ನವದೆಹಲಿ : ಭಾರತದಲ್ಲಿ ಇಂದು ದಾಖಲೆಯ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ 1.33 ಕೋಟಿಗೂ ಅಧಿಕ ಡೋಸ್ಗಳನ್ನು ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಹಿನ್ನೆಲೆ ಇಂದು ದಾಖಲೆಯ ಸಂಖ್ಯೆಯಲ್ಲಿ ಲಸಿಕೆ ನೀಡಲು ಬಿಜೆಪಿ ಯೋಜಿಸಿತ್ತು. ಇಂದಿನ ಲಸಿಕಾ ಅಭಿಯಾನವು ‘ಸೇವಾ ದಿವಸ್’ನ ಭಾಗವಾಗಿದೆ. ಮೊದಲ ಅವಧಿಗೆ ಮೋದಿ ಪ್ರಧಾನಿಯಾದ ವರ್ಷ 2014ರಿಂದ ಬಿಜೆಪಿ ‘ಸೇವಾ ದಿವಸ್’ ನಡೆಸಿಕೊಂಡು ಬರುತ್ತಿದೆ.
ಕಳೆದ ಆರು ವರ್ಷಗಳಲ್ಲಿ ಸೇವಾ ದಿವಸ್ ಆಚರಣೆಯನ್ನು ಒಂದು ವಾರದವರೆಗೆ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಸಾರ್ವಜನಿಕ ಸೇವೆಯಲ್ಲಿ ಮೋದಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸೇವಾ ದಿವಸ್ ಆಚರಣೆಯನ್ನು 20 ದಿನಗಳವರೆಗೆ ಆಚರಿಸಲಾಗುತ್ತದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಇಂದು 1.5 ಕೋಟಿ ಡೋಸ್ ಕೊರೊನಾ ಲಸಿಕೆ ನೀಡುವ ಗುರಿ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಓದಿ: ‘ನಮೋ’ಗೆ 71 ವರ್ಷದ ಜನ್ಮದಿನದ ಸಂಭ್ರಮ.. ಅವರ ಆಡಳಿತದ ಹಾದಿಯತ್ತ ಒಂದು ನೋಟ