ETV Bharat / bharat

ಹರಿಯಾಣ ಘರ್ಷಣೆಗೆ 6 ಸಾವು, 116 ಮಂದಿ ಬಂಧನ; ಶಾಂತಿ ಕಾಪಾಡಲು ಸಿಎಂ ಖಟ್ಟರ್​ ಮನವಿ - ನುಹ್​ ಹಿಂಸಾಚಾರ

ಹರಿಯಾಣದಲ್ಲಿ ಇಂದು ಬೆಳಗ್ಗೆ ಮತ್ತೆ ಹಿಂಸಾಚಾರ ನಡೆದಿದೆ. ಈವರೆಗೂ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಂತಿ, ಸಹೋದರತ್ವ ಕಾಪಾಡುವಂತೆ ಸಿಎಂ ಮನೋಹರ್​ ಲಾಲ್​ ಕಟ್ಟರ್​ ಜನರಲ್ಲಿ ಮನವಿ ಮಾಡಿದ್ದಾರೆ.

ನುಹ್​ ಹಿಂಸಾಚಾರ
ನುಹ್​ ಹಿಂಸಾಚಾರ
author img

By

Published : Aug 2, 2023, 1:43 PM IST

Updated : Aug 2, 2023, 1:49 PM IST

ನುಹ್ (ಹರಿಯಾಣ) : ಹರಿಯಾಣದಲ್ಲಿ ನಡೆದ ಘರ್ಷಣೆಯಲ್ಲಿ ಗೃಹ ರಕ್ಷಕ ದಳದ ಇಬ್ಬರು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 8 ಜಿಲ್ಲೆಗಳಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಗುರುಗ್ರಾಮ್ ಹೊರತುಪಡಿಸಿ ಹೆಚ್ಚಿನ ಪ್ರದೇಶಗಳಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದೆ. ಮುಂದಿನ ಆದೇಶದವರೆಗೆ ನುಹ್ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದರು.

  • #WATCH | "Six people including two Home Guards and four civilians have died in the incident. 116 people have been arrested till now. Their remand is being taken. Those found guilty will not be spared. We are committed to the safety of the public. The overall situation in the… pic.twitter.com/z5y16CF03o

    — ANI (@ANI) August 2, 2023 " class="align-text-top noRightClick twitterSection" data=" ">

ನಿನ್ನೆಯಿಂದ ನಡೆಯುತ್ತಿರುವ ಘರ್ಷಣೆಗೆ ಹರಿಯಾಣದ 8 ಜಿಲ್ಲೆಗಳು ಹೊತ್ತಿ ಉರಿದಿವೆ. ಈ ಕುರಿತು ಮಾಹಿತಿ ನೀಡಿದ ಸಿಎಂ, ಹಿಂಸಾಚಾರದಲ್ಲಿ ಭಾಗಿಯಾದ 116 ಜನರನ್ನು ಬಂಧಿಸಲಾಗಿದೆ. 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಸಾಚಾರವನ್ನು ನಿಯಂತ್ರಿಸಲು 30 ತುಕಡಿಗಳು ಪೊಲೀಸ್​ ಮತ್ತು 20 ಅರೆಸೇನಾ ಪಡೆಗಳನ್ನು ಕೇಂದ್ರದಿಂದ ಕರೆಸಲಾಗಿದೆ. ಈ ಪೈಕಿ ನುಹ್‌ನಲ್ಲಿ 14 ತುಕಡಿಗಳು, 3 ಪಲ್ವಾಲ್‌ಗೆ, 2 ಫರಿದಾಬಾದ್‌ಗೆ ಮತ್ತು ಒಂದನ್ನು ಗುರುಗ್ರಾಮ್‌ನಲ್ಲಿ ನಿಯೋಜಿಸಲಾಗಿದೆ ಎಂದು ಸಿಎಂ ಖಟ್ಟರ್​​ ತಿಳಿಸಿದರು.

  • #WATCH | Visuals from Haryana's Nuh where police force has been deployed after a clash broke out between two groups on July 31.

