ETV Bharat / bharat

ಕೇರಳದ ಇಬ್ಬರು ಶಾಲಾ ಮಕ್ಕಳಲ್ಲಿ ನೊರೊವೈರಸ್ ಸೋಂಕು ದೃಢ - ರಾಜ್ಯ ಸಾರ್ವಜನಿಕ ಪ್ರಯೋಗಾಲಯ

ಕೇರಳದ ಎರ್ನಾಕುಲಂನಲ್ಲಿ ಮೂವರು ಮಕ್ಕಳಲ್ಲಿ ನೊರೊವೈರಸ್ ಸೋಂಕು ದೃಢ-ಆತಂಕ ಪಡುವ ಅಗತ್ಯವಿಲ್ಲ - ಎಚ್ಚರಿಕೆ ಅಗತ್ಯ ಎಂದ ಆರೋಗ್ಯ ಇಲಾಖೆ

ನೊರೊವೈರಸ್ ಸೋಂಕು ದೃಢ
ನೊರೊವೈರಸ್ ಸೋಂಕು ದೃಢ
author img

By

Published : Jan 23, 2023, 8:56 PM IST

ಎರ್ನಾಕುಲಂ (ಕೇರಳ) : ಕೊರೊನಾ ವೈರಸ್​ ಹಾಗೂ ಮಂಕಿ ಫಾಕ್ಸ್​ ಭೀತಿಯ ನಡುವೆ ಕೇರಳದ ಎರ್ನಾಕುಲಂನಲ್ಲಿ ಮೂವರು ಮಕ್ಕಳಲ್ಲಿ ನೊರೊವೈರಸ್ ಸೋಂಕು ದೃಢಪಟ್ಟಿದೆ. ಕಾಕ್ಕನಾಡಿನ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಲ್ಲಿ ವೈರಸ್ ಇರುವುದು ದೃಢಪಟ್ಟಿದೆ. ಶಾಲೆಯ ಸುಮಾರು 62 ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆ ಮಾದರಿಗಳನ್ನು ರಾಜ್ಯ ಸಾರ್ವಜನಿಕ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ಎರಡು ಮಾದರಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವೃದ್ಧರಲ್ಲಿ ಸೋಂಕಿನ ಪ್ರಭಾವ ಹೆಚ್ಚಳ: ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ನೊರೊವೈರಸ್ ಹೊಟ್ಟೆಯ ಜಠರಕ್ಕೆ ಸಂಬಂದಿಸಿದ ಸೋಂಕಾಗಿದೆ. ಇದರ ಪರಿಣಾಮವಾಗಿ ವಾಂತಿ ಮತ್ತು ಬೇದಿ ಉಂಟಾಗುತ್ತದೆ. ಆರೋಗ್ಯವಂತ ವಯಸ್ಕರಲ್ಲಿ ವೈರಸ್ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಆದರೆ ಅಸ್ವಸ್ಥತೆ ಹೊಂದಿರುವ ಹಿರಿಯರು ಮತ್ತು ಮಕ್ಕಳು ಸೋಂಕಿನ ಮೂಲಕ ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ತೂಕ ನಷ್ಟಕ್ಕಾಗಿ ಉಪವಾಸ ಮಾಡುವುದಕ್ಕಿಂತ ಕ್ಯಾಲೋರಿ ಕಡಿಮೆ ಮಾಡುವುದು ಉಪಯುಕ್ತ: ಅಧ್ಯಯನ

