ETV Bharat / bharat

ದೇಶದಲ್ಲೊಂದು ಅಪರಾಧ ಮುಕ್ತ ಗ್ರಾಮ.. ಏಕತೆ, ಅಹಿಂಸೆ, ಶಾಂತಿ ಜಪ ಮಾಡ್ತಾರೆ ಇಲ್ಲಿನ ಜನ! - ಕಟ್ರಾನ್​ ಗ್ರಾಮ ಸುದ್ದಿ

ರಾಜ್ಯ ಅಂದ್ಮೇಲೆ ಅಲ್ಲಿ ಅಪರಾಧ ಪ್ರಕರಣಗಳು ಇದ್ದೇ ಇರುತ್ತವೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಜನರು ಬಂಧನವಾಗಿರುತ್ತಾರೆ. ತಮ್ಮವರನ್ನು ಜೈಲಿನಿಂದ ಹೊರತರಲು ನ್ಯಾಯಾಲಯಕ್ಕೆ ಅಲೆದಾಡುವುದು ಕಾಮನ್​. ಆದ್ರೆ ಇಲ್ಲೊಂದು ಗ್ರಾಮದ ಜನರು ಇವತ್ತಿಗೂ ಪೊಲೀಸ್​ ಠಾಣೆಯಾಗಲಿ, ಕೋರ್ಟ್​ ಮೆಟ್ಟಿಲಾಗಲಿ ಹತ್ತಿಲ್ಲ. ಈ ಅಪರಾಧ ಮುಕ್ತ ಗ್ರಾಮ ಎಲ್ಲಿದೆ, ಶತಮಾನಗಳಿಂದ ಇಲ್ಲಿ ಶಾಂತಿ-ಸೌಹಾರ್ದತೆ ಹೇಗೆ ಕಾಪಾಡಿಕೊಂಡು ಬಂದಿದ್ದಾರೆ ಎಂಬುದು ತಿಳಿಯೋಣಾ ಬನ್ನಿ..

Crime Free Village Of Bihar  katrao village in bettiah bihar  Crime Free Village Of Bettiah  Bettiah SP Upendra Nath Verma On katrao village  Not a single FIR from katrao village  ಕಟ್ರಾನ್​ ಗ್ರಾಮದಲ್ಲಿ ಎಫ್‌ಐಆರ್ ದಾಖಲಾಗಿಲ್ಲ  ಬಿಹಾರದಲ್ಲಿ ಅಪರಾಧ ಮುಕ್ತ ಗ್ರಾಮ  ಕಟ್ರಾನ್​ ಅಪರಾಧ ಮುಕ್ತ ಗ್ರಾಮ  ಕಟ್ರಾನ್​ ಗ್ರಾಮ ಸುದ್ದಿ  ಬಿಹಾರ ಸುದ್ದಿ
ದೇಶದಲ್ಲೊಂದಿದೆ ಅಪರಾಧ ಮುಕ್ತ ಗ್ರಾಮ
author img

By

Published : Apr 29, 2022, 9:53 AM IST

ಪಶ್ಚಿಮ ಚಂಪಾರಣ್ (ಬಿಹಾರ): ಬಿಹಾರ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚು. ಇಲ್ಲಿ ಕೇವಲ 50 ರೂಪಾಯಿಗೂ ಕೊಲೆಯಾದ ಉದಾಹರಣೆಗಳಿವೆ. ಈ ರಾಜ್ಯದಲ್ಲಿ ದರೋಡೆ, ಸುಲಿಗೆಗೆ ಸಾಮಾನ್ಯವಾಗಿ ಬಿಟ್ಟಿವೆ. ಈಗಲೂ ಕೆಲ ಪ್ರದೇಶಗಳಲ್ಲಿ ದರೋಡೆಕೋರರ ಗ್ಯಾಂಗ್​ಗಳದ್ದೇ ಪ್ರಾಬಲ್ಯವಿದೆ. ಬಡತನ, ದೌರ್ಜನ್ಯಗಳಿಂದ ಬೇಸತ್ತ ಕೆಲವರು ಚಿಕ್ಕ ವಯಸ್ಸಿನಿಂದಲೇ ದರೋಡೆಕೋರರ ಗ್ಯಾಂಗ್ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಅಂತಹ ಬಿಹಾರ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಂದ ಬಳಿಕ ಇಲ್ಲಿಯವರೆಗೆ ಯಾವುದೇ ಅಪರಾಧ ನಡೆಯದಿರುವ ಗ್ರಾಮವೊಂದಿದೆ. ಆ ಗ್ರಾಮದ ಹೆಸರು ಕಟ್ರಾನ್ ಅಂತಾ.​

