ನವದೆಹಲಿ: ಅಫ್ಘಾನಿಸ್ತಾನದಲ್ಲಿದ್ದ ಭಾರತೀಯರನ್ನು ಹೊತ್ತ ವಾಯುಪಡೆಯ ಒಂದು ಸಿ -17 ಹೆಸರಿನ ವಿಮಾನವು ಇಂದು ಮಧ್ಯಾಹ್ನ ನವದೆಹಲಿಗೆ ಬಂದಿಳಿದಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಮತ್ತಷ್ಟು ಜನರನ್ನು ಸ್ಥಳಾಂತರಿಸಲು ವಿದೇಶಾಂಗ ಇಲಾಖೆ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇಂದು ಮುಂಜಾನೆ, ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಭಾರತೀಯರನ್ನು ಸ್ಥಳಾಂತರಿಸುವುದಾಗಿ ವಿದೇಶಾಂಗ ಇಲಾಖೆ ಹೇಳಿಕೆ ನೀಡಿತ್ತು. ಅದರಂತೆ ಒಂದು ವಿಮಾನದಲ್ಲಿ ಜನರನ್ನು ಕರೆತರಲಾಗಿದೆ. ಇನ್ನೊಂದು ವಿಮಾನವನ್ನು ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