ಲೋಹರ್ದಗಾ( ಜಾರ್ಖಂಡ್): ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಐಇಡಿ ಸ್ಫೋಟ ಸಂಭವಿಸಿ, ಕೋಬ್ರಾ ಪಡೆಯ ಇಬ್ಬರು ಯೋಧರು ಗಾಯಗೊಂಡಿರುವ ಘಟನೆ ಜಾರ್ಖಂಡ್ ರಾಜ್ಯದ ಲೋಹರ್ದಗಾ ಎಂಬಲ್ಲಿ ನಡೆದಿದೆ.
ಕೋಬ್ರಾ ವಿಶೇಷ ಕಾರ್ಯಾಚರಣೆ ಘಟಕ ಮತ್ತು ಜಾರ್ಖಂಡ್ ಪೊಲೀಸರು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಬುಲ್‌ಬುಲ್ - ಪೆಶ್ರಾರ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿಮಾನದಲ್ಲಿ ರಾಂಚಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಕೋಬ್ರಾ ಪಡೆಯು ಸಿಆರ್ಪಿಎಪ್ನ ವಿಶೇಷ ಕಾರ್ಯಾಚರಣೆಯ ಘಟಕವಾಗಿದ್ದು, ಇದಕ್ಕೆ ಸೇರಿದ ದಿಲೀಪ್ ಕುಮಾರ್ ಮತ್ತು ನಾರಾಯಣ ದಾಸ್ ಗಾಯಗೊಂಡಿದ್ದಾರೆ. ಅವರನ್ನು ರಾಂಚಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೆಶ್ರಾರ್ ಪೊಲೀಸ್ ಠಾಣೆಯ ಅಧಿಕಾರಿ ರಿಷಿ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಬ್ಬರೂ ಓದಿ: ಮಗನಿಗಾಗಿ ಪ್ರಾಣತ್ಯಾಗ ಮಾಡಿದ ತಂದೆ.. ವಿಹಾರ ತಂದ ವಿಷಾದದ ಘಟನೆ
ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳು ಹೆಚ್ಚಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಅವರಲ್ಲಿ ಕೆಲವರು ಪೊಲೀಸರ ಬಳಿ ಬಂದು ಭಯ ತೋಡಿಕೊಂಡಿದ್ದಾರೆ. ನಕ್ಸಲರನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಿಷಿ ಕುಮಾರ್ ಹೇಳಿದ್ದಾರೆ.