Crime Free Village Of Bihar  katrao village in bettiah bihar  Crime Free Village Of Bettiah  Bettiah SP Upendra Nath Verma On katrao village  Not a single FIR from katrao village  ಕಟ್ರಾನ್​ ಗ್ರಾಮದಲ್ಲಿ ಎಫ್‌ಐಆರ್ ದಾಖಲಾಗಿಲ್ಲ  ಬಿಹಾರದಲ್ಲಿ ಅಪರಾಧ ಮುಕ್ತ ಗ್ರಾಮ  ಕಟ್ರಾನ್​ ಅಪರಾಧ ಮುಕ್ತ ಗ್ರಾಮ  ಕಟ್ರಾನ್​ ಗ್ರಾಮ ಸುದ್ದಿ  ಬಿಹಾರ ಸುದ್ದಿ
ಕಟ್ರಾನ್​ ಗ್ರಾಮದ ನಾಮಫಲಕ

ಅಪರಾಧ ಮುಕ್ತ ಗ್ರಾಮ: ಕಟ್ರಾನ್ ಎಂಬ ಗ್ರಾಮ ಬಿಹಾರದ ಪಶ್ಚಿಮ ಚಂಪಾರಣ್‌ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಆದರೆ, ಈ ಹಳ್ಳಿಯ ವಿಶೇಷತೆ ದೊಡ್ಡ ನಗರಗಳನ್ನು ಹಿಂದಿಕ್ಕಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ಬಿಹಾರದ ಈ ಗ್ರಾಮ ದೇಶಕ್ಕೆ ಮಾದರಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಯಾವುದೇ ಅಪರಾಧಗಳು ಇಲ್ಲಿ ನಡೆದಿಲ್ಲ. ಈ ವಿಷಯ ತಿಳಿಯುತ್ತಿದ್ದಂತೆ ಎಲ್ಲರೂ ಆಶ್ಚರ್ಯ ಪಡುವುದು ಸಹಜ.

ದೇವರಿಗೆ ಪೂಜಿಸುತ್ತಿರುವ ಕಟ್ರಾನ್​ ಗ್ರಾಮಸ್ಥ

ಅಹಿಂಸಾ ತತ್ವ: ಈ ಗ್ರಾಮದಲ್ಲಿ ಶಾಂತಿ ವ್ಯವಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿಸಲಾಗಿದೆ. ಬಿಹಾರದ ಕಟ್ರಾನ್ ಗ್ರಾಮದ ಈ ವಿಶೇಷತೆಯು ಇತರರಿಂದ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಬಿಹಾರದ ಈ ಗ್ರಾಮದಲ್ಲಿ ಇಂದಿಗೂ ಗಾಂಧೀಜಿ ಅವರ ಅಹಿಂಸಾ ತತ್ವಗಳನ್ನು ಅನುಸರಿಸಲಾಗುತ್ತಿದೆ.

ಈ ಗ್ರಾಮದಲ್ಲಿ ನೋ ಕ್ರೈಂ: ಈ ಗ್ರಾಮದ ಜನಸಂಖ್ಯೆ ಸುಮಾರು ಎರಡು ಸಾವಿರ. ಕಟ್ರಾನ್ ಗ್ರಾಮವು ಪಾಟ್ನಾದಿಂದ 285 ಕಿಮೀ ದೂರದಲ್ಲಿದೆ. ಇಲ್ಲಿ ಥಾರು, ಮುಸ್ಲಿಂ, ಮುಸಾಹರ್ ಮತ್ತು ಧಂಗರ್‌ ಸೇರಿದಂತೆ ವಿವಿಧ ಸಮುದಾಯಗಳ ಜನ ವಾಸಿಸುತ್ತಿದ್ದಾರೆ. ಈ ಗ್ರಾಮ ಸಹೋದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ. 1947ರಲ್ಲಿ ಭಾರತ ಸ್ವತಂತ್ರವಾದಾಗಿನಿಂದ ಇಲ್ಲಿಯ ಅಧಿಕಾರಿಗಳು ಒಂದೇ ಒಂದು ಪ್ರಕರಣವನ್ನು ದಾಖಲಿಸಿಲ್ಲ. ಇಲ್ಲಿಯವರೆಗೆ ಇಲ್ಲಿ ಯಾವುದೇ ಜಗಳ, ವಿವಾದ, ಕಳ್ಳತನ ಅಥವಾ ದರೋಡೆ ನಡೆದಿಲ್ಲ ಎಂಬುದು ಅಚ್ಚರಿಯ ಸಂಗತಿ.

