ETV Bharat / bharat

ಟೊಮೆಟೊ ಆಯ್ತು ಈಗ ಕಣ್ಣೀರು ತರಿಸ್ತಿದೆ ಈರುಳ್ಳಿ - ಗಗನಕ್ಕೇರುತ್ತಿರುವ ಬೆಲೆ..: 5 ಕೆಜಿಗೆ 350 ರೂ.. ! - ಈರುಳ್ಳಿ ಗುಣಮಟ್ಟಕ್ಕೆ ಅನುಗುಣ

ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಶೇ.57ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಗ್ರಾಹಕರಿಗೆ ಪರಿಹಾರ ನೀಡಲು ಕ್ರಮ ಕೈಗೊಂಡಿದೆ. ಸಂಗ್ರಹವಾಗಿರುವ ಈರುಳ್ಳಿ ದಾಸ್ತಾನು ಸಬ್ಸಿಡಿ ಅಡಿಯಲ್ಲಿ ಮಾರಾಟ ಮಾಡಲು ವಿಶೇಷ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

On high onion prices  onion trader at Ghazipur vegetable market  onion prices double  ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆಲೆ  ಈರುಳ್ಳಿ ಮಾರಾಟ ಮಾಡಲು ಕೇಂದ್ರ ನಿರ್ಧಾರ  ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ  ಕೇಂದ್ರ ಸರ್ಕಾರ ಗ್ರಾಹಕರಿಗೆ ಪರಿಹಾರ ನೀಡಲು ಕ್ರಮ  ಈರುಳ್ಳಿ ದಾಸ್ತಾನು ಸಬ್ಸಿಡಿ ಅಡಿಯಲ್ಲಿ ಮಾರಾಟ  ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ ಈರುಳ್ಳಿಯ ಬೆಲೆ  ಈರುಳ್ಳಿ ಗುಣಮಟ್ಟಕ್ಕೆ ಅನುಗುಣ  ಈರುಳ್ಳಿಯ ಬೆಳೆ ಕಡಿಮೆ
ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆಲೆ
author img

By ETV Bharat Karnataka Team

Published : Oct 28, 2023, 9:03 AM IST

Updated : Oct 28, 2023, 9:31 AM IST

ನವದೆಹಲಿ: ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ ಈರುಳ್ಳಿಯ ಬೆಲೆ 25 ರಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ. ಈರುಳ್ಳಿ ಗುಣಮಟ್ಟಕ್ಕೆ ಅನುಗುಣವಾಗಿ ಕೆಜಿಗೆ 60-70 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆಯಾದ ಮದರ್ ಡೈರಿ ಕೂಡ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದೆ.

  • #WATCH | Kanpur, UP: On high onion rates, a vegetable vendor says, "The reason behind high rates is that there is a shortage of onions in the market. The rates would be in control when there would be enough supply of onion. New goods will come into the market next month, till… pic.twitter.com/QaCYQt11Ti

    — ANI UP/Uttarakhand (@ANINewsUP) October 28, 2023 " class="align-text-top noRightClick twitterSection" data=" ">

ಈರುಳ್ಳಿಯ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ದಿನ ಈರುಳ್ಳಿ ದರ ಪ್ರತಿ ಐದು ಕೆಜಿಗೆ 350 ರೂಪಾಯಿಗೆ ತಲುಪಿದೆ. ನಿನ್ನೆ 300 ರೂಪಾಯಿಗೆ ಮಾರಾಟವಾಗುತ್ತಿತ್ತು. ಅದಕ್ಕೂ ಮೊದಲು 280 ರೂ., ವಾರದ ಹಿಂದೆ 200, 160 ರೂ. ಹೀಗೆ ಇತ್ಯಾದಿ ದರಗಳಿದ್ದವು. ಸರಬರಾಜು ಕೊರತೆಯಿಂದ ದರ ಏರಿಕೆಯಾಗ್ತಿದೆ ಎಂದು ಘಾಜಿಪುರದ ತರಕಾರಿ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳಿದರು.

  • #WATCH | Delhi: On high onion prices, an onion trader at Ghazipur vegetable market says, "The inflow of the onion is low resulting in high rates. Today the rates are Rs. 350 (per 5 Kg). Yesterday, it was Rs. 300. It was Rs. 200 before that. A week ago, rates were Rs. 200, Rs. 160… pic.twitter.com/xLVNDQwtGF

    — ANI (@ANI) October 28, 2023 " class="align-text-top noRightClick twitterSection" data=" ">

ಅಕ್ಟೋಬರ್ 26 ರ ಹೊತ್ತಿಗೆ ಈರುಳ್ಳಿಯ ಸರಾಸರಿ ಸಗಟು ಬೆಲೆ ಕ್ವಿಂಟಲ್‌ಗೆ 3,112.6 ರೂ.ಗೆ ತಲುಪಿತ್ತು. ಇದು ಅಕ್ಟೋಬರ್ 1 ರಂದು ಕ್ವಿಂಟಲ್‌ಗೆ 2,506.62 ರೂ.ಗಿಂತ ಹೆಚ್ಚಾಗಿದೆ. ವರದಿಗಳ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಸಗಟು ದರವು ಸುಮಾರು 60 ಪ್ರತಿಶತದಷ್ಟು ಹೆಚ್ಚಾಗಿದೆ. ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಶೇ.50ರಷ್ಟು ಹೆಚ್ಚಾಗಿದ್ದು, ಗ್ರಾಹಕರ ಕೈ ಸುಡುತ್ತಿದೆ.

