ಮಹಬೂಬ್‌ನಗರ (ತೆಲಂಗಾಣ): ಮಹಿಳೆಯರಿಗೆ ನಗ್ನ ಫೋಟೋಗಳನ್ನು ಕಳುಹಿಸುವಂತೆ ಹಣದ ಆಮಿಷವೊಡ್ಡಿದ್ದ ನಾಲ್ವರು ವಂಚಕರನ್ನು ಮಹಬೂಬ್‌ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಡ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದರು. ಆರೋಪಿಗಳು ಆ ನಗ್ನ ಫೋಟೋಗಳನ್ನು ಬಳಸಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಸಿಗಳನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡ ಕಿಂಗ್ ಪಿನ್: ಪ್ರಕರಣದ ಕಿಂಗ್ ಪಿನ್ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿಯನ್ನು ಬಂಧಿಸಿದರೆ ಇನ್ನಷ್ಟು ವಿಷಯಗಳು ಬೆಳಕಿಗೆ ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಪೂಜಾ ವಿಧಿವಿಧಾನಗಳಿಗೆ ನಿಮ್ಮ ಫೋಟೋಗಳು ಆಯ್ಕೆಯಾದರೆ ಕೋಟಿಗಟ್ಟಲೆ ಸಂಪಾದಿಸಬಹುದು ಎಂದು ಮಹಿಳೆಯರ ಗಮನವನ್ನು ಗ್ಯಾಂಗ್ನ ಆರೋಪಿಗಳು ಸೆಳೆಯುತ್ತಿದ್ದರು. ಆದರೆ, ಆ ಪೂಜೆಗೆ ಆಯ್ಕೆಯಾಗಲು ನ್ಯೂಡ್ ಫೋಟೋಗಳು ಬೇಕು ಎಂದು ಆಮಿಷ ಒಡ್ಡುತ್ತಿದ್ದರು. 20ರಿಂದ 25 ಅಮಾಯಕ ಮಹಿಳೆಯರ ನಗ್ನ ಫೋಟೋಗಳನ್ನು ಸಂಗ್ರಹಿಸಲು ಸುಳ್ಳು ಹೇಳುತ್ತಿದ್ದ ಗ್ಯಾಂಗ್ ನಾಲ್ವರನ್ನು ಮಹಬೂಬ್‌ನಗರ ಜಿಲ್ಲೆ ಜಡಚರ್ಲಾ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಾಗಿ ಶೋಧ ನಡೆಯುತ್ತಿದೆ. ಜ.18ರಂದು ಜಡಚರ್ಲ ಪಟ್ಟಣದ ಹಳೆ ಮಾರುಕಟ್ಟೆಯಲ್ಲಿ ಹೋರಾಟ ನಡೆಸುವುದಾಗಿ ಡಯಲ್-100ಗೆ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೊದಲಿಗೆ ಜೈನುಲ್ಲಾಹುದ್ದೀನ್ ಎಂಬಾತನನ್ನು ಬಂಧಿಸಲಾಗಿತ್ತು. ಮಹಿಳೆಯ ಚಿತ್ರ ತೆಗೆಯುತ್ತಿದ್ದ ಆರೋಪದ ಮೇಲೆ ಆತನನ್ನು ವಿಚಾರಣೆ ನಡೆಸಿದಾಗ ನಗ್ನ ಫೋಟೋ ದಂಧೆಯ ಪ್ರಕರಣವನ್ನು ಬಗೆಹರಿಸಲಾಗಿದೆ.
ಇದನ್ನೂ ಓದಿ: ಯುವತಿಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಿದ ಆರೋಪ: ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರೇಮಿ