ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಉತ್ತುಂಗದಲ್ಲಿದ್ದಾಗ ಜನರಿಗೆ ಔಷಧ ಮತ್ತು ಆಮ್ಲಜನಕ ನೀಡಿರುವ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ದೆಹಲಿ ಪೊಲೀಸರಿಂದ ವಿಚಾರಣೆಗೊಳಗಾಗಿದ್ದು, ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
-
#DelhiPolice conducted enquiry for 4th day on direction of Hon’ble High Court regarding allegations against politicians across political parties on alleged illegal distribution of medicines for #COVID. Sensationalism be avoided. It considers complying Court orders its duty. pic.twitter.com/TzOcZsGFvR
— #DilKiPolice Delhi Police (@DelhiPolice) May 14, 2021 " class="align-text-top noRightClick twitterSection" data="
">#DelhiPolice conducted enquiry for 4th day on direction of Hon’ble High Court regarding allegations against politicians across political parties on alleged illegal distribution of medicines for #COVID. Sensationalism be avoided. It considers complying Court orders its duty. pic.twitter.com/TzOcZsGFvR
— #DilKiPolice Delhi Police (@DelhiPolice) May 14, 2021#DelhiPolice conducted enquiry for 4th day on direction of Hon’ble High Court regarding allegations against politicians across political parties on alleged illegal distribution of medicines for #COVID. Sensationalism be avoided. It considers complying Court orders its duty. pic.twitter.com/TzOcZsGFvR
— #DilKiPolice Delhi Police (@DelhiPolice) May 14, 2021
ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ದೆಹಲಿ ಪೊಲೀಸರು ಬಿ.ವಿ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ, ಕೋವಿಡ್ ಸಮಯದಲ್ಲಿ ಜನರಿಗೆ ಔಷಧಿಗಳನ್ನು ಮತ್ತು ಪರಿಹಾರಗಳನ್ನು ಒದಗಿಸಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಪ್ರಶ್ನಿಸಿದ್ದರು. ಜನರ ಪ್ರಾಣವನ್ನು ಉಳಿಸಲು ಸಹಾಯ ಮಾಡುತ್ತಿದ್ದೇನೆ. ಐವೈಸಿ (ಇಂಡಿಯನ್ ಯೂತ್ ಕಾಂಗ್ರೆಸ್) ನಲ್ಲಿ ನೂರಾರು ಸ್ವಯಂಸೇವಕರ ತಂಡವನ್ನು ನಾವು ಹೊಂದಿದ್ದೇವೆ. ವಸ್ತುಗಳನ್ನು ಜೋಡಿಸಲು ಮತ್ತು ಅದನ್ನು ಜನರಿಗೆ ತಲುಪಿಸಲು ಸಹಾಯಕರಾಗಿದ್ದಾರೆ ಎಂದಿದ್ದಾರೆ.
ಓದಿ: ಕೋವಿಡ್ ಸೋಂಕಿತರಿಗೆ ನೆರವು: ಪೊಲೀಸರಿಂದ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ನ ಪ್ರಶ್ನೆ
ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಪೊಲೀಸರಿಗಾಗಲಿ ಅಥವಾ ಯಾವುದೇ ಪಿಐಎಲ್‌ಗೆ ಆಗಲಿ ನಾವು ಹೆದರುವುದಿಲ್ಲ. ತಮ್ಮ ಕುಟುಂಬಗಳನ್ನು ಮಾರಣಾಂತಿಕ ವೈರಸ್‌ನಿಂದ ರಕ್ಷಿಸಲು ತೀವ್ರವಾಗಿ ಪ್ರಯತ್ನಿಸುತ್ತಿರುವ ಜನರಿಗೆ ನಾವು ಸಹಾಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಐವೈಸಿ ಅಧ್ಯಕ್ಷ ಹೇಳಿದರು.
-
मदद करने वाले @IYC के साथियों और युवा कांग्रेस अध्यक्ष @srinivasiyc को दिल्ली पुलिस भेज #COVID19India के मरीज़ों की मदद से रोकना मोदी सरकार का भयावह चेहरा है।
— Randeep Singh Surjewala (@rssurjewala) May 14, 2021 " class="align-text-top noRightClick twitterSection" data="
ऐसी घृणित बदले की कार्यवाही से न हम डरेंगे, न हमारा जज़्बा टूटेगा। सेवा का संकल्प और दृढ़ होगा।
हमारा बयान-: pic.twitter.com/5sbCaFMvz7
">मदद करने वाले @IYC के साथियों और युवा कांग्रेस अध्यक्ष @srinivasiyc को दिल्ली पुलिस भेज #COVID19India के मरीज़ों की मदद से रोकना मोदी सरकार का भयावह चेहरा है।
— Randeep Singh Surjewala (@rssurjewala) May 14, 2021
ऐसी घृणित बदले की कार्यवाही से न हम डरेंगे, न हमारा जज़्बा टूटेगा। सेवा का संकल्प और दृढ़ होगा।
हमारा बयान-: pic.twitter.com/5sbCaFMvz7मदद करने वाले @IYC के साथियों और युवा कांग्रेस अध्यक्ष @srinivasiyc को दिल्ली पुलिस भेज #COVID19India के मरीज़ों की मदद से रोकना मोदी सरकार का भयावह चेहरा है।
— Randeep Singh Surjewala (@rssurjewala) May 14, 2021
ऐसी घृणित बदले की कार्यवाही से न हम डरेंगे, न हमारा जज़्बा टूटेगा। सेवा का संकल्प और दृढ़ होगा।
हमारा बयान-: pic.twitter.com/5sbCaFMvz7
ಪೊಲೀಸ್ ತಂಡದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರ ಪ್ರಶ್ನೆಗಳಿಗೆ ವಿವರವಾದ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದೇನೆ ಎಂದು ಶ್ರೀನಿವಾಸ್ ಹೇಳಿದರು.
ಪರಿಹಾರ ಸಾಮಗ್ರಿಗಳ ವಿತರಣೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ರಾಜಕೀಯಗೊಳಿಸಬಾರದೆಂದು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ಮತ್ತು ದೆಹಲಿ ಘಟಕದ ವಕ್ತಾರ ಹರೀಶ್ ಖುರಾನಾ ಸೇರಿದಂತೆ ಬಿಜೆಪಿ ಮುಖಂಡರನ್ನು ಹೇಳಿದ್ದಾರೆ.
ಓದಿ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಕಚೇರಿ ಮೇಲೆ ದಾಳಿ ಖಂಡಿಸಿ ಶಿವಮೊಗ್ಗ 'ಕೈ' ಕಾರ್ಯಕರ್ತರ ಪ್ರತಿಭಟನೆ
ಏನಿದು ಘಟನೆ...
ಕೋವಿಡ್-19ಗೆ ಸಂಬಂಧಿಸಿದ ಔಷಧಗಳನ್ನ ಅನೇಕ ನಾಯಕರು ಆಸ್ಪತ್ರೆಗಳಿಗೆ ವಿತರಿಸಿದ್ದಾರೆಂದು ಡಾ.ದೀಪಕ್ ಸಿಂಗ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕಷ್ಟದ ಸಮಯದಲ್ಲಿ ಜನರು ಔಷಧ ಪಡೆಯದಿದ್ದಾಗ, ಅದು ನಾಯಕರ ಕೈಗೆ ಹೇಗೆ ತಲುಪಿತು. ಹೈಕೋರ್ಟ್ನಲ್ಲಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿತ್ತು. ಅರ್ಜಿ ಮೇರೆಗೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಇಡೀ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತು. ಹೀಗಾಗಿ ಯೂತ್ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರನ್ನ ಪ್ರಶ್ನೆ ಮಾಡಲಾಗಿದೆ. ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಹೇಳಿಕೆಯನ್ನೂ ಶೀಘ್ರದಲ್ಲೇ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.