ETV Bharat / bharat

ಪಾಕಿಸ್ತಾನದ ಗೆಳತಿಗಾಗಿ ಭಾರತದ ಪತ್ನಿಗೆ ವಿಚ್ಚೇದನ ಕೋರಿದ ಎನ್​ಆರ್​ಐ!

ಮದುವೆಯಾಗಿ 15 ವರ್ಷದ ಬಳಿಕ ಲಂಡನ್​ನಲ್ಲಿರುವ ಭಾರತದ ಎನ್​ಆರ್​ಐ ಪತಿ, ವಿವಾಹ ವಿಚ್ಚೇದನ ಕೋರಿ ಪತ್ನಿಗೆ ನೋಟಿಸ್​ ಕಳುಹಿಸಿದ್ದಾನೆ. ಇದಕ್ಕೆ ಆತ ನೀಡಿದ ಕಾರಣ ಪತ್ನಿಗೆ ಶಾಕ್​ ನೀಡಿದೆ.

nri-indian-falling-in-love-with-pakistani-girlfriend
ಪಾಕಿಸ್ತಾನದ ಗೆಳತಿಗಾಗಿ ಭಾರತದ ಪತ್ನಿಯ ವಿಚ್ಚೇದನ
author img

By

Published : Dec 14, 2022, 11:31 AM IST

ಮುಂಬೈ(ಮಹಾರಾಷ್ಟ್ರ): ಪಾಕಿಸ್ತಾನ ಮತ್ತು ಭಾರತ ಮಧ್ಯೆ ಎಣ್ಣೆ ಸೀಗೆಕಾಯಿ ಸಂಬಂಧವೇ. ಆದರೆ, ಜನರ ನಡುವೆ ಪ್ರೀತಿಗೇನು ಕಮ್ಮಿಯಿಲ್ಲ. ಭಾರತದ ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಪಾಕ್​ನ ಶೋಯೆಬ್​ ಮಲಿಕ್ ಜೊತೆ ಪ್ರೇಮ ವಿವಾಹವಾಗಿದ್ದರು. ಈಗ ಇಬ್ಬರ ಸಂಬಂಧ ಹಳಸಿದೆ ಎಂಬ ಗಾಳಿ ಸುದ್ದಿ ಮಧ್ಯೆಯೇ ಇನ್ನೊಂದು ಪ್ರೇಮ ಸಂಬಂಧ ಬೆಳಕಿಗೆ ಬಂದಿದೆ.

ಲಂಡನ್​ನಲ್ಲಿ ವಾಸವಿರುವ ಎನ್​ಆರ್​ಐ ಪಾಕ್​ ಗೆಳತಿಗಾಗಿ ಭಾರತದಲ್ಲಿರುವ ತನ್ನ ಹೆಂಡತಿಗೆ ವಿಚ್ಚೇದನ ಕೋರಿ ನೋಟಿಸ್​ ಕಳುಹಿಸಿದ್ದಾನೆ. ಇದನ್ನು ವಿರೋಧಿಸಿರುವ ಪತ್ನಿಯ ಕುಟುಂಬಸ್ಥರು ನ್ಯಾಯ ದೊರಕಿಸಿಕೊಡುವಂತೆ ಕೋರ್ಟ್​ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಚ್ಚೇದನಕ್ಕೆ ಕಾರಣವಾದ ಪಾಕಿಸ್ತಾನಿ ಗೆಳತಿ: ಮುಂಬೈ ಮೂಲದ ರಾಜ್​ಕುಮಾರ್​ ಬಾಬುಲಾಲ್​ ಜೈನ್​ ವಿಚ್ಚೇದನ ನೀಡಲು ಮುಂದಾದವರು. 15 ವರ್ಷಗಳ ಹಿಂದೆ ಮಹಾರಾಷ್ಟ್ರದ ಮಲದ್​ನ ಶ್ವೇತಾ ಎಂಬುವವರ ಜೊತೆ ವಿವಾಹವಾಗಿದ್ದರು. ಬಳಿಕ ಲಂಡನ್​ಗೆ ವರ್ಗವಾದರು. ರಾಜ್​ಕುಮಾರ್​ ಆಯುರ್ವೇದ ಔಷಧ ಅಂಗಡಿ ನಡೆಸಿದರೆ, ಶ್ವೇತಾ ಅವರು ಬ್ಯೂಟಿಷಿಯನ್​ ಆಗಿ ಕೆಲಸ ಮಾಡುತ್ತಿದ್ದರು.

3 ವರ್ಷಗಳಿಂದ ರಾಜ್​ಕುಮಾರ್​ ಅವರುಗೆ ಪಾಕಿಸ್ತಾನದ ಯುವತಿ ಪರಿಚಯವಾಗಿ, ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಇದು ಪತ್ನಿ ಶ್ವೇತಾಗೆ ಗೊತ್ತಾಗಿ ತಗಾದೆ ತೆಗೆದಿದ್ದಾರೆ. ಇದು ಜಗಳಕ್ಕೂ ಕಾರಣವಾಗಿ ಶ್ವೇತಾ ಅವರು ಕೆಲ ದಿನಗಳ ಹಿಂದಷ್ಟೇ ಗಂಡನಿಂದ ದೂರವಾಗಿ ಭಾರತಕ್ಕೆ ವಾಪಸ್​ ಆಗಿದ್ದಾರೆ. ತಂದೆಯ ಮನೆಯಲ್ಲಿ ವಾಸವಿರುವ ಶ್ವೇತಾ ಅವರಿಗೆ ಪತಿ ಶಾಕಿಂಗ್​ ಸುದ್ದಿ ನೀಡಿದ್ದಾರೆ.

ತಾನು ಪಾಕಿಸ್ತಾನ ಪ್ರೇಮಿಯನ್ನು ವರಿಸಲು ಮುಂದಾಗಿದ್ದು, ವಿವಾಹ ವಿಚ್ಚೇದನ ನೀಡುವಂತೆ ಕೋರಿ ಶ್ವೇತಾಗೆ, ರಾಜ್​ಕುಮಾರ್​ ನೋಟಿಸ್​ ಕಳುಹಿಸಿದ್ದಾರೆ. ಇದು ಕುಟುಂಬಸ್ಥರನ್ನು ದಿಗ್ಭ್ರಮೆಗೊಳಿಸಿದ್ದು, ತಂದೆಯ ಸಹಾಯದಿಂದ ಶ್ವೇತಾ ಅವರು ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ಪತಿಯಿಂದ ನ್ಯಾಯ ಕೊಡಿಸಬೇಕು ಎಂದು ಕೋರಿದ್ದು, ಮಲಾಡ್ ಪೊಲೀಸರ ತಂಡ ತನಿಖೆಗಾಗಿ ರಾಜ್‌ಕುಮಾರ್ ಜೈನ್ ಬೆನ್ನು ಬಿದ್ದಿದೆ.

ಓದಿ: ಪಾಕಿಸ್ತಾನದ ಐಎಸ್​ಐಗೆ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆ.. ಗುಜರಾತ್​ನಲ್ಲಿ ಜವಳಿ ವ್ಯಾಪಾರಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.