ETV Bharat / bharat

ಟಿಕ್ರಿ ಗಡಿಯಲ್ಲಿ ಅತ್ಯಾಚಾರ ಪ್ರಕರಣ:ರೈತ ಮುಖಂಡ ಯೋಗೇಂದ್ರ ಯಾದವ್​ಗೆ ನೋಟಿಸ್​ - ಯೋಗೇಂದ್ರ ಯಾದವ್​ಗೆ ನೋಟಿಸ್​ ನ್ಯೂಸ್​

ಇತ್ತೀಚಿನ ಟಿಕ್ರಿ ಗಡಿ ಅತ್ಯಾಚಾರ ಪ್ರಕರಣದಲ್ಲಿ ರೈತ ಮುಖಂಡ ಯೋಗೇಂದ್ರ ಯಾದವ್​​ಗೆ ನೋಟಿಸ್​ ನೀಡಲಾಗಿದ್ದು,ಶೀಘ್ರದಲ್ಲೇ ಹರಿಯಾಣ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ.

rape case
rape case
author img

By

Published : May 11, 2021, 9:11 PM IST

ಬಹುದುರ್ಗ: ಟಿಕ್ರಿ ಗಡಿ ಅತ್ಯಾಚಾರ ಪ್ರಕರಣದಲ್ಲಿ ರೈತ ಮುಖಂಡ ಯೋಗೇಂದ್ರ ಯಾದವ್ ಅವರಿಗೆ ಹರಿಯಾಣ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗವು ಯೋಗೇಂದ್ರ ಯಾದವ್ ಅವರಿಗೆ ಪ್ರತ್ಯೇಕ ನೋಟಿಸ್ ಕಳುಹಿಸಿದೆ.

ಯಾದವ್ ಅವರನ್ನು ಶೀಘ್ರದಲ್ಲೇ ಹರಿಯಾಣ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಈ ಮೊದಲು, ಟಿಕ್ರಿ ಗಡಿಯಲ್ಲಿ ನಡೆದಿದ್ದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ, ಪಶ್ಚಿಮ ಬಂಗಾಳದಿಂದ ಬಂದಿದ್ದ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾಗಿದ್ದಳು ಮತ್ತು ಅನಂತರ ಕೋವಿಡ್ -19 ಸೋಂಕು ತಗುಲಿ ಸಾವನ್ನಪ್ಪಿದ್ದಳು.

  • Sending a notice to @_YogendraYadav who himself is saying that the girl who was allegedly raped at #TikriBorder gave him hint about sexual assault and he didn't report to police.

    — Rekha Sharma (@sharmarekha) May 11, 2021 " class="align-text-top noRightClick twitterSection" data=" ">

ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಟಿಕ್ರಿ ಗಡಿಯ ಅತ್ಯಾಚಾರ ಪ್ರಕರಣದಲ್ಲಿ ಯೋಗೇಂದ್ರ ಯಾದವ್ ಅವರಿಗೆ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ. ವರದಿಗಳ ಪ್ರಕಾರ, ಕಿರುಕುಳದ ಬಗ್ಗೆ ಯಾದವ್‌ಗೆ ಸಂತ್ರಸ್ತೆ ಗಮಕ್ಕೆ ತಂದಿದ್ದರೂ ಈ ಬಗ್ಗೆ ಯಾದವ್​ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.

ಸಂತ್ರಸ್ತೆಯ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಜನರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಇನ್ನು ಈ ಮಧ್ಯೆ ಸಂಯುಕ್ತ ಕಿಸಾನ್ ಮೋರ್ಚಾ ಆನ್‌ಲೈನ್ ಪತ್ರಿಕಾ ಪ್ರಕಟಣೆಯಲ್ಲಿ ಈ ಪ್ರಕರಣದ ಸ್ಪಷ್ಟೀಕರಣವನ್ನು ನೀಡಿದೆ. ಮಹಿಳಾ ಪ್ರತಿಭಟನಾಕಾರರ ಮೇಲಿನ ಅತ್ಯಾಚಾರದ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಕಾರ್ಯಕರ್ತ ಯೋಗೇಂದ್ರ ಯಾದವ್ ಹೇಳಿದ್ದಾರೆ. ಇನ್ನು ಸಂತ್ರಸ್ತೆಯ ತಂದೆ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಆರೋಪಿಗಳಾದ ಅನೂಪ್ ಮತ್ತು ಅನಿಲ್ ಎಂದು ಮಾತ್ರ ಹೆಸರಿಸಿದ್ದಾರೆ, ಆದರೆ, ಪೊಲೀಸರು ಆರೋಪಿಸಿರುವ ಉಳಿದ ನಾಲ್ಕು ಜನರನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.