ಕಟ್ರಾನ್​ ಗ್ರಾಮದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ

ಓದಿ: 10ನೇ ತರಗತಿ ಟಾಪರ್‌ ವಿದ್ಯಾರ್ಥಿನಿಗೆ IAS ಕನಸು: ಬಾಲಕಿಯ ಶಿಕ್ಷಣಕ್ಕೆ ನೆರವಾಗಲು ಪಣತೊಟ್ಟ ಒಂದಿಡೀ ಗ್ರಾಮ!

ಠಾಣೆಗೂ ಹೋಗಿಲ್ಲ, ಕೋರ್ಟ್ ನೋಡಿಲ್ಲ: ಇಲ್ಲಿನ ಜನ ಇಂದಿಗೂ ಪೊಲೀಸ್​ ಠಾಣೆ ಮೆಟ್ಟಿಲುಗಳನ್ನು ಹತ್ತಿಲ್ಲವಂತೆ. ಅಷ್ಟೇ ಅಲ್ಲ ನ್ಯಾಯಾಲಯಕ್ಕೂ ಮೊರೆ ಹೋಗಿಲ್ವಂತೆ. ಇದುವರೆಗೆ ಈ ಗ್ರಾಮದಲ್ಲಿ ಯಾವುದೇ ಅಪರಾಧ ನಡೆದಿಲ್ಲ. ಸಣ್ಣಪುಟ್ಟ ಜಗಳವಾದರೂ ಗ್ರಾಮದ ಅಧ್ಯಕ್ಷ ಇತ್ಯರ್ಥ ಮಾಡುತ್ತಾರೆ. ಪೊಲೀಸ್ ಠಾಣೆ, ಕೋರ್ಟ್​​​​​​ ನೋಡದ ಜನ ಇರುವ ಗ್ರಾಮವಿದು. ಇಲ್ಲಿ ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದರೊಂದಿಗೆ ಇತರ ಜನರಿಗೂ ಅಹಿಂಸೆ, ಶಾಂತಿ ಮಾರ್ಗದಲ್ಲಿ ನಡೆಯಬೇಕೆಂಬ ಸಂದೇಶವನ್ನೂ ಸಾರುತ್ತಿದ್ದಾರೆ.

ಕಟ್ರಾನ್​ ಗ್ರಾಮದ ಯುವತಿಯರು

ಎಫ್‌ಐಆರ್ ದಾಖಲಾಗಿಲ್ಲ: ಗುಲಾಮಗಿರಿಯನ್ನು ಕಂಡ ಗ್ರಾಮದ ಹಿರಿಯರ ಪ್ರಕಾರ, ಆಗ ಈ ಗ್ರಾಮದಲ್ಲಿ ಪೊಲೀಸರ ಅವಶ್ಯಕತೆ ಇರಲಿಲ್ಲ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಈ ಗ್ರಾಮವನ್ನು ಅತ್ಯಂತ ಹಿಂದುಳಿದ ಗ್ರಾಮ ಎಂದು ಪರಿಗಣಿಸಲಾಗಿದೆ. ಆದರೆ, ಅವರ ಚಿಂತನೆಯು ಇತರರನ್ನು ಅಚ್ಚರಿಗೊಳಿಸಿದೆ ಎಂದರು. ಆಧುನಿಕರು, ವಿದ್ಯಾವಂತರು ಎಂದು ಕರೆಸಿಕೊಳ್ಳುವ ಸಮಾಜದಲ್ಲಿ ನಾವೂ ಮುಂದಿದ್ದೇವೆ ಎಂಬುದನ್ನು ಕಾಟ್ರಾನ್ ಗ್ರಾಮದ ಜನರು ಸಾಬೀತುಪಡಿಸಿದ್ದಾರೆ. ದರೋಡೆಕೋರರ ಹಾವಳಿಯಲ್ಲೂ ಗ್ರಾಮದ ಚೇತನವನ್ನು ಕಾಪಾಡಿಕೊಂಡ ಬಂದವರಿಗೆ ಪೊಲೀಸ್ ಇಲಾಖೆ ನಮನ ಸಲ್ಲಿಸುತ್ತಿದೆ.

