ಹೈದರಾಬಾದ್: ಕೊರೊನಾ ಹಿನ್ನೆಲೆಯಲ್ಲಿ ಹತ್ತನೇ ತರಗತಿಯ (ಎಸ್‌ಎಸ್‌ಸಿ ಪರೀಕ್ಷೆ) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸಂಖ್ಯೆಯನ್ನು ಈ ವರ್ಷ 11 ರಿಂದ 6 ಕ್ಕೆ ಇಳಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸುಮಾರು ಎಂಟರಿಂದ ಹತ್ತು ತಿಂಗಳುಗಳ ಕಾಲ ಶಾಲೆಗಳು ಬಂದ್ ಆಗಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ನಡೆಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಕೇವಲ ಪ್ರಸಕ್ತ ಶೈಕ್ಷಣಿಕ ವರ್ಷ 2021ಕ್ಕೆ ಮಾತ್ರ ಸೀಮಿತವಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಓದಿ: ಸಿಕ್ಕಿಂನಲ್ಲಿ 4.8 ತೀವ್ರತೆಯ ಭೂಕಂಪ
ಅಷ್ಟೇ ಅಲ್ಲದೆ ಈ ಬಾರಿ ಪರೀಕ್ಷೆಯ ಸಮಯವನ್ನು 2 ಗಂಟೆ 45 ನಿಮಿಷದಿಂದ 3 ಗಂಟೆ 15 ನಿಮಿಷಕ್ಕೆ ಹೆಚ್ಚಿಸಲಾಗಿದ್ದು, ಪ್ರಶ್ನೆಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಚಿಂತನೆ ನಡೆಸಿದೆ. ತೆಲಂಗಾಣದಲ್ಲಿ ಎಸ್‌ಎಸ್‌ಸಿ ಪರೀಕ್ಷೆಗಳು ಮೇ ತಿಂಗಳಲ್ಲಿ ನಡೆಯಲಿವೆ.