ್ರೆ, ಯಾರೋ ಒಬ್ಬ ವ್ಯಕ್ತಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಆಕೆ ಅಥವಾ ಆತನನ್ನು ನೀವು ಸಂಪರ್ಕಿಸಿದ ತಕ್ಷಣ ವಾಟ್ಸಪ್ ಅಥವಾ ಇನ್ಸ್ಟಾದಲ್ಲಿ ವಿಡಿಯೋ ಕಾಲ್ ಮಾಡುತ್ತಾರೆ. ಆಕೆಗೆ ಅಥವಾ ಆತನಿಗೆ ನೀವು ಹಣ ಪಾವತಿಸಿದ ನಂತರ ಕೆಮರಾದ ಮುಂದೆ ಆತ/ ಆಕೆ ನಗ್ನವಾಗುತ್ತಾರೆ.
ಈ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಆಗಿದ್ದು, ಪೇಟಿಯಂ, ಗೂಗಲ್ಪೇ, ಫೋನ್ ಪೇ ಯಾವ ರೀತಿಯಲ್ಲಾದರೂ ಹಣ ಪಾವತಿ ಮಾಡಿ ಎಂದು ಆಕೆ/ಆತ ಕೇಳುತ್ತಾರೆ. ಕೇವಲ 15 ನಿಮಿಷಕ್ಕೆ ಇಷ್ಟು ಹಣ... ಇನ್ನೂ ಹೆಚ್ಚಿನ ಸಮಯ ಬೇಕಾದರೆ ಇನ್ನಷ್ಟು ಹಣ ಎಂದು ಮೊದಲೇ ನಿಗದಿಪಡಿಸಿರುತ್ತಾರೆ.
ಕೆಲವೊಂದು ಬಾರಿ ಅದರಲ್ಲೂ ವೀಕೆಂಡ್ಗಳಲ್ಲಿ 'ಬೇಡಿಕೆ' ತುಂಬಾ ಇದೆ. 15 ನಿಮಿಷಕ್ಕೆ ಸಾವಿರ ರೂಪಾಯಿ ಎಂದು ಹೇಳುವವರೂ ಇರುತ್ತಾರೆ. ಇದರಲ್ಲಿ ಕೆಲವೊಬ್ಬರು ಮೊದಲೇ ಸ್ಕ್ರೀನ್ ರೆಕಾರ್ಡ್ ಮಾಡಿ, ಅದನ್ನು ಲೈವ್ ವಿಡಿಯೋ ಎಂಬಂತೆ ಬಿಂಬಿಸಿ, ಹಣ ಪಡೆಯುತ್ತಾರೆ. ಹುಡುಗಿಯರ ಸ್ಕ್ರೀನ್ ರೆಕಾರ್ಡ್ ಬಳಸಿ, ಹಣ ಮಾಡುವ ಹುಡುಗರೂ ಕೂಡಾ ಈ ದಂಧೆಯಲ್ಲಿರುತ್ತಾರೆ.
ಡೇಟಿಂಗ್ ವೆಬ್ಸೈಟ್ ಮತ್ತು ಪೋರ್ನ್
ಪೋರ್ನ್ ಸೈಟ್ಗಳೂ ಬ್ಯಾನ್ ಆದರೂ ಕೂಡಾ ಡೇಟಿಂಗ್ ಅಪ್ಲಿಕೇಷನ್ಗಳಾದ ಟಿಂಡರ್, ಟ್ರೂಲಿ ಮ್ಯಾಡ್ಲಿ, ಒಕೆಕ್ಯೂಪಿಡ್ ಮುಂತಾದ ಅಪ್ಲಿಕೇಷನ್ಗಳೂ ಆನ್ಲೈನ್ ಸರ್ವಿಸ್ ನೀಡುತ್ತಿವೆ. ಕೆಲವರು ವ್ಯಕ್ತಿಗಳನ್ನು ಆಕರ್ಷಿಸಲಿ ವಾಟ್ಸಪ್, ಇನ್ಸ್ಟಾಗಳಲ್ಲಿ ಪ್ರಚೋದನಕಾರಿ ಭಾವಚಿತ್ರಗಳನ್ನು ಹಾಕುತ್ತಾರೆ. ಪ್ರಚೋದನಕಾರಿ ಭಾವಚಿತ್ರಗಳ ಜೊತೆಗೆ ಆನ್ಲೈನ್ ಸರ್ವೀಸ್ಗೆ ಬೆಲೆಯನ್ನೂ ಕೂಡಾ ಕೆಲವರು ನಮೂದಿಸಿರುತ್ತಾರೆ.
