ETV Bharat / bharat

ಖ್ಯಾತ ಬಂಗಾಳಿ ನಿರ್ದೇಶಕ ತರುಣ್ ಮಜುಂದಾರ್ ನಿಧನ - ತರುಣ್ ಮಜುಂದಾರ್

92ರ ಹರೆಯದ ಖ್ಯಾತ ಬಂಗಾಳಿ ನಿರ್ದೇಶಕ ತರುಣ್ ಮಜುಂದಾರ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

Tarun Majumdar
Tarun Majumdar
author img

By

Published : Jul 4, 2022, 1:04 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮಧ್ಯಮ ವರ್ಗದ ಕುಟುಂಬಗಳ ಜೀವನ ಶೈಲಿಯ ಕುರಿತಾದ ಸಿನಿಮಾಗಳನ್ನು ನಿರ್ಮಿಸಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಿದ್ದ ಖ್ಯಾತ ಬಂಗಾಳಿ ನಿರ್ದೇಶಕ ತರುಣ್ ಮಜುಂದಾರ್ ಅವರು ಇಂದು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

92ರ ಹರೆಯದ ತರುಣ್ ಮಜುಂದಾರ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

1990ರಲ್ಲಿ ಭಾರತ ಸರ್ಕಾರವು 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮಶ್ರೀ' ನೀಡಿ ಮಜುಂದಾರ್ ಅವರನ್ನು ಗೌರವಿಸಿದೆ. ಜೊತೆಗೆ ಅವರು 'ಆನಂದ್​ಲೋಕ' ಹಾಗೂ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮಜುಂದಾರ್ ಅವರ ಗಮನಾರ್ಹ ಕೃತಿಗಳು ಸ್ಮೃತಿ ತುಕು ಥಾಕ್ (1960), ಪಾಲಟಕ್ (1963) ಮತ್ತು ಗಣದೇವತೆ (1978). ಬಾಲಿಕಾ ಬಾಧು (1976), ಕುಹೇಲಿ (1971), ಶ್ರೀಮಾನ್ ಪೃಥ್ವಿರಾಜ್ (1972) ಮತ್ತು ದಾದರ್ ಕೀರ್ತಿ (1980) ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನಿರ್ದೇಶಿಸಿದ ಹಿರಿಮೆ ಹೊಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಸಿನಿ ಶೆಟ್ಟಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.