ದರ್ಭಂಗಾ (ಬಿಹಾರ) : ಒಡಿಶಾದ ಬಾಲಸೋರ್ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸುಮಾರು 270ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಭೀಕರ ರೈಲು ದುರಂತದಲ್ಲಿ ನವ ವಿವಾಹಿತನೋರ್ವ ಸಾವನ್ನಪ್ಪಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
ಬಾಲಸೋರ್ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಹಲವರು ಮೃತಪಟ್ಟರೆ ಕೆಲವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಬಿಹಾರದ ದರ್ಭಂಗಾ ಜಿಲ್ಲೆಯ ಮನಿಯಾರಿ ಗ್ರಾಮದ ನರೇಶ್ ಯಾದವ್ ಎಂಬವರ ಪುತ್ರ ಅಖಿಲೇಶ್ ಕುಮಾರ್ ಯಾದವ್ ಅವಘಡದಲ್ಲಿ ಸಾವನ್ನಪ್ಪಿದ್ದಾನೆ. ಚೆನ್ನೈನಲ್ಲಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಅಖಿಲೇಶ್ ಯಾದವ್ಗೆ ಕಳೆದ ಮೇ 7 ರಂದು ವಿವಾಹವಾಗಿತ್ತು. ವಿವಾಹದ ಬಳಿಕ ಅಖಿಲೇಶ್ ತನ್ನ ಕುಟುಂಬಸ್ಥರಲ್ಲಿ ಮತ್ತು ಮಡದಿಯಲ್ಲಿ ಕೆಲಸದ ನಿಮಿತ್ತ ಚೆನ್ನೈಗೆ ತೆರಳುವುದಾಗಿ ಹೇಳಿ ಹೊರಟಿದ್ದ. ಈ ವೇಳೆ ನಡೆದ ರೈಲು ಅಪಘಾತದಲ್ಲಿ ಅಖಿಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಅಖಿಲೇಶ್ ಮಡದಿ ರೂಪಾದೇವಿ ತನ್ನ ಗಂಡನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾಳೆ.
ನಮ್ಮಿಬ್ಬರ ಮದುವೆ ಮೇ 27ರಂದು ನಡೆದಿತ್ತು. ನನ್ನ ಗಂಡ ಮೊದಲಿನಿಂದಲೂ ಜ್ಯೂಸ್ ಮಾರಾಟ ಮಾಡುತ್ತಿದ್ದ. ಜೂನ್ 1 ರಂದು ಚೆನ್ನೈಗೆ ತೆರಳುವುದಾಗಿ ಹೇಳಿ ಹೊರಟಿದ್ದ ಎಂದು ಮೃತ ಅಖಿಲೇಶ್ ಮಡದಿ ರೂಪಾದೇವಿ ಕಣ್ಣೀರಾದರು.
ಒಟ್ಟಿಗೆ ತೆರಳಿದ್ಧ ಇಬ್ಬರೂ ಸಾವು : ಅಖಿಲೇಶ್ ಕುಮಾರ್ ಯಾದವ್ ಜೊತೆಗೆ ಇದೇ ಗ್ರಾಮದ ಭಾವು ಸಾಹೇಬ್ ಸನ್ಹಿ ಕೂಡ ಚೆನ್ನೈಗೆ ತೆರಳಿದ್ದರು. ರೈಲು ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಇವರ ಬಳಿಯಿದ್ದ ಆಧಾರ್ ಕಾರ್ಡ್ ಮೂಲಕ ಇವರ ಗುರುತು ಪತ್ತೆಯಾಗಿದೆ. ಬಳಿಕ ಇವರ ಕುಟುಂಬಸ್ಥರಿಗೆ ದುರಂತ ನಡೆಸದಿರುವುದು ಗೊತ್ತಾಗಿದ್ದು, ಮೃತದೇಹವನ್ನು ಗ್ರಾಮಕ್ಕೆ ತರಲು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಒಡಿಶಾ ಸರ್ಕಾರ ನಿರ್ಲಕ್ಷ್ಯ ಆರೋಪ : ಮೃತದೇಹವನ್ನು ಒಯ್ಯಲು ಬಂದ ಮೃತರ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸುವಲ್ಲಿ ಒಡಿಶಾ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಒಡಿಶಾ ಸರ್ಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡರೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದು ಮುಖ್ಯ ಪ್ರತಿನಿಧಿ ಜನಕ್ ಪಸ್ವಾನ್ ಹೇಳಿದ್ದಾರೆ.
ಸಿಬಿಐ ತನಿಖೆಗೆ ಶಿಫಾರಸ್ : ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ರೈಲ್ವೆ ಮಂಡಳಿಯು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದರು. ಸದ್ಯ ಅಪಘಾತದಿಂದ ಹಾಳಾಗಿದ್ದ ಹಳಿಗಳನ್ನು ದುರಸ್ಥಿಗೊಳಿಸಲಾಗಿದೆ.
ಇದನ್ನೂ ಓದಿ : 51 ಗಂಟೆಯಲ್ಲಿ ಎರಡೂ ರೈಲು ಹಳಿಗಳ ದುರಸ್ತಿ.. ಕೈ ಮುಗಿದ ರೈಲ್ವೆ ಸಚಿವ.. ವಿಡಿಯೋ!