ನವದೆಹಲಿ: ರೆಮ್ಡಿಸಿವಿರ್ ಇಂಜೆಕ್ಷನ್, ಐವರ್ಮೆಕ್ಟಿನ್ ಟ್ಯಾಬ್ಲೆಟ್‌ಗಳು, ಟೊಸಿಲಿಜುಮಾಬ್ ಇಂಜೆಕ್ಷನ್, ಫವಿಪಿರಾವೀರ್ ಕ್ಯಾಪ್ಸುಲ್, ಎನೋಕ್ಸಪರಿನ್ ಇಂಜೆಕ್ಷನ್ ಮತ್ತು ಡೆಕ್ಸಮೆಥಾಸೊನ್ ಟ್ಯಾಬ್ಲೆಟ್ ಅನ್ನು ಅಗತ್ಯ ಸರಕುಗಳೆಂದು ತಕ್ಷಣವೇ ಘೋಷಿಸಬೇಕೆಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರೆಮ್ಡಿಸಿವಿರ್ ಇಂಜೆಕ್ಷನ್, ಐವರ್ಮೆಕ್ಟಿನ್ ಮಾತ್ರೆಗಳು, ಟೊಸಿಲಿಜುಮಾಬ್ ಇಂಜೆಕ್ಷನ್, ಫವಿಪಿರಾವೀರ್ ಕ್ಯಾಪ್ಸುಲ್, ಎನೋಕ್ಸಪರಿನ್ ಇಂಜೆಕ್ಷನ್ ಮತ್ತು ಡೆಕ್ಸಮೆಥಾಸೊನ್ ಟ್ಯಾಬ್ಲೆಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಬಾಗೆಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಬೇಡಿಕೆಯ ಹೆಚ್ಚಳವು ಈ ಔಷಧಗಳ ಸಂಗ್ರಹಣೆ ಮತ್ತು ಕಾಳಸಂತೆಯಲ್ಲಿ ಮಾರಾಟಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಆಸ್ಪತ್ರೆಗಳಲ್ಲಿ ಈ ಔಷಧಗಳ ವಿತರಣೆ ಮತ್ತು ಬಳಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಉದ್ದೇಶಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಅಲ್ಲದೇ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಆಪತ್ಭಾಂದವ ವ್ಯಾಕ್ಸಿನ್: ಒಂದು ಡೋಸ್ ಲಸಿಕೆ ಪಡೆದ್ರೆ ಸೋಂಕಿನ ವೇಗ ಅರ್ಧ ಕ್ಷೀಣ - ವರದಿ