ಗ್ರಾಮಸ್ಥರ ಹೇಳಿದ್ದು ಹೀಗೆ: ಇಲ್ಲಿಯವರೆಗೂ ನಮ್ಮ ಗ್ರಾಮದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಜಗಳವಾದಾಗ ಇಬ್ಬರೂ ಸೇರಿ ಬಗೆಹರಿಸಿಕೊಳ್ಳುತ್ತಾರೆ. ಹೀಗೆ ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಅಂತಾ ಗ್ರಾಮದ ಜನರ ಮಾತಾಗಿದೆ.

ಕಾರ್ಯದಲ್ಲಿ ನಿರತವಾಗಿರುವ ಕಟ್ರಾನ್​ ಗ್ರಾಮದ ಮಹಿಳೆ

ಪ್ರಕರಣ ಇತ್ಯರ್ಥವಾಗುವುದು ಹೀಗೆ: ನ್ಯಾಯಾಂಗ ರಚನೆಯಿಂದಾಗಿ ಈ ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಕಟ್ರಾನ್​ನಲ್ಲಿರುವ ಗೋಮಸ್ತ ಪದ್ಧತಿ ಅಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಾರೆ. ಈ ವ್ಯವಸ್ಥೆಯನ್ನು 1950 ರ ದಶಕದಲ್ಲಿ ಪರಿಚಯಿಸಲಾಯಿತು. ಈ ವ್ಯವಸ್ಥೆ ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿನ್ಹಾ ಅವರ ಕನಸಿನ ಕೂಸು ಆಗಿದೆ. ಕಟ್ರಾನ್‌ನಲ್ಲಿ ಉದ್ಭವಿಸುವ ಸಣ್ಣ ವಿವಾದಗಳಿಗೆ ಗೋಮಸ್ಥರು ಸೌಹಾರ್ದಯುತ ಪರಿಹಾರಗಳನ್ನು ನೀಡುತ್ತಾರೆ.

ಇಲ್ಲಿ ಈ ವ್ಯವಸ್ಥೆಯನ್ನು ಇಂದಿಗೂ ಗೌರವಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಗೋಮಾಸ್ತನು ತಪ್ಪಿತಸ್ಥನನ್ನು ಶಿಕ್ಷಿಸಬಹುದು. ಪಂಚಾಯತ್ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುವ ಕಟ್ರಾನ್​ ತನ್ನ ಗೋಮಾಸ್ತರ ಮೇಲೆ ಅಚಲವಾದ ನಂಬಿಕೆ ಹೊಂದಿದೆ. ಗ್ರಾಮವು ಇಲ್ಲಿಯವರೆಗೆ ಗೋಮಾಸ್ತರು ನೀಡಿದ ನಿರ್ಧಾರಗಳನ್ನು ಅನುಸರಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಕಾಲ ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿರುವುದು ಇದೇ ಕಾರಣಕ್ಕೆ.

ಏನಿದು ಗೋಮಾಸ್ತ ಪದ್ಧತಿ: ಇಲ್ಲಿನ ಜನ ಗೋಮಾಸ್ತನನ್ನು ಅರೆದೇವತೆ ಎಂದು ಪರಿಗಣಿಸುತ್ತಾರೆ. ಅವರ ಆಜ್ಞೆಯು ಎಲ್ಲರಿಗೂ ಸ್ವೀಕಾರಾರ್ಹವಾಗಿದೆ. ಗೋಮಾಸ್ತದ ಸ್ಥಾನಮಾನವನ್ನು ಸರ್ಕಾರವು ಗುರುತಿಸಿಲ್ಲ. ಆದರೂ ಸ್ಥಳೀಯ ಆಡಳಿತವು ಥಾರು ಬುಡಕಟ್ಟು ಜನಾಂಗದಲ್ಲಿ ಅದರ ಪ್ರಾಬಲ್ಯವನ್ನು ಅರಿತುಕೊಂಡಿದೆ. ಈ ಪದ್ಧತಿಯನ್ನು ಥಾರು ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಅನುಸರಿಸಲಾಗುತ್ತಿದೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗಿರುವ ಅಚಲ ನಂಬಿಕೆಯನ್ನು ತೋರಿಸುತ್ತದೆ. ಪ್ರಸ್ತುತ, ಮೂರನೇ ತಲೆಮಾರಿನ ಗೋಮಾಸ್ತರು ಗ್ರಾಮದಲ್ಲಿ ನ್ಯಾಯ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ಪ್ರಕರಣದ ಇತ್ಯರ್ಥದ ಸಮಯದಲ್ಲಿ ಗ್ರಾಮಸ್ಥರು ಮರದ ಕೆಳಗೆ ಅಥವಾ ಸಮುದಾಯ ಭವನದ ಕೆಳಗೆ ಕುಳಿತು ವಿವಾದದಲ್ಲಿ ಭಾಗಿಯಾದ ಕಕ್ಷಿದಾರರನ್ನು ಆಲಿಸಿ ನ್ಯಾಯ ಸಲ್ಲಿಸುತ್ತಾರೆ.

