ETV Bharat / bharat

ಅನಾರೋಗ್ಯದಿಂದ ಪತ್ನಿ ಸಾವು.. ಶವ ಹೊತ್ತು 4 ಕಿಮೀ ನಡೆದ ಪತಿ: ನೆರವಿಗೆ ಬಂದ ಪೊಲೀಸರು

author img

By

Published : Feb 9, 2023, 1:38 PM IST

ಆಂಧ್ರಪ್ರದೇಶದಲ್ಲಿ ಪತ್ನಿಯ ಶವ ಹೊತ್ತುಕೊಂಡು ಸಾಗುತ್ತಿದ್ದ ವ್ಯಕ್ತಿಯ ನೆರವಿಗೆ ಪೊಲೀಸರು ಧಾವಿಸಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದಾರೆ.

odisha-man-walked-kilometres-carrying-wifes-body-on-shoulder-police-come-to-rescue
ಅನಾರೋಗ್ಯದಿಂದ ಪತ್ನಿ ಸಾವು.. ಶವ ಹೊತ್ತು 4 ಕಿಮೀ ನಡೆದ ಪತಿ: ನೆರವಿಗೆ ಬಂದ ಪೊಲೀಸರು

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಅನಾರೋಗ್ಯದಿಂದ ಸಾವನ್ನಪ್ಪಿದ ಪತ್ನಿ ಮೃತದೇಹವನ್ನು ಒಡಿಶಾದ ಕೊರಾಪುಟ್​ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಹೆಗಲ ಮೇಲೆ ಹೊತ್ತು ಸುಮಾರು ನಾಲ್ಕು ಕಿಲೋಮೀಟರ್​ ದೂರದವರೆಗೆ ನಡೆದುಕೊಂಡು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆಟೋದಲ್ಲಿ ಪತ್ನಿಯನ್ನು ಕರೆದುಕೊಂಡು ಬರುತ್ತಿದ್ದಾಗ ಆಕೆ ಸಾವನ್ನಪ್ಪಿದ ನಂತರ, ಆಟೋ ಚಾಲಕ ಮಧ್ಯದಲ್ಲೇ ಮೃತದೇಹ ಬಿಟ್ಟು ತೆರಳಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿಯೇ, ನಡುರಸ್ತೆಯಲ್ಲಿ ಏನು ಮಾಡಬೇಕೆಂದು ತೋಚದೇ ಶವವನ್ನು ಪತಿ ಹೊತ್ತು ಸಾಗಿದ್ದಾರೆ.

ಕೊರಾಪುಟ್​ ಜಿಲ್ಲೆಯ ಪೊಟ್ಟಂಗಿ ಸಮೀಪದ ಸೊರಡ ಗ್ರಾಮದ ಈಡೆ ಗುರು (30) ಎಂಬಾಕೆಯೇ ಮೃತ ಮಹಿಳೆ. 35 ವರ್ಷದ ಪತಿ ಸಾಮುಲು ಎಂಬುವರೇ ಪತ್ನಿ ಮೃತದೇಹವನ್ನು ಹೊತ್ತುಕೊಂಡು ಸಾಗಿದ ಪತಿ. ಕೆಲವು ದಿನಗಳಿಂದ ಪತ್ನಿ ಈಡೆ ಗುರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿಯೇ ವಾರದ ಹಿಂದೆ ಒಡಿಶಾದ ಗಡಿ ಹೊಂದಿಕೊಂಡಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಟಗರಪುವಲಸ ಬಳಿಯ ಖಾಸಗಿ ಆಸ್ಪತ್ರೆಗೆ ಸಾಮುಲು ತನ್ನ ಪತ್ನಿಯನ್ನು ದಾಖಲಿಸಿದ್ದರು. ಆದರೆ, ಆಕೆಯ ಆರೋಗ್ಯ ಸ್ಥಿತಿ ಸುಧಾರಿಸದ ಕಾರಣ ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ರಸ್ತೆಯಲ್ಲೇ ಶವ ಬಿಟ್ಟು ಹೋದ ಆಟೋ ಚಾಲಕ: ಪತ್ನಿಯ ಆರೋಗ್ಯ ಸುಧಾರಿಸದ ಮತ್ತು ಆಸ್ಪತ್ರೆಯಿಂದಲೂ ಡಿಸ್ಚಾರ್ಜ್​ ಮಾಡಿದ ನಂತರ ಪತಿ ಸಾಮುಲು, ಆಕೆಯನ್ನು ತನ್ನೂರಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದ. ಅಂತೆಯೇ, ಆಟೋದಲ್ಲಿ ಪತ್ನಿ ಈಡೆ ಗುರುವನ್ನು ಕರೆದುಕೊಂಡು ಹೋಗುತ್ತಿದ್ದ. ಆದರೆ, ಆಂಧ್ರದ ಮತ್ತೊಂದು ಗಡಿ ಜಿಲ್ಲೆಯ ವಿಜಯನಗರದ ಗಂಟ್ಯಾಡ ಮಂಡಲದ ರಾಮಾವರಂ ಸೇತುವೆ ತಲುಪುತ್ತಿದಂತೆ ಆಟೋದಲ್ಲಿ ಪತ್ನಿ ಕೊನೆಯುಸಿರೆಳೆದಿದ್ದಾರೆ. ಆಗ ಆಟೋ ಚಾಲಕ ಮನುಷ್ಯತ್ವವನ್ನು ಮರೆತು ಮೃತದೇಹವನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.