ನಾವು ಯಾವುದೇ ಮಾಡೆಲ್ ಫೋಟೋಗಳನ್ನು ಬಳಸಿಲ್ಲ ಎಂದು ಹೇಳಿಕೊಂಡು, ಸಾಮಾನ್ಯ ವ್ಯಕ್ತಿಗಳ ಪ್ರಚೋದನಕಾರಿ ಫೋಟೋಗಳನ್ನೇ ಹಾಕಿರುತ್ತಾರೆ. ಇದರ ಜೊತೆಗೆ ಆನ್ಲೈನ್ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಬೇರೊಬ್ಬ ವ್ಯಕ್ತಿಗೆ ಮಾರುವ ದಂಧೆಯೂ ನಡೆಯುತ್ತಿದೆ. ಇನ್ನು ಆನ್ಲೈನ್ ಸೇವೆಗೆ ಬರುವುದಾದರೆ ಕೇವಲ 50 ರೂಪಾಯಿಗೂ ಆತ ಅಥವಾ ಆಕೆ ನಗ್ನವಾಗಲು ಸಿದ್ಧರಿರುತ್ತಾರೆ.
ಮೋಸ, ಡೆಮೋಗಳು ಮತ್ತು ಕೋವಿಡ್..!
ಕೆಲವೊಮ್ಮೆ 'ಗಿರಾಕಿ'ಗೆ ನಂಬಿಕೆ ಬರದ ವೇಳೆಯಲ್ಲಿ ಡೆಮೋ ನೀಡುವುದಾಗಿ ಹೇಳುತ್ತಾರೆ. ಅದಕ್ಕೆ ಸ್ವಲ್ಪ ಮಟ್ಟಿಗಿನ ಹಣವನ್ನು ಫಿಕ್ಸ್ ಮಾಡಲಾಗುತ್ತದೆ. ಈ ಡೆಮೋ ಹಣವನ್ನು ಪಡೆದ ನಂತರ ಕೆಲವು ಮಂದಿ ಗಿರಾಕಿಗೆ 'ವಂಚಿಸುತ್ತಾರೆ'.
ಕೋವಿಡ್ ಇರುವುದರಿಂದ, ಲಾಕ್ಡೌನ್ ಹೇರಿಕೆಯಾದ ಕಾರಣದಿಂದ ನಾವು ಬೇರೆ ರೀತಿಯಲ್ಲಿ ಹಣ ಮಾಡಲು ಸಾಧ್ಯವಿಲ್ಲ. ನಮ್ಮನ್ನು ನಂಬಿ, ಹಣಕ್ಕೆ ಬೇರೆ ಮಾರ್ಗವಿಲ್ಲದ ಕಾರಣ ಈ ವೃತ್ತಿಯನ್ನು ನ್ಯಾಯಯುವಾಗಿ ಮಾಡುತ್ತಿದ್ದೇವೆ ಎಂದು 'ಗಿರಾಕಿಯಲ್ಲಿ' ನಂಬಿಕೆ ಹುಟ್ಟಿಸಲು ಪ್ರಯತ್ನಿಸುತ್ತಾರೆ.
ಸ್ಪೈ ಕ್ಯಾಮ್ ಚಿತ್ರ, ವಿಡಿಯೋ ಮಾರಾಟ..
ಆನ್ಲೈನ್ ಸೇವೆಗಳಲ್ಲಿ ಅತ್ಯಂತ ಕರಾಳಮುಖ ಹೊಂದಿರುವುದು ಈ ಸ್ಪೈ ಕ್ಯಾಮ್ ಚಿತ್ರಗಳ ಮಾರಾಟ. ಪಬ್ಲಿಕ್ ಟಾಯ್ಲೆಟ್, ಹೋಟೆಲ್ ರೂಮ್, ಡ್ರೆಸ್ ಚೇಂಜಿಂಗ್ ರೂಮ್, ಮತ್ತಿತರ ಖಾಸಗಿ ಸ್ಥಳಗಳಲ್ಲಿ ಸ್ಪೈ ಕೆಮರಾಗಳನ್ನು ಅಳವಡಿಸಿ, ಆ ಚಿತ್ರಗಳನ್ನು, ವಿಡಿಯೋಗಳನ್ನು ಮಾರಾಟ ಮಾಡುವ ದಂಧೆಯೂ ದೊಡ್ಡ ಮಟ್ಟದಲ್ಲಿದೆ. ಇವುಗಳಲ್ಲಿ 'ಎಕ್ಸ್ಕ್ಲೂಸಿವ್' ಎಂಬ ಹಣೆಪಟ್ಟಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಮಾರಲಾಗುತ್ತದೆ.
ಭಾರತದಲ್ಲಿ ಪೋರ್ನ್ ವೆಬ್ಸೈಟ್ಗಳಿಗೆ ಪರ್ಯಾಯವಾಗಿ ಇದೊಂದು ಜಾಲ ತುಂಬಾ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಯುವಜನಾಂಗ ಈ ಜಾಲ ಪ್ರಮುಖ ಭಾಗವಾಗಿದ್ದು, ಕಠಿಣ ಕ್ರಮ ಕೈಗೊಂಡು, ಅವರಲ್ಲಿ ಜಾಗೃತಿ ಮೂಡಿಸದೇ ಇದ್ದರೆ, ದೇಶ ಗಂಡಾಂತರಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ.