ನವದೆಹಲಿ : ಟೆಲಿಗ್ರಾಮ್ ಮೆಸೆಂಜರ್ ಇತರ ಅಪ್ಲಿಕೇಶನ್‌ಗಳೊಂದಿಗೆ ಲೈವ್ ಸ್ಟ್ರೀಮಿಂಗ್ ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಗ್ರೂಪ್ಸ್ ಮತ್ತು ಚಾನೆಲ್‌ಗಳಲ್ಲಿ ಅನಿಯಮಿತ ವೀಕ್ಷಕರೊಂದಿಗೆ ಲೈವ್ ವಿಡಿಯೋ ಪ್ರಸಾರದ ಸಾಮರ್ಥ್ಯವನ್ನು ಟೆಲಿಗ್ರಾಮ್ ಹೊಂದಿದೆ.
ಬಳಕೆದಾರರು ಟೆಲಿಗ್ರಾಮ್ನಲ್ಲಿ ಈಗ OBS ಸ್ಟುಡಿಯೋ ಮತ್ತು XSplit ಬ್ರಾಡ್‌ಕಾಸ್ಟರ್‌ನಂತಹ ಸ್ಟ್ರೀಮಿಂಗ್ ಪರಿಕರಗಳಿಂದ ಪ್ರಸಾರ ಮಾಡಬಹುದಾಗಿದೆ. ಓವರ್‌ಲೇಗಳು ಮತ್ತು ಮಲ್ಟಿ - ಸ್ಕ್ರೀನ್ ಲೇಔಟ್‌ಗಳನ್ನು ಸುಲಭವಾಗಿ ಸೇರಿಸಬಹುದಾಗಿದೆ. ಇದರಿಂದಾಗಿ ಯಾವುದೇ ಟೆಲಿಗ್ರಾಮ್ ಚಾನಲ್ ಅನ್ನು ವೃತ್ತಿಪರ ಟಿವಿ ಸ್ಟೇಷನ್ ಆಗಿ ಪರಿವರ್ತಿಸಬಹುದಾಗಿದೆ.
ಓದಿ: ಟ್ರಕ್ - ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 7 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!
ಈ ಹೊಸ ವೈಶಿಷ್ಟ್ಯವು ತಮ್ಮ ಚಂದಾದಾರರನ್ನು ತಲುಪಲು ಟೆಲಿಗ್ರಾಮ್ ಲೈವ್ ಸ್ಟ್ರೀಮ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವ ವೃತ್ತಿಪರ ಬ್ಲಾಗರ್‌ಗಳು ಮತ್ತು ಪತ್ರಕರ್ತರಿಗೆ ಸಹಾಯಕವಾಗಲಿದೆ ಎಂದು ಕಂಪನಿ ಹೇಳಿದೆ.
ಟೆಲಿಗ್ರಾಮ್ 2020 ರಿಂದ ಪ್ರತಿ 2GB ವರೆಗಿನ ಫೈಲ್‌ಗಳ ಹಂಚಿಕೆಗೆ ಅವಕಾಶವಿದೆ. ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಫೈಲ್‌ಗಳು ಡೌನ್ಲೋಡ್ ಆಗುತ್ತಿರುವಾಗ ಸರ್ಚ್ ಬಾರ್‌ನಲ್ಲಿ ಹೊಸ ಐಕಾನ್ ಗೋಚರಿಸುತ್ತದೆ. ಬಳಕೆದಾರರು ಐಕಾನ್ ಅನ್ನು ಟ್ಯಾಪ್ ಮಾಡಬಹುದು ಅಥವಾ ಅವುಗಳನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಹುಡುಕಾಟದಲ್ಲಿ ಡೌನ್ಲೋಡ್ ಟ್ಯಾಬ್‌ಗೆ ಹೋಗಬಹುದಾಗಿದೆ.
ಬಹು ಫೋಟೋಗಳನ್ನು ಕಳುಹಿಸುವ ಮೊದಲು ಬಳಕೆದಾರರು ತಮ್ಮ ಆಲ್ಬಮ್ ಅನ್ನು ನಿರ್ವಹಿಸಬಹುದು ಮತ್ತು ಪೂರ್ವ ವೀಕ್ಷಣೆಯನ್ನೂ ಮಾಡಬಹುದಾಗಿದೆ. ಹೊಸ ಅಟ್ಯಾಚ್ಮೆಂಟ್ ಮೆನು ಬಳಕೆದಾರರಿಗೆ ಆಯ್ಕೆಮಾಡಿದ ಫೋಟೋಗಳನ್ನು ಮರುಹೊಂದಿಸಲು ಅಥವಾ ತೆಗೆದುಹಾಕಲು ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೇ, ನವೀಕರಿಸಿದ ಫೈಲ್‌ಗಳ ಟ್ಯಾಬ್ ಇತ್ತೀಚೆಗೆ ಕಳುಹಿಸಿದ ಫೈಲ್‌ಗಳನ್ನು ತೋರಿಸುತ್ತದೆ ಮತ್ತು ಬಳಕೆದಾರರಿಗೆ ಅವುಗಳನ್ನು ಆಯಾ ಹೆಸರಿನಿಂದ ಹುಡುಕಲು ಅನುಮತಿಸುತ್ತದೆ ಎಂದು ಟೆಲಿಗ್ರಾಮ್ ಹೇಳಿದೆ.