ETV Bharat / bharat

ಮಹಿಳೆಯರಿಗೆ ಗೌರವ ನೀಡುವ ಮಾದರಿ ಜಿಲ್ಲೆಯಿದು: 3 ವರ್ಷಗಳಿಂದ ದಾಖಲಾಗಿಲ್ಲ ಲೈಂಗಿಕ ಕಿರುಕುಳ ಕೇಸ್​!

ಕಳೆದ ಮೂರು ವರ್ಷಗಳಲ್ಲಿ, ಲಾಹೌಲ್ - ಸ್ಪಿತಿಯಲ್ಲಿ ಒಂದು ಅತ್ಯಾಚಾರ ಪ್ರಕರಣವೂ ದಾಖಲಾಗಿಲ್ಲ. ಮಕ್ಕಳ ಲಿಂಗ ಅನುಪಾತವೂ ದೇಶದಲ್ಲಿ ಅತಿ ಹೆಚ್ಚು. ಇಲ್ಲಿ ಒಂದು ಸಾವಿರ ಹುಡುಗರಿಗೆ 1033 ಹುಡುಗಿಯರಿದ್ದಾರೆ. ಇಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣವೂ ಅತ್ಯುತ್ತಮವಾಗಿದೆ. ಭಾರತದ ಇತರ ರಾಜ್ಯಗಳು ಈ ಭೂಮಿಯಿಂದ ಮಹಿಳಾ ಸಬಲೀಕರಣದ ಅರ್ಥಪೂರ್ಣ ಸಂದೇಶ ಕಲಿಯಬೇಕಾಗಿದೆ.

author img

By

Published : Mar 23, 2021, 10:33 AM IST

lahaul spiti
ಲಾಹೌಲ್-ಸ್ಪಿತಿ

ಲಾಹೌಲ್-ಸ್ಪಿತಿ (ಶಿಮ್ಲಾ): 1.3 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಮಹಿಳಾ ಸಬಲೀಕರಣಕ್ಕಾಗಿ ಏನು ಮಾಡಬೇಕೆಂಬುದನ್ನು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿಯಿಂದ ಕಲಿಯಬೇಕಾಗಿದೆ.

ದೇಶದ ಶೀತಪ್ರದೇಶ ಲಾಹೌಲ್-ಸ್ಪಿತಿಯಲ್ಲಿ, ಮಹಿಳೆಯರ ಆಡಳಿತವು ಮನೆಯಿಂದ ಹಳ್ಳಿಗೆ ಮತ್ತು ಹಳ್ಳಿಯಿಂದ ಜಿಲ್ಲೆಗೆ ತಲುಪುತ್ತಿದೆ. ಮನೆಯ ಎಲ್ಲ ನಿಯಂತ್ರಣ ಮಹಿಳೆಯರ ಕೈಯಲ್ಲಿದೆ. ಇದು ಮಾತ್ರವಲ್ಲ, ಮಹಿಳೆಯರ ಅಧಿಕಾರವು ಕೃಷಿ ಮತ್ತು ತೋಟಗಾರಿಕೆಯಲ್ಲೂ ಕಮಾಲ್​ ಮಾಡುತ್ತಿದೆ. ಇಲ್ಲಿ ಮಕ್ಕಳ ಲಿಂಗ ಅನುಪಾತವು ದೇಶಾದ್ಯಂತ ಅತಿ ಹೆಚ್ಚು. ದೊಡ್ಡ ವಿಷಯವೆಂದರೆ ಮಹಿಳೆಯರ ಮೇಲಿನ ಅಪರಾಧವು ಅತ್ಯಂತ ಕಡಿಮೆ ಇದೆಯಂತೆ.