ರೋಗವು ಬಹಳ ವೇಗವಾಗಿ ಹರಡುವ ಅಪಾಯ: ನೊರೊವೈರಸ್ ಒಂದು ಝೂನೋಟಿಕ್ ಸೋಂಕು (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗವಾಗಿದೆ) ಮತ್ತು ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದ ಮೂಲಕವೂ ಇದು ಮನುಷ್ಯರಿಗೆ ಹರಡಬಹುದು. ವಾಂತಿ ಮತ್ತು ಮಲ ವಿಸರ್ಜನೆಯ ಸಂಪರ್ಕವು ವೈರಸ್ ಹರಡುವಿಕೆಗೆ ಕಾರಣವಾಗುತ್ತದೆ. ರೋಗವು ಬಹಳ ವೇಗವಾಗಿ ಹರಡುವುದರಿಂದ ಎಚ್ಚರಿಕೆಯ ಅಗತ್ಯವಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ವೈದ್ಯಕೀಯ ಆರೈಕೆಯ ಅಗತ್ಯವಿದೆ : ಸೋಂಕಿನ ಮುಖ್ಯ ಲಕ್ಷಣಗಳೆಂದರೆ ಅತಿಸಾರ, ಹೊಟ್ಟೆ ನೋವು, ವಾಂತಿ, ವಾಕರಿಕೆ, ಜ್ವರ, ತಲೆನೋವು ಮತ್ತು ದೇಹದ ನೋವು. ವೈದ್ಯಕೀಯ ಸಲಹೆಯ ಪ್ರಕಾರ, ರೋಗಿಗಳು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಒಆರ್​ಎಸ್​ ದ್ರಾವಣ ಮತ್ತು ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಅತಿಸಾರ ಮತ್ತು ವಾಂತಿ ಉಲ್ಬಣಗೊಂಡರೆ, ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಚೇತರಿಸಿಕೊಂಡ ಎರಡು ದಿನಗಳ ನಂತರವೂ ವೈರಸ್ ಹರಡಬಹುದು. ಆದ್ದರಿಂದ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡ ಎರಡು ದಿನಗಳ ನಂತರ ಮಾತ್ರ ಹೊರಗೆ ಹೋಗಬೇಕು ಎಂದು ಸಲಹೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: ವೈರಲ್​ ಸೋಂಕಿನಿಂದ ಬಳಲುತ್ತಿದ್ದೀರಾ? ಮನೆಯಲ್ಲೇ ಇದೆ ಮದ್ದು! ಇದರಿಂದ ಜ್ವರ, ನೆಗಡಿ ಮಾಯ

ಕುದಿಸಿ ಆರಿಸಿದ ನೀರಿನ ಸೇವನೆ ಉತ್ತಮ: ಸೋಂಕನ್ನು ತಡೆಗಟ್ಟಲು ವೈಯಕ್ತಿಕ ನೈರ್ಮಲ್ಯ ಬಹಳ ಮುಖ್ಯ. ಶೌಚಾಲಯವನ್ನು ಬಳಸುವ ಮೊದಲು ಮತ್ತು ನಂತರ ಎರಡು ಬಾರಿ ಸಾಬೂನಿನಿಂದ ಕೈಗಳನ್ನು ತೊಳೆಯಬೇಕು. ಪ್ರಾಣಿಗಳೊಂದಿಗೆ ಬೆರೆಯುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಬಾವಿಗಳು, ನೀರಿನ ತೊಟ್ಟಿಗಳು ಸೇರಿದಂತೆ ಕುಡಿಯುವ ನೀರಿನ ಮೂಲಗಳನ್ನು ಕ್ಲೋರಿನೇಷನ್ ಮಾಡಬೇಕು ಮತ್ತು ಅಡುಗೆಗೆ ಕ್ಲೋರಿನೇಟೆಡ್ ನೀರನ್ನು ಮಾತ್ರ ಬಳಸಬಹುದು. ಜನರು ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕು ಮತ್ತು ತರಕಾರಿ ಹಾಗೂ ಆಹಾರವನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯಬೇಕು.

ಸಮುದ್ರದ ಮೀನನ್ನು ತಿನ್ನುವ ಮೊದಲು ಚೆನ್ನಾಗಿ ಬೇಯಿಸಬೇಕು: ಸಾರ್ವಜನಿಕರು ಹೆಚ್ಚು ಹೊತ್ತು ತೆರೆದಿರುವ ಆಹಾರ ಸೇವನೆ ಮಾಡಬಾರದು. ಸಮುದ್ರದ ಮೀನು ಮತ್ತು ಚಿಪ್ಪು ಮೀನುಗಳನ್ನು ಸೇವಿಸುವ ಮೊದಲು ಚೆನ್ನಾಗಿ ಬೇಯಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಓದಿ: ಸಮಯ ನಿರ್ಬಂಧಿತ ಆಹಾರ ಪದ್ಧತಿ ಅನುಸರಿಸಿ.. ಕ್ಯಾನ್ಸರ್‌ನಂತಹ ಗಂಭೀರ ಖಾಯಿಲೆಯಿಂದ ದೂರವಿರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.