ಶವ ಹೊತ್ತು 4 ಕಿಮೀ ನಡೆದು ಸಾಗಿದ ಪತಿ: ಪತ್ನಿ ಈಡೆ ಗುರು ಸಾವನ್ನಪ್ಪುತ್ತಿದ್ದಂತೆ ಮಧ್ಯದಲ್ಲೇ ಮೃತದೇಹ ಬಿಟ್ಟು ತೆರಳಿದ್ದರಿಂದ ಪತಿ ಸಾಮುಲುವಿಗೆ ಏನು ಮಾಡಬೇಕೆಂದೇ ತೋಚಿಲ್ಲ. ಆದ್ದರಿಂದ ತನ್ನ ಹೆಂಡತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೊರಟು ಸಾಗಿದ್ದಾರೆ. ಈ ವೇಳೆ, ದಾರಿಯಲ್ಲಿ ತೆರಳಿದ್ದ ಜನರು ಸಾಮುಲುವನ್ನು ಮಾತನಾಡಿ, ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳಿದ್ದಾರೆ. ತೆಲುಗು ಬಾರದೇ ಇದ್ದುದರಿಂದ ಆತನಿಗೆ ಆರ್ಥವಾಗಿಲ್ಲ. ಅಲ್ಲದೇ, ಸಾಮುಲುವಿನ ಭಾಷೆ ಕೂಡ ದಾರಿಹೋಕರಿಗೆ ಅರ್ಥವಾಗಿಲ್ಲ. ಹೀಗೆ ನಾಲ್ಕು ಕಿಲೋಮೀಟರ್​ವರೆಗೂ ಪತ್ನಿ ಶವ ಹೊತ್ತು ನಡೆದೇ ಸಾಗಿದ್ದಾರೆ. ಇದರ ನಡುವೆ ದಾರಿಹೋಕರೊಬ್ಬರು ಗಮನಿಸಿ ಗಂಟ್ಯಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೆರವಿಗೆ ಬಂದ ಪೊಲೀಸರು: ಈ ವಿಷಯ ಪೊಲೀಸರು ತಕ್ಷಣವೇ ಸರ್ಕಲ್​ ಇನ್ಸ್​ಪೆಕ್ಟರ್​ ಟಿ.ವಿ.ತಿರುಪತಿ ರಾವ್ ಮತ್ತು ಗಂಟ್ಯಾಡ ಸಬ್​ಇನ್ಸ್​ಪೆಕ್ಟರ್​ ಕಿರಣ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದಾರೆ. ಪತ್ನಿಯನ್ನು ಹೊತ್ತು ಸಾಗುತ್ತಿದ್ದ ಸಾಮುಲು ಅವರನ್ನು ಮಾತನಾಡಿಸಿ, ಊಟ ನೀಡಿದರು. ಅಲ್ಲದೇ, ಖಾಸಗಿ ಆಂಬ್ಯುಲೆನ್ಸ್ ಕರೆಸಿ 125 ಕಿ.ಮೀ ದೂರದಲ್ಲಿರುವ ಒಡಿಶಾದ ಗ್ರಾಮಕ್ಕೆ ಮೃತದೇಹವನ್ನು ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ, ಆಂಧ್ರ-ಒಡಿಶಾ ಗಡಿಯಲ್ಲಿರುವ ಪಾಚಿಪೆಂಟಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾನವೀಯತೆ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್​ನಲ್ಲಿತ್ತು 25 ಲಕ್ಷ ರೂಪಾಯಿ: ಪೊಲೀಸರಿಗೆ ತಂದೊಪ್ಪಿಸಿದ ಆಟೋ ಚಾಲಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.