ಅಹಮದ್‌ನಗರ ಜಿಲ್ಲೆಯ ಈರುಳ್ಳಿ ವರ್ತಕರ ಸಂಘದ ಪ್ರಕಾರ, ಹತ್ತು ದಿನಗಳ ಹಿಂದೆ ಅಹಮದ್‌ನಗರ ಮಾರುಕಟ್ಟೆಯಲ್ಲಿ ಈರುಳ್ಳಿ ಸರಾಸರಿ ಬೆಲೆ ಕೆಜಿಗೆ 35 ರೂ.ನಿಂದ 45 ರೂ.ಗೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ಉತ್ಪಾದನೆ ವಿಳಂಬವನ್ನು ಎದುರಿಸಲು ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು. ಇದರ ನಂತರ ಈರುಳ್ಳಿ ಬೆಲೆ ಏರಲು ಪ್ರಾರಂಭಿಸಿದೆ ಎಂದು ಹೇಳುತ್ತಾರೆ.

  • #WATCH | Delhi: As onion prices increase, a vegetable vendor at Ghazipur market says, "We are here to purchase onion. The onion rates were Rs. 50 before Navratri, now it is Rs. 70/kg. Our purchase is at Rs. 70 per kg and we will sell it at Rs. 80/kg. Earlier, it was Rs. 30-40 per… pic.twitter.com/UyhzLq1fRw

ಏರುತ್ತಿರುವ ಬೆಲೆಗಳನ್ನು ನಿಭಾಯಿಸಲು ಸಗಟು ಮಾರುಕಟ್ಟೆಗಳಿಂದ ಕಡಿಮೆ ದರದಲ್ಲಿ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ನಿಂದ ಖರೀದಿಸಿದ ಈರುಳ್ಳಿಯನ್ನು ಮಾರಾಟ ಮಾಡಲು ಪ್ರಾರಂಭಿಸಲಾಗಿದೆ. ಆದರೆ, ಹಬ್ಬ ಹರಿದಿನಗಳಲ್ಲಿ ಹೆಚ್ಚಿದ ಬೇಡಿಕೆ ಮತ್ತು ದಾಸ್ತಾನು ಕಡಿಮೆಯಾದ ಕಾರಣ ಈರುಳ್ಳಿ ಬೆಲೆ ಹೆಚ್ಚಾಗ್ತಿದೆ.

ಸಬ್ಸಿಡಿ@ರೂ.25..!: ಈರುಳ್ಳಿ ಬೆಲೆಯಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ರೂ.25 ಸಬ್ಸಿಡಿಯಲ್ಲಿ ಈರುಳ್ಳಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಬೆಲೆ ಏರಿಕೆಗೆ ಕಾರಣವೇನು?: ಹವಾಮಾನದಲ್ಲಿನ ಬದಲಾವಣೆಯಿಂದ ರೈತರು ತಡವಾಗಿ ಈರುಳ್ಳಿ ನಾಟಿ ಮಾಡಿದರು. ಇದರಿಂದ ಬೆಳೆ ಇಳುವರಿ ವಿಳಂಬವಾಗುತ್ತಿದೆ. ಇದರಿಂದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 2023-24ನೇ ಹಣಕಾಸು ವರ್ಷಕ್ಕೆ ಗ್ರಾಹಕ ವ್ಯವಹಾರಗಳ ಇಲಾಖೆಯು ಎನ್‌ಸಿಸಿಎಫ್ ಮತ್ತು ನಾಫೆಡ್ ಸಹಭಾಗಿತ್ವದಲ್ಲಿ 5 ಲಕ್ಷ ಟನ್ ಈರುಳ್ಳಿ ದಾಸ್ತಾನು ಮಾಡಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 2 ಲಕ್ಷ ಟನ್ ಈರುಳ್ಳಿ ಸಂಗ್ರಹಿಸುವ ಗುರಿ ಇದೆ ಎಂದು ಅವರು ಹೇಳಿದರು.

ಓದಿ: ರಾಜ್ಯದಲ್ಲಿ ಟೊಮೆಟೊ ಬಳಿಕ ಈರುಳ್ಳಿ ಬೆಲೆ ಹೆಚ್ಚಳ ಆತಂಕ; ಮಾರುಕಟ್ಟೆಗಳಿಗೆ ಆವಕ ಕುಸಿತ

Last Updated : Oct 28, 2023, 9:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.