ಕೆಂಡುಜಾರ್ (ಒಡಿಶಾ): ಮಂಗಳಮುಖಿ ವಕೀಲರಾದ ಸಲ್ಮಾ ಬೇಗಂ ಅವರು ಏಪ್ರಿಲ್ 4 ರಿಂದ ಕೆಂಡುಜಾರ್‌ನ ಬದ್ಬಿಲ್ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಇವರು ರಾಜ್ಯದ ಮೊದಲ ಮಂಗಳಮುಖಿ ವಕೀಲರಾಗಿ ಈಗ ಎಲ್ಲೆಡೆ ಖ್ಯಾತಿ ಗಳಿಸುತ್ತಿದ್ದಾರೆ.
ಸಲ್ಮಾ ಬೇಗಂ ಒಡಿಶಾದ ಮೊದಲ ಮಂಗಳಮುಖಿ ವಕೀಲರಾಗಿದ್ದು, ಮೊಹಮ್ಮದ್ ಸಲೀಂ ಎಂಬುದು ಇವರ ಮೊದಲ ಹೆಸರು. ಇವರು ಒಡಿಶಾದ ಕಿಯೋಂಜಾರ್ ಜಿಲ್ಲೆಯ ಭುಯಾನ್ರೋಯಿಡಾ ಪ್ರದೇಶದಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಇವರನ್ನು ತಾಯಿಯೇ ಬೆಳಸಿ ಈ ಮಟ್ಟಕ್ಕೆ ತಂದಿದ್ದಾರೆ.
ಇದನ್ನೂ ಓದಿ: ದೆಹಲಿಗೆ ದ್ರಾವಿಡ ನಾಡಿನ ಸಿಎಂ : ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರ ಹೊಮ್ಮುತ್ತಿದ್ದಾರೆಯೇ ಎಂಕೆ ಸ್ಟಾಲಿನ್!?
2015 ರಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸಲ್ಮಾ ಬೇಗಂ ಭುವನೇಶ್ವರಕ್ಕೆ ಮಂಗಳಮುಖಿಯರ ನಾಯಕಿ ಮೀರಾ ಪರಿದಾ ಅವರನ್ನು ಭೇಟಿಯಾಗಿ ಅವರ ಜೊತೆ ಸೇರಲು ಬಂದಿದ್ದರಂತೆ. ಆದರೆ, ಸಲೀಂ ಅವರಿಗೆ ಪದವಿ ಪಡೆದ ನಂತರ ಬಂದು ಭೇಟಿಯಾಗುವಂತೆ ಮೀರಾ ಪರಿದಾ ಸಲಹೆ ನೀಡಿದ್ದರು.
ಪರಿದಾ ಅವರೊಂದಿಗಿನ ಆ ಭೇಟಿ ನನ್ನ ಜೀವನಕ್ಕೆ ಒಂದು ಮಹತ್ವದ ತಿರುವು ನೀಡಿತು. ಭಯದ ವಿರುದ್ಧ ಹೋರಾಡಲು ಮತ್ತು ಮುಕ್ತವಾಗಿ ಹೊರಬರಲು ಇದು ನನಗೆ ಶಕ್ತಿಯನ್ನು ನೀಡಿತು ಎಂದು ಸಲ್ಮಾ ಬೇಗಂ ಹೇಳಿದ್ದಾರೆ.