ಭುವನೇಶ್ವರ್: ತಮ್ಮ ಸಚಿವ ಸಂಪುಟದ 20 ಸಚಿವರು ಮತ್ತು ಸ್ಪೀಕರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು 21 ಶಾಸಕರನ್ನು ತಮ್ಮ ಹೊಸ ಸಂಪುಟದ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ. ಸಚಿವರ ಹೆಸರುಗಳ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಬಹಿರಂಗಪಡಿಸದಿದ್ದರೂ, ಇಂದು 13 ಶಾಸಕರು ಕ್ಯಾಬಿನೆಟ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಮತ್ತು ಎಂಟು ಶಾಸಕರು ರಾಜ್ಯ ಸಚಿವರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕೃತ ಮೂಲಗಳ ಪ್ರಕಾರ, ಜಗನ್ನಾಥ್ ಸಾರಕ, ನಿರಂಜನ್ ಪೂಜಾರಿ, ರಣೇಂದ್ರ ಪ್ರತಾಪ್ ಸ್ವೈನ್, ಪ್ರಮೀಳಾ ಮಲ್ಲಿಕ್, ಉಷಾ ದೇವಿ, ಪ್ರಫುಲ್ಲ ಕುಮಾರ್ ಮಲ್ಲಿಕ್, ಪ್ರತಾಪ್ ಕೇಶರಿ ದೇಬ್, ಅತಾನು ಸಬ್ಯಸಾಚಿ ನಾಯಕ್, ಪ್ರದೀಪ್ ಕುಮಾರ್ ಅಮತ್, ನಬಾ ಕಿಸೋರ್ ದಾಸ್, ಅಶೋಕ್ ಚಂದ್ರ ಪಾಂಡಾ, ತುಕುನಿ ಸಾಹು ಮತ್ತು ರಾಜೇಂದ್ರ ಧೋಲಾಕಿಯಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಹಾಜರಾಗುವಂತೆ ಸಿಎಂಒದಿಂದ ದೂರವಾಣಿ ಮೂಲಕ ತಿಳಿಸಲಾಗಿದೆ.
ಅದೇ ರೀತಿ ಸಮೀರ್ ರಂಜನ್ ದಾಶ್, ಅಶ್ವಿನಿ ಕುಮಾರ್ ಪಾತ್ರ, ಪ್ರೀತಿರಂಜನ್ ಘಡೆಯಿ, ಶ್ರೀಕಾಂತ ಸಾಹು, ತುಷಾರಕಾಂತಿ ಬೆಹೆರಾ, ರೋಹಿತ್ ಪೂಜಾರಿ, ರೀಟಾ ಸಾಹು ಮತ್ತು ಬಸಂತಿ ಹೆಂಬ್ರಾಮ್ ಅವರನ್ನೂ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಲಾಗಿದೆ. ಇಂದು ಬೆಳಗ್ಗೆ 11.45ಕ್ಕೆ ರಾಜಭವನದ ಹಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾದ ಎಲ್ಲರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದಿಢೀರ್ ಬೆಳವಣಿಗೆ: ಒಡಿಶಾ ಸಚಿವ ಸಂಪುಟದ ಎಲ್ಲ ಸಚಿವರು ರಾಜೀನಾಮೆ