ETV Bharat / bharat

ನೊಬೆಲ್​ ಪುರಸ್ಕೃತ ಅಮರ್ತ್ಯ ಸೇನ್​​​ಗೆ ಆಧಾರ್​ ಕಾರ್ಡ್​ ವಿತರಿಸಿದ ಅಂಚೆ ಇಲಾಖೆ!

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್​​ ಆಧಾರ್​ ಕಾರ್ಡ್​ ವಿತರಣೆ - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅಂಚೆ ಇಲಾಖೆ - ಸೇನ್​ ಅವರನ್ನು ಆಧಾರ್​ಕಾರ್ಡ್​ಗೆ ನೋಂದಾಯಿಸಿರುವ ನಮಗೆ ಗೌರವ ಎಂದ ಅಂಚೆ ಇಲಾಖೆ

nobel-laureate-amartya-sen-gets-aaadhaar-indian-post-posts-video-on-social-media
ನೊಬೆಲ್​ ಪುರಸ್ಕೃತ ಅಮರ್ತ್ಯ ಸೇನ್​​ ಅವರಿಗೆ ಆಧಾರ್​ ಕಾರ್ಡ್​ ವಿತರಿಸಿದ ಅಂಚೆ ಇಲಾಖೆ
author img

By

Published : Mar 2, 2023, 5:53 PM IST

ಬೋಲ್​ಪುರ್​(ಪಶ್ಚಿಮ ಬಂಗಾಳ): ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ, ಭಾರತರತ್ನ ಅಮರ್ತ್ಯ ಸೇನ್ ಅವರಿಗೆ ಭಾರತೀಯ ಅಂಚೆ ಇಲಾಖೆ ಆಧಾರ್ ಕಾರ್ಡ್ ವಿತರಣೆ ಮಾಡಿದೆ. ಈ ಬಗ್ಗೆ ಅಂಚೆ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತರತ್ನ, ನೋಬೆಲ್​ ಪ್ರಶಸ್ತಿ ಪುರಸ್ಕೃತ ಅರ್ಥ ಶಾಸ್ತ್ರಜ್ಞರಿಂದ ಆಧಾರ್​ ಕಾರ್ಡ್​ಗೆ ವಿನಂತಿ ಪಡೆಯುವುದು ಮತ್ತು ಅವರನ್ನು ಆಧಾರ್​ ಕಾರ್ಡ್​ಗೆ ನೋಂದಾಯಿಸಿರುವುದು ನಮಗೆ ದೊಡ್ಡ ಗೌರವವಾಗಿದೆ ಎಂದು ಹೇಳಿದೆ.

ನೊಬೆಲ್​​ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಶಾಂತಿನಿಕೇತನದಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದ ಅವರು, ಬೋಲ್ಪುರ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರು. ಅಮರ್ತ್ಯ ಸೇನ್ ಅವರ ಮನವಿಯಂತೆ ಅಂಚೆ ಇಲಾಖೆಯ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಸುವ ಎಲ್ಲ ಸಾಧನಗಳ ಜತೆ ಮನೆಗೆ ಬಂದಿದ್ದಾರೆ. ಈ ವೇಳೆ ಫೋಟೋ ಮತ್ತು ಬಯೋಮೆಟ್ರಿಕ್ ಯಂತ್ರಗಳ ಮೂಲಕ ಸೇನ್​​ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿ ಸ್ಥಳದಲ್ಲೇ ವಿತರಿಸಲಾಯಿತು.

ಪಶ್ಚಿಮ ಬಂಗಾಳದ ಅಂಚೆ ಇಲಾಖೆಯು ಫೇಸ್‌ಬುಕ್‌ನಲ್ಲಿ ಅಮರ್ತ್ಯ ಸೇನ್​ ಅವರಿಗೆ ಆಧಾರ್​ ಕಾರ್ಡ್​ ವಿತರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಬಿರ್ಭುಮ್ ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಸುಬ್ರತಾ ದತ್ತಾ, ಭಾರತ ರತ್ನ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್​ ಅವರಿಂದ ಆಧಾರ್ ಕಾರ್ಡ್​ಗೆ ವಿನಂತಿ ಪಡೆಯುವುದು ನಮಗೆ ದೊಡ್ಡ ಗೌರವವಾಗಿದೆ.

ಸೇನ್ ಅವರು ತುಂಬಾ ಸಭ್ಯ ವ್ಯಕ್ತಿ. ನಾವು ಆಧಾರ ಕಾರ್ಡ್​ ನೀಡಲು ಬೇಕಾದ ಮೂಲ ಸೌಕರ್ಯದೊಂದಿಗೆ ಅವರ ಮನೆಗೆ ತೆರಳಿದ್ದೆವು. ಎಲ್ಲ ಅಂಚೆ ಇಲಾಖೆ ಸಿಬ್ಬಂದಿಯ ಸಹಕಾರದಿಂದ ನಾವು ಇದನ್ನು ಮಾಡಿದ್ದೇವೆ. ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯನ್ನು ಆಧಾರ್ ಕಾರ್ಡ್​ಗೆ ನೋಂದಾಯಿಸಿರುವುದು ನಮ್ಮ ಅದೃಷ್ಟ. ಈ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅಂಚೆ ಇಲಾಖೆ ಜಾಹೀರಾತು ನೀಡಿದೆ. ಈ ಜಾಹೀರಾತಿನಲ್ಲಿ ಸೇನ್​ ಅವರಿಗೆ ಭಾರತ ರತ್ನ ನೀಡಿರುವ ಬಗ್ಗೆ, ಭಾರತೀಯ ಗುರುತಿನ ಮೂಲ ಸೌಕರ್ಯಗಳನ್ನು ಬಲಪಡಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ದನಿಯೆತ್ತಿದ್ದರು. ಅದರ ಹೊರತಾಗಿಯೂ ಭಾರತೀಯ ಅಂಚೆ ಇಲಾಖೆಯು ಅವರ ಶಾಂತಿನಿಕೇತನ ನಿವಾಸಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ನೀಡುವ ಮೂಲಕ ಗೌರವ ಸಲ್ಲಿಸಿದೆ.

ಪ್ರೊಫೆಸರ್ ಸೇನ್ ಅವರು ಶಿಕ್ಷಣದಲ್ಲಿನ ಗುಣಮಟ್ಟದ ತೀವ್ರ ಕುಸಿತದ ಬಗ್ಗೆ ವಿಶ್ವಭಾರತಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕಟುವಾಗಿ ಟೀಕಿಸಿದ್ದರು. ಈ ವೇಳೆ, ಅಮರ್ತ್ಯ ಸೇನ್ ಮತ್ತು ವಿವಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರು ಹಲವು ಬಾರಿ ಪರಸ್ಪರ ವಾಗ್ದಾಳಿ ಕೂಡಾ ನಡೆಸಿದ್ದರು.

ಇದನ್ನೂ ಓದಿ : ಅಮರ್ತ್ಯ ಸೇನ್‌ ವಿರುದ್ಧ ವಿಶ್ವ ಭಾರತಿ ಉಪಕುಲಪತಿ ಅಸಮಾಧಾನ.. ವಿವಾದಿತ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.