ETV Bharat / bharat

ಒಮಿಕ್ರಾನ್​​ ಉಪಪ್ರಭೇದ BA2 ಪತ್ತೆ.. ಆರು ಮಕ್ಕಳು ಸೇರಿ 16 ಮಂದಿಯಲ್ಲಿ ಸೋಂಕು ದೃಢ! - ಒಮಿಕ್ರಾನ್ ಉಪಪ್ರಭೇದ BA2

Omicron BA2 variant hits Indore: ಒಮಿಕ್ರಾನ್ ಉಪಪ್ರಭೇದ BA2 ಮಧ್ಯಪ್ರದೇಶದ ಇಂದೋರ್​ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಆರು ಮಕ್ಕಳು ಸೇರಿಕೊಂಡಿದ್ದಾರೆ.

Omicron BA2 variant hits Indore
Omicron BA2 variant hits Indore
author img

By

Published : Jan 24, 2022, 7:44 PM IST

Updated : Jan 24, 2022, 9:01 PM IST

ಇಂದೋರ್​​(ಮಧ್ಯಪ್ರದೇಶ): ದೇಶಾದ್ಯಂತ ಕೋವಿಡ್ ಮೂರನೇ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಿವೆ. ಈಗಾಗಲೇ ದೇಶದಲ್ಲಿ ತನ್ನ ಕಬಂಧಬಾಹು ಚಾಚುತ್ತಿರುವ ಓಮಿಕ್ರಾನ್ ರೂಪಾಂತರಿ ಹಾವಳಿ ಸಹ ಜೋರಾಗಿದೆ. ಇದೀಗ ಇದರ ಉಪಪ್ರಭೇದವಾಗಿರುವ BA2 ವೈರಸ್ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.

ಮಧ್ಯಪ್ರದೇಶದ ಇಂದೋರ್​​ನಲ್ಲಿ ಒಮಿಕ್ರಾನ್​ ಉಪ ಪ್ರಭೇದವಾಗಿರುವ BA2 ಕಾಣಿಸಿಕೊಂಡಿದ್ದು, ಆರು ಮಕ್ಕಳು ಸೇರಿದಂತೆ 16 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವವರಲ್ಲಿ BA2 ರೋಗ ಲಕ್ಷಣಗಳು ಇರಲಿದ್ದು, ಇದರಿಂದ ಯಾವುದೇ ರೀತಿಯ ಹೆಚ್ಚಿನ ತೊಂದರೆ ಇಲ್ಲವೆಂದು ತಿಳಿದುಬಂದಿದೆ. ಆದರೆ, ಕೆಲ ವೈದ್ಯರು ತಿಳಿಸಿರುವ ಪ್ರಕಾರ, ಇದು ಕೂಡ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಸೆಲ್ಫಿ ಮಾರಾಟ ಮಾಡಿ ಕೋಟ್ಯಧೀಶನಾದ ವಿದ್ಯಾರ್ಥಿ.. ಐದು ವರ್ಷದಲ್ಲಿ ಈತ ಗಳಿಸಿದ್ದೆಷ್ಟು ಗೊತ್ತಾ!?

BA2 ಸೋಂಕು ಕಾಣಿಸಿಕೊಂಡಿರುವ ಮೂವರು ವಯಸ್ಕರರಿಗೆ ಈಗಾಗಲೇ ಕೋವಿಡ್​ ಲಸಿಕೆ ನೀಡಲಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಕೆಲವರು ಬೂಸ್ಟರ್ ಡೋಸ್ ಸಹ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಶ್ವಾಸಕೋಶದಲ್ಲಿ ಶೇ. 5ರಷ್ಟು ಸೋಂಕು ಮಾತ್ರ ಕಾಣಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಬ್ರಿಟನ್​​ನಲ್ಲಿ ಇಲ್ಲಿಯವರೆಗೆ 426 ಜನರಲ್ಲಿ ಒಮಿಕ್ರಾನ್​​ನ ರೂಪಾಂತರಿ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಭಾರತ, ಫ್ರಾನ್ಸ್​, ಬ್ರಿಟನ್​ ಮತ್ತು ಡೆನ್ಮಾರ್ಕ್​​​ ಸೇರಿದಂತೆ 40ಕ್ಕೂ ಅಧಿಕ ದೇಶಗಳಲ್ಲಿ BA2 ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 2,665 ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 24, 2022, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.