ಕೌಶಾಂಬಿ (ಉತ್ತರಪ್ರದೇಶ): ವೃದ್ಧೆಯೊಬ್ಬರು ಗಂಗಾ ನದಿಗೆ ಕಾಲು ಜಾರಿ ಬಿದ್ದು, ಸುಮಾರು 40 ಕಿ.ಮೀ ದೂರ ನೀರಿನಲ್ಲಿ ತೇಲಿ ಹೋಗಿದ್ರೂ ಬದುಕುಳಿದಿರುವ ಘಟನೆ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬಸ್ಥರು ವೃದ್ಧೆಯನ್ನು ಎಲ್ಲ ಕಡೆ ಹುಡುಕಿದ್ದಾರೆ. ಬಳಿಕ ಎಲ್ಲೂ ಸಿಗದ ಹಿನ್ನೆಲೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದ್ರೆ ಇದೀಗ ವೃದ್ಧೆ ಆಶ್ಚರ್ಯಕರ ರೀತಿಯಲ್ಲಿ ಬದುಕಿದ್ದಾರೆ.
ಕೌಶಾಂಬಿ ಎಂಬಲ್ಲಿ ನದಿಯ ದಡದಲ್ಲಿ ವೃದ್ಧೆಯೊಬ್ಬರು ಮಲಗಿರುವುದು ಜನರ ಕಣ್ಣಿಗೆ ಕಂಡಿದೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆ ಬಳಿಕ ಪ್ರಜ್ಞೆ ಬಂದ ನಂತರ ವೃದ್ಧೆ ಪೊಲೀಸರಿಗೆ ತಮ್ಮ ವಿಳಾಸ ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆಕೆಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಕೌಶಂಬಿ ಪೊಲೀಸರ ಪ್ರಕಾರ, ಫತೇಪುರ್ ಜಿಲ್ಲೆಯ ಹತ್ಗಾವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಮಪುರ ಗ್ರಾಮದ ನಿವಾಸಿ ಶಾಂತಿ ದೇವಿ (75 ವರ್ಷ) ಭಾನುವಾರ ಬೆಳಗ್ಗೆ ಗಂಗಾನದಿಯಲ್ಲಿ ಮಲವಿಸರ್ಜನೆಗೆ ತೆರಳಿದ್ದರು. ಮಲವಿಸರ್ಜನೆಯ ವೇಳೆ ಇದ್ದಕ್ಕಿದ್ದಂತೆ ಕಾಲು ಜಾರಿ ಗಂಗಾ ನದಿಗೆ ಬಿದ್ದಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆಕೆಯ ಮನೆಯವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕುಟುಂಬಸ್ಥರು ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಎಲ್ಲೂ ಸಿಗದ ಹಿನ್ನೆಲೆ ಶಾಂತಿ ದೇವಿ ಮೃತಪಟ್ಟಿದ್ದಾರೆ ಎಂದು ಮನೆಯವರು ತಿಳಿದಿದ್ದರು.
ಇದನ್ನೂ ಓದಿ: ವೈರಲ್ ವಿಡಿಯೋ: ತನ್ನ ಸಾವಿನ ದಿನ ತಾನೇ ನಿಗದಿ ಮಾಡಿದ ವೃದ್ಧೆ!
ಕೌಶಂಬಿ ಜಿಲ್ಲೆಯ ಕಡಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಕಥುವಾ ಗ್ರಾಮದ ನದಿಯ ದಡದಲ್ಲಿ ಭಾನುವಾರ ಸಂಜೆ ಜನರು ಶಾಂತಿ ದೇವಿ ಮಲಗಿರುವುದನ್ನು ನೋಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಕಡದಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಬಂದ ನಂತರ ಶಾಂತಿದೇವಿ ಪೊಲೀಸರಿಗೆ ಮನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಮನೆಗೆ ತೆರಳಲು ವೈದ್ಯರು ಕೂಡ ಅವಕಾಶ ಮಾಡಿಕೊಟ್ಟಿದ್ದಾರೆ.