ಕಟ್ರಾನ್​ ಗ್ರಾಮದಲ್ಲಿರುವ ಸರ್ಕಾರಿ ಕಚೇರಿ

ಓದಿ: ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ- ನಾದಿನಿಯರ ಹೊಡೆದಾಟ.. ಕೊಲೆಯಲ್ಲಿ ಅಂತ್ಯಕಂಡ ಜಗಳ!

ಬೆಟ್ಟಿಯಾ ಎಸ್ಪಿ ಶ್ಲಾಘನೆ: ಇದು ಕಲಿಯುಗ. ಇಲ್ಲಿ ರಾಮರಾಜ್ಯದ ಕಲ್ಪನೆಯು ಅರ್ಥಹೀನವಾಗಿದೆ. ಆದರೆ, ಕಟ್ರಾನ್ ಗ್ರಾಮದ ಜನರು ಮಾಡಿರುವ ಕೆಲಸವನ್ನು ನೋಡಿದರೆ ಕಲಿಯುಗದಲ್ಲೂ ರಾಮರಾಜ್ಯ ಸಾಧ್ಯವೇನೋ ಎನಿಸುತ್ತದೆ. ಮನಸ್ಸಿನಲ್ಲಿ ಸ್ವಾರ್ಥ ಮತ್ತು ದುರಾಸೆ ಇಲ್ಲದಿದ್ದರೆ ಶಾಂತಿಯಿಂದ ಕೂಡಿ ಬಾಳುವುದು ಸುಲಭವಾಗುತ್ತದೆ. ಕಟ್ರಾನ್ ಅಂತಹ ಗ್ರಾಮವಾಗಿದ್ದು, ಸ್ವಾತಂತ್ರ್ಯದ ನಂತರ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಗ್ರಾಮದಲ್ಲಿ ಯಾವುದೇ ವಿವಾದವಿದ್ದರೂ ಗ್ರಾಮಸ್ಥರು ತಮ್ಮಲ್ಲೇ ಕುಳಿತು ಬಗೆಹರಿಸಿಕೊಳ್ಳುವುದು ಶ್ಲಾಘನೀಯವಾಗಿದೆ ಅಂತಾ ಬೆಟ್ಟಿಯಾ ಎಸ್‌ಪಿ ಉಪೇಂದ್ರ ನಾಥ್ ವರ್ಮಾ ಹೇಳಿದರು.

ಕಟ್ರಾನ್​ ಗ್ರಾಮ

ಏಕತೆ ಜಪ: ಕಟ್ರಾನ್ ಗ್ರಾಮವು ಯಾವುದೇ ವಿವಾದಗಳಿಲ್ಲದ ಜೀವನ ಮತ್ತು ಸಂಸ್ಕೃತಿಯನ್ನು ಹೊಂದಿರುವ ಗ್ರಾಮವಾಗಿದೆ. ವಿವಾದವಿದ್ದರೆ ಗೋಮಾಸ್ತ ಪದ್ಧತಿಯಿಂದ ಪರಿಹರಿಸಲಾಗುತ್ತದೆ. ಅಲ್ಲಿನ ಜನರು ಶಾಂತಿಪ್ರಿಯರು ಮತ್ತು ವಿವಾದಗಳಿಂದ ದೂರವಿರುತ್ತಾರೆ. ನಾವು ಹೇಗೆ ಶಾಂತಿಯಿಂದ ಬದುಕಬಹುದು ಎಂಬುದಕ್ಕೆ ಈ ಗ್ರಾಮದ ಜನರು ಮತ್ತು ಸಾಮಾಜಿಕ ಸಂಘಟನೆಯು ದೇಶಕ್ಕೆ ಮಾದರಿಯಾಗಿದೆ ಎಂದು ಅಧಿಕಾರಿ ಉಪೇಂದ್ರ ನಾಥ್ ವರ್ಮಾ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.