ಹಜಾರಿಬಾಗ್: ರಸ್ತೆ ಮತ್ತು ಆಸ್ಪತ್ರೆ ಕೊರತೆಯಿಂದಾಗಿ ಇಲ್ಲಿನ ಜಾರ್ಖಂಡ್‌ನ ಗ್ರಾಮಸ್ಥರು ಗರ್ಭಿಣಿ ಮಹಿಳೆ ಹೆರಿಗೆಗಾಗಿ ಆಕೆ ಮಲಗಿರುವ ಮಂಚದ ಮೇಲೆಯೇ ಆಸ್ಪತ್ರೆಗೆ ಹೊತ್ತುಕೊಂಡು ಹೋಗಬೇಕಾದ ಪ್ರಸಂಗ ಎದುರಾಯ್ತು.
ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಗ್ರಾಮಸ್ಥರು ಗುಡಿಯಾದೇವಿಯನ್ನು ಮಂಚದ ಮೇಲೆ ಹೊತ್ತುಕೊಂಡು ಹೋದರು. ಗ್ರಾಮಸ್ಥರು ಆಕೆಯನ್ನು ಮಂಚದ ಮೇಲೆ ಹೊತ್ತೊಯ್ಯಲು ಮುಂದಾದಾಗ ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದಳು. ಗ್ರಾಮಸ್ಥರು ಸೂಕ್ತವಾದ ರಸ್ತೆ ದೊರೆಯುವವರೆಗೂ ಹೊತ್ತುಕೊಂಡು ಹೋದರು. ಬಳಿಕ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ಕಾರಿನ ವ್ಯವಸ್ಥೆ ಮಾಡಲಾಗಿತ್ತು.
ಸಮಾಜ ಸೇವಕ ಭವೇಶ್ ಕುಮಾರ್ ಹೆಂಬ್ರಾಂ ಮಾತನಾಡಿ, ಈ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಜಾರ್ಖಂಡ್‌ನ ಆರು ಗ್ರಾಮಗಳಿಗೆ ಮೂಲ ಸೌಕರ್ಯಗಳ ಕೊರತೆಯಿದೆ ಮತ್ತು ಸರಿಯಾದ ರಸ್ತೆ ಮತ್ತು ಆಸ್ಪತ್ರೆ ಇಲ್ಲ. ಇದರಿಂದಾಗಿ ಈ ಗ್ರಾಮಗಳಲ್ಲಿ ಮೂಲ ವೈದ್ಯಕೀಯ ಚಿಕಿತ್ಸೆ ಪಡೆಯಲು ಜನರು ಪ್ರಾಣವನ್ನೇ ಪಣಕ್ಕಿಡಬೇಕಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.