    Section 144 has been imposed and mobile internet services have been temporarily suspended in the district. pic.twitter.com/Txd5uC74pn

ಗಲಭೆ ಹೊತ್ತಿಕೊಂಡ ರಾಜ್ಯದ 8 ಜಿಲ್ಲೆಗಳಾದ ನುಹ್, ಪಲ್ವಾಲ್, ಫರಿದಾಬಾದ್, ರೆವಾರಿ, ಗುರುಗ್ರಾಮ್, ಮಹೇಂದ್ರಗಢ, ಸೋನಿಪತ್ ಮತ್ತು ಪಾಣಿಪತ್​ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗುರುಗ್ರಾಮ್​ನಲ್ಲಿ ಗಲಭೆ ಇನ್ನೂ ಮುಂದುವರಿದಿದ್ದು, ಬಿಟ್ಟರೆ ಬೇರೆಡೆ ನಿಯಂತ್ರಿಸಲಾಗಿದೆ. ನುಹ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

116 ಜನರ ಬಂಧನ: ಹಿಂಸಾಚಾರದ ಮಾಸ್ಟರ್​ಮೈಂಡ್​ಗಳನ್ನು ಪತ್ತೆ ಮಾಡಲಾಗುತ್ತಿದೆ. ಈವರೆಗೂ ಒಟ್ಟು 116 ಜನರನ್ನು ಬಂಧಿಸಲಾಗಿದೆ. ಯಾವುದೇ ಅಪರಾಧಿ ಅಥವಾ ಸಂಚುಕೋರರನ್ನು ಬಿಡುವುದಿಲ್ಲ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಭದ್ರತಾ ಪಡೆಗಳನ್ನು ಅಲರ್ಟ್ ಮಾಡಲಾಗಿದೆ. ಶಾಂತಿ ಮತ್ತು ಸಹೋದರತ್ವ ಕಾಪಾಡುವಂತೆ ಸಿಎಂ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪೊಲೀಸ್ ತಂಡಗಳು ಗುರುಗ್ರಾಮ್‌ನಿಂದ ನುಹ್‌ಗೆ ಭದ್ರತೆ ನೀಡಲು ಹೊರಟಿದ್ದಾಗ ನಡೆದ ದಾಳಿಯಲ್ಲಿ ಇಬ್ಬರು ಗೃಹ ರಕ್ಷಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಹಿಂಸಾಚಾರದ ವೇಳೆ ಗುರುಗ್ರಾಮ್‌ನ ಡಾಬಾವನ್ನು ಧ್ವಂಸಗೊಳಿಸಲಾಗಿದೆ. ಹಿಂಸಾಚಾರದಲ್ಲಿ ಹುತಾತ್ಮರಾದ ಇಬ್ಬರು ಗೃಹರಕ್ಷಕ ದಳದ ಕುಟುಂಬಗಳಿಗೆ ಗೃಹ ಇಲಾಖೆಯಿಂದ 57 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಲಾಗಿದೆ.

  • #WATCH | "All schools, colleges and workplaces are functioning normally. There are no restrictions on the movement of traffic. The internet is also operational. I appeal to all to not pay heed to rumours on social media. If anyone wants to report any information, they can reach… pic.twitter.com/dUHduFvDEV

ಪಾಣಿಪತ್​ ಬಂದ್​ಗೆ ಕರೆ: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಯ ಬ್ರಜ್ ಮಂಡಲ್ ಯಾತ್ರೆಯ ನಂತರ ಹಿಂಸಾಚಾರ ನಡೆದಿದ್ದು, ಘರ್ಷಣೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಮನೇಸರ್‌ನಲ್ಲಿ ಸಭೆ ಕರೆದಿವೆ. ಜೊತೆಗೆ ವಿಎಚ್‌ಪಿ ಕೂಡ ಪಾಣಿಪತ್‌ ಬಂದ್‌ಗೆ ಕರೆ ನೀಡಿದೆ.

ಇದನ್ನೂ ಓದಿ: ಹಿಜ್ಬ್ ಉತ್ ತಹ್ರೀರ್ ಪ್ರಕರಣ: ಹೈದರಾಬಾದ್​ನಲ್ಲಿ ಪ್ರಮುಖ ಆರೋಪಿ ಬಂಧಿಸಿದ ಎನ್​ಐಎ ಅಧಿಕಾರಿಗಳು

Last Updated : Aug 2, 2023, 1:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.