ETV Bharat / bharat

ಸಿಎಂ ಹೆಲಿಕಾಪ್ಟರ್ ಬಂದಾಗ ಪೊಲೀಸ್ ವ್ಯಾನ್ ಮೇಲೆ ಹತ್ತಿದ ಮಹಿಳೆ!

author img

By

Published : Apr 4, 2021, 10:51 AM IST

ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್‌ ಅವರ ರೋಹ್ಟಕ್‌ ಭೇಟಿ ವೇಳೆ 80 ವರ್ಷದ ವೃದ್ಧೆಯೊಬ್ಬರು ಪೊಲೀಸ್​ ವ್ಯಾನ್​ ಮೇಲೆ ಹತ್ತಿ ಹರಿಯಾಣ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

old woman boarded police van after seeing hariyana cm helicopter
ಪೊಲೀಸ್ ವ್ಯಾನ್ ಮೇಲೆ ಹತ್ತಿದ ರೈತ ಮಹಿಳೆ

ಹರಿಯಾಣ: ಮುಖ್ಯಮಂತ್ರಿ ಮನೋಹರ್ ಲಾಲ್ ಅವರ ರೋಹ್ಟಕ್ ಭೇಟಿಯ ಸಂದರ್ಭದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಇಲ್ಲಿನ ಮಸ್ತ​ನಾಥ್​ ವಿಶ್ವವಿದ್ಯಾಲಯದ ಬಳಿ ಸಿಎಂ ಹೆಲಿಕಾಪ್ಟರ್ ನೋಡಿದ ವೃದ್ಧೆ ಪೊಲೀಸ್ ವ್ಯಾನ್ ಮೇಲೆ ಹತ್ತಿ ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ಪೊಲೀಸ್ ವ್ಯಾನ್ ಮೇಲೆ ಹತ್ತಿದ ರೈತ ಮಹಿಳೆ

ಸಿಎಂ ಹೆಲಿಕಾಪ್ಟರ್ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದ ಬಳಿ ಲ್ಯಾಂಡ್​ ಆಗಬೇಕಿತ್ತು. ಆದರೆ ಅದಕ್ಕೂ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರು ವಿದ್ಯಾಲಯದ ಬಳಿ ಜಮಾಯಿಸಿದ್ರು. ಮುಖ್ಯಮಂತ್ರಿಗಳಿದ್ದ ಹೆಲಿಕಾಪ್ಟರ್​ ಬರುತ್ತಿದ್ದಂತೆ ಅಂದಾಜು 80 ವರ್ಷದ ವೃದ್ಧ ಮಹಿಳೆಯೊಬ್ಬರು ಮಸ್ತನಾಥ ವಿಶ್ವವಿದ್ಯಾಲಯದ ಬಳಿ ಸಿಎಂ ಹೆಲಿಕಾಪ್ಟರ್ ನೋಡಿ ಪೊಲೀಸ್​ ವಾಹನದ ಮೇಲೆಯೇ ಹತ್ತಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೊಲೀಸರು ಆ ಮಹಿಳೆಯನ್ನು ವ್ಯಾನ್​ನಿಂದ ಕೆಳಗೆ ಇಳಿಸುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಮಹಿಳೆಯರು ಪ್ರತಿಭಟನೆ ಆರಂಭಿಸಿದ್ರು.

ಸಿಎಂ ಭೇಟಿ ಹಿನ್ನೆಲೆ ಬಿಗಿ ಪೊಲೀಸ್​ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ರೈತರು ಸಿಎಂ ಕಾರ್ಯಕ್ರಮವನ್ನು ವಿರೋಧಿಸುವುದಾಗಿ ಮೊದಲೇ ಘೋಷಿಸಿದ್ದರು. ಯಾವುದೇ ಪರಿಸ್ಥಿತಿಯಲ್ಲಿ ಸಿಎಂ ಹೆಲಿಕಾಪ್ಟರ್ ಅನ್ನು ಬಾಬಾ ಮಸ್ತನಾಥ ವಿಶ್ವವಿದ್ಯಾನಿಲಯದ ಬಳಿ ಇಳಿಯಲು ಅನುಮತಿಸುವುದಿಲ್ಲ ಎಂದು ರೈತರು ಸ್ಪಷ್ಟವಾಗಿ ಹೇಳಿದ್ರು.

ಇದನ್ನೂ ಓದಿ: ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ಅಂಟಿದ ಕೊರೊನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.