ಕಳೆದ ಮೂರು ವರ್ಷಗಳಲ್ಲಿ, ಲಾಹೌಲ್-ಸ್ಪಿತಿಯಲ್ಲಿ ಒಂದೇ ಒಂದು ಅತ್ಯಾಚಾರ ಪ್ರಕರಣವೂ ದಾಖಲಾಗಿಲ್ಲ. ಮಕ್ಕಳ ಲಿಂಗ ಅನುಪಾತವೂ ದೇಶದಲ್ಲಿ ಅತಿ ಹೆಚ್ಚು. ಇಲ್ಲಿ ಒಂದು ಸಾವಿರ ಹುಡುಗರಿಗೆ 1033 ಹುಡುಗಿಯರಿದ್ದಾರೆ. ಇಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣವೂ ಅತ್ಯುತ್ತಮವಾಗಿದೆ. ಭಾರತದ ಇತರ ರಾಜ್ಯಗಳು ಈ ಭೂಮಿಯಿಂದ ಮಹಿಳಾ ಸಬಲೀಕರಣದ ಅರ್ಥಪೂರ್ಣ ಸಂದೇಶವನ್ನು ಕಲಿಯಬೇಕಾಗಿದೆ.

ಇದನ್ನು ಓದಿ: ಪತ್ನಿ ಯೋಗದಲ್ಲಿ, ಪತಿ ಡ್ಯಾನ್ಸ್​ನಲ್ಲಿ ಬ್ಯುಸಿ: ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ ಬಿಂದಾಸ್​ ವಿಡಿಯೋ

ಲಾಹೌಲ್ ಸಂಸ್ಕೃತಿ ಮಹಿಳೆಯರಿಗೆ ಗೌರವವನ್ನು ಕಲಿಸುತ್ತದೆ. ಇಲ್ಲಿ ಮಗಳ ಜನನವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಹೆಣ್ಣುಮಕ್ಕಳಿಗೆ ಭವಿಷ್ಯ ರೂಪಿಸಲು ಪ್ರೋತ್ಸಾಹಿಸಲಾಗುತ್ತದೆ.

ಹೆಣ್ಣು ಜನಿಸಿದರೆ ಶುಭ ಆಚರಣೆ: ಲಾಹೌಲ್ - ಸ್ಪಿತಿಯಲ್ಲಿ, ಹೆಣ್ಣುಮಕ್ಕಳ ಜನನವನ್ನು ಆಚರಿಸಲಾಗುತ್ತದೆ. ಅವರಿಗೆ ಜೀವನದಲ್ಲಿ ಮುಂದುವರಿಯಲು ಎಲ್ಲ ಅವಕಾಶಗಳನ್ನು ನೀಡಲಾಗುತ್ತದೆ. ವರದಕ್ಷಿಣೆ ಪಿಡುಗು ಸಹ ಇಲ್ಲಿ ಕಂಡು ಬರುವುದಿಲ್ಲ. ಲಾಹೌಲ್-ಸ್ಪಿತಿ ಜಿಲ್ಲೆಯ ಜನಸಂಖ್ಯೆ ಐವತ್ತು ಸಾವಿರಕ್ಕೂ ಹೆಚ್ಚು. ಮನೆಯ ಸಂಪೂರ್ಣ ಆಜ್ಞೆಯು ಮಹಿಳೆಯರ ಕೈಯಲ್ಲಿದೆ. ಮಹಿಳೆಯರು ಪ್ರಮುಖ ಸಾಮಾಜಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಕೃಷಿ ಆಗಿರಲಿ ಅಥವಾ ದೇಶೀಯ ವಿಷಯವಾಗಲಿ, ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯರೇ ಆಗಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರು ಮನೆಯ ಆರ್ಥಿಕ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ.

ಲಾಹೌಲ್-ಸ್ಪಿತಿ ವಿದ್ಯಾರ್ಥಿ ಸಂಘದ ಅಧಿಕಾರಿಗಳ ಪ್ರಕಾರ, ಸುಶಾಂತ್ ಕುಮಾರ್, ಅಜಯ್ ಪಾಲ್ ಮತ್ತು ಪ್ರಮೋದ್ ತಮ್ಮ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಅಜಯ್ ಪಾಲ್ ಪ್ರಸ್ತುತ ಮೀರತ್‌ನಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಲಾಹೌಲ್- ಸ್ಪಿತಿಯಲ್ಲಿ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಇನ್ನು ಈ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ದುಷ್ಕೃತ್ಯಗಳು ಕಂಡು ಬರುವುದಿಲ್ಲ. .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.