ETV Bharat / bharat

ಕರ್ನಾಟಕ ಚುನಾವಣೆಯಲ್ಲಿ NOTA ಒತ್ತಿದ 2.6 ಲಕ್ಷಕ್ಕೂ ಹೆಚ್ಚು ಮತದಾರರು - ಮೇಲಿನ ಯಾವುದೂ ಅಲ್ಲ

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 2.6 ಲಕ್ಷಕ್ಕೂ ಹೆಚ್ಚು ಮತದಾರರು ನೋಟಾ ಆಯ್ಕೆ ಬಳಸಿದ್ದಾರೆ.

ನೋಟಾ
NOTA
author img

By

Published : May 14, 2023, 8:44 AM IST

ನವದೆಹಲಿ: ಮೇ 10 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ(ಶನಿವಾರ) ಹೊರಬಿದ್ದಿದೆ. ಕಾಂಗ್ರೆಸ್​ ಪಕ್ಷ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. ಆದ್ರೆ, ಈ ಬಾರಿಯ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ 2.6 ಲಕ್ಷಕ್ಕೂ ಹೆಚ್ಚು ಮತದಾರರು 'ಮೇಲಿನ ಯಾವುದೂ ಅಲ್ಲ' ಅಥವಾ NOTA ಆಯ್ಕೆ ಬಳಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ.

ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಲಭ್ಯವಿದ್ದ ಅಂಕಿಅಂಶಗಳ ಪ್ರಕಾರ, "ಬುಧವಾರದಂದು ಮತ ಚಲಾಯಿಸಲು ಆಗಮಿಸಿದ್ದ ಸುಮಾರು 3.84 ಕೋಟಿ ಜನರಲ್ಲಿ 2,59,278 (ಶೇ. 0.7) ಮಂದಿ ನೋಟಾ ಆಯ್ಕೆಗೆ ಮತ ಹಾಕಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ 3,22,841 ಜನ ನೋಟಾ ಮತ ಹಾಕಿದ್ದರು. ಅಂದರೆ ಒಟ್ಟು ಮತದಾನದ 0.9% ನೋಟಾ ಚಲಾವಣೆ ಆಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ನೋಟಾ ಮತಗಳಲ್ಲಿ ಕುಸಿತವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಚಲಾವಣೆಯಾಗಿತ್ತು. ಸುಮಾರು 2.57 ಲಕ್ಷ ಮತದಾರರು ನೋಟಾ ಚಲಾಯಿಸಿ ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು.

ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ನೋಟಾ ಆಯ್ಕೆಯನ್ನು 2013 ರಲ್ಲಿ ಪರಿಚಯಿಸಲಾಯಿತು. ಇದು ಬ್ಯಾಲೆಟ್ ಪೇಪರ್​ನೊಂದಿಗೆ ಕಪ್ಪು ಶಿಲುಬೆಯನ್ನು ಹೊಂದಿರುವ ತನ್ನದೇ ಆದ ಚಿಹ್ನೆಯನ್ನು ಹೊಂದಿದೆ. ಸೆಪ್ಟೆಂಬರ್ 2013 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗವು ಇವಿಎಂಗಳಲ್ಲಿ ನೋಟಾ ಬಟನ್ ಅನ್ನು ಮತದಾನ ಫಲಕದಲ್ಲಿ ಕೊನೆಯ ಆಯ್ಕೆಯಾಗಿ ಸೇರಿಸಿದೆ. ಈ ನೋಟಾ ಚಿಹ್ನೆಯನ್ನು ಚುನಾವಣಾ ಸಮಿತಿಗಾಗಿ ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ವಿನ್ಯಾಸಗೊಳಿಸಿದೆ.

ಸುಪ್ರೀಂ ಕೋರ್ಟ್ ಆದೇಶಕ್ಕೂ ಮೊದಲು, ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಒಲವು ತೋರದವರು ತಮ್ಮ ನಿರ್ಧಾರವನ್ನು ಚುನಾವಣಾ ನಿಯಮಗಳು -1961ರ 'ನಿಯಮ 49-O' (ಮತದಾನ ಮಾಡದಿರಲು ನಿರ್ಧರಿಸುವುದು) ಅಡಿಯಲ್ಲಿ ನೋಂದಾಯಿಸುವ ಆಯ್ಕೆ ಹೊಂದಿದ್ದರು. ಆದರೆ, ಇದು ಮತದಾರರ ಗೌಪ್ಯತೆಗೆ ಧಕ್ಕೆ ತಂದ ಹಿನ್ನೆಲೆ ನೋಟಾ ಪರಿಚಯಿಸಲಾಯಿತು.

ಇದನ್ನೂ ಓದಿ : ಉತ್ತಮ ಅಭ್ಯರ್ಥಿ ಕಾಣದಿದ್ದರೆ NOTA ಬಟನ್‌ ಒತ್ತಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಏನಿದು ನೋಟಾ ಮತದಾನ?: ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ವಿಶೇಷವಾದ ಮಹತ್ವವಿದೆ. ಮತಗಳು ಕೇವಲ ಅಭ್ಯರ್ಥಿ ಗೆಲುವಿಗೆ ಕಾರಣವಾಗುವುದು ಮಾತ್ರವಲ್ಲದೇ, ಪ್ರಜಾತಂತ್ರದ ಭವಿಷ್ಯದ ಮೇಲೆ ನಿರ್ಣಯಾತ್ಮಕ ಪ್ರಭಾವ ಬೀರುತ್ತದೆ. ಒಂದು ಮತದಿಂದ ಸಹ ಗೆದ್ದ ಅನೇಕ ಉದಾಹರಣೆಗಳಿವೆ. ಆದ್ರೆ, ಇಂದಿನ ಪ್ರಜ್ಞಾವಂತ ಜನರು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ 'ಮೇಲಿನ ಯಾವುದೂ ಅಲ್ಲ' ಅಥವಾ ನೋಟಾ ಕ್ಕೆ ಮತ ಹಾಕಲು ಅವಕಾಶ ನೀಡಲಾಗಿದೆ. ನೋಟಾಕ್ಕೆ ತನ್ನ ಮತ ಚಲಾಯಿಸುವ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಒಬ್ಬ ವ್ಯಕ್ತಿಯು ತಾನು ಯಾರನ್ನೂ ಆಯ್ಕೆ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿರುತ್ತಾನೆ ಎಂದರ